ನವದೆಹಲಿ: ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಉತ್ತರ ಪ್ರದೇಶದ ಶಾಸಕ ಸುರೇಂದ್ರ ಸಿಂಗ್ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು 'ರಾವಣ' ಎಂದು ಸಂಭೋದಿಸಿದ್ದು, ಯುಪಿ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿಯವರನ್ನು 'ಶೂರ್ಪನಖಿ'ಗೆ ಹೋಲಿಸಿದ್ದಾರೆ.
ಕಾಂಗ್ರೆಸ್ ಒಂದು ಮುಳುಗುವ ಹಡಗು. ಎಸ್ಸಿ / ಎಸ್ಟಿ ಕಾಯಿದೆ ಕಾರಣದಿಂದಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಇತ್ತೀಚೆಗೆ ಅಂತ್ಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸಾಧ್ಯವಾಯಿತು. ಕಾಂಗ್ರೆಸ್ಗೆ ಯಾವುದೇ ರಾಜಕೀಯ ಸ್ಥಾನವಿಲ್ಲ, ದೇಶದಲ್ಲಿ ಬೇರೆಡೆ ಆ ಪಕ್ಷ ಗೆಲ್ಲಲಾರದು ಎಂದು ಬಾಲಿಯಾದ ಬಿಜೆಪಿ ಶಾಸಕ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡುತ್ತಾ, ರಾವಣನ ವಿರುದ್ಧ ಲಾರ್ಡ್ ರಾಮ ತನ್ನ ಯುದ್ಧವನ್ನು ಆರಂಭಿಸಿದಾಗ, ರಾಮನನ್ನು ಎದುರಿಸಲು ರಾಕ್ಷಸ ಅರಸನು ಮೊದಲು ತನ್ನ ಸಹೋದರಿ ಶೂರ್ಪನಖಿಯನ್ನು ಕಳುಹಿಸಿದನು. ಈ ಯುದ್ಧದಲ್ಲಿ (ಮುಂಬರುವ ಲೋಕಸಭಾ ಚುನಾವಣೆಗೆ ಉಲ್ಲೇಖಿಸಿ) ರಾಹುಲ್ 'ರಾವಣ' ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಮನ ಪಾತ್ರದಲ್ಲಿದ್ದಾರೆ ಮತ್ತು ರಾಹುಲ್ ಅವರ ಸಹೋದರಿ 'ಶೂರ್ಪನಖಿ' (ಪ್ರಿಯಾಂಕ)ಅವರನ್ನು ಮುಂದೆ ಇರಿಸಿ ಪ್ರಧಾನಿ ಮೋದಿಯವರನ್ನು ಸೋಲಿಸಲು ಪ್ರಯತ್ನಿಸಿದ್ದಾರೆ ಎಂದು ಸಿಂಗ್ ಹೇಳಿದರು.