ಶ್ರೀನಗರ: ಕುಲಗಾಮ್ನಲ್ಲಿ ಇಂದು ಭದ್ರತಾ ಪಡೆ ಎನ್ಕೌಂಟರ್ಗೆ ಐವರು ಉಗ್ರರು ಬಲಿಯಾಗಿದ್ದು, ಸ್ಥಳದಲ್ಲಿ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಧಿಕಾರಿ ರಾಜೇಶ್ ಖಾಲಿಯಾ ತಿಳಿಸಿದ್ದಾರೆ.
ಕುಲಗಾಮ್ ಜಿಲ್ಲೆಯಲ್ಲಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬೆಳಗ್ಗೆ 6 ಗಂಟೆಯಿಂದ ಪೊಲೀಸರು, ಸಿಆರ್ಪಿಎಫ್ ಸಿಬ್ಬಂದಿ, ರಾಷ್ಟ್ರೀಯ ರೈಫಲ್ಸ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಎನ್ಕೌಂಟರ್ ಕಾರ್ಯಾಚರಣೆ ಶುರುವಾದ ಕೂಡಲೇ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
ಭಾರತೀಯ ಸೇನೆಯನ್ನು ಕಂಡ ಕೂಡಲೇ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿದ ಭಾರತೀಯ ಸೇನೆ ಮಧ್ಯಾಹ್ನದ ಹೊತ್ತಿಗೆ ಐವರು ಭಯೋತ್ಪಾದಕರನ್ನು ಸದೆಬಡಿದಿದೆ ಎಂದು ಅವರು ತಿಳಿಸಿದ್ದಾರೆ.