ರೈತರನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತು ಪ್ರಧಾನ ಮಂತ್ರಿ ಭೀಮಾ ಫಸಲ್ ಯೋಜನೆ ಮೂಲಕ ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನ ನಡೆಸುತ್ತಿದೆ. ಇತ್ತೀಚೆಗಷ್ಟೇ ಛತ್ತೀಸ್ಗಢ ಸರ್ಕಾರವು ಗೋ ಪಾಲಕರ ಆದಾಯ ಹೆಚ್ಚಿಸಲು ಗೋಧನ್ ನ್ಯಾಯ ಯೋಜನೆಯನ್ನು ಕೂಡಾ ಜಾರಿಗೆ ತಂದಿದೆ. ಈ ಯೋಜನೆಯಡಿ ಗೋಮೂತ್ರ ಮತ್ತು ಸಗಣಿಯನ್ನು ಗೋ ಪಾಲಕರಿಂದ ಸರಕಾರವೇ ಖರೀದಿಸುತ್ತಿದೆ.