Team India: ಟೀಂ ಇಂಡಿಯಾದ ಅನೇಕ ಆಟಗಾರರ ಪ್ರೇಮಕಥೆಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಅದರಲ್ಲ್ಲೂ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರೇಮ ಜೀವನ ಕೊಂಚ ವಿಶೇಷ ಎಂದರೆ ತಪ್ಪಾಗಲ್ಲ. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.
ಟೀಂ ಇಂಡಿಯಾದ ಅನೇಕ ಆಟಗಾರರ ಪ್ರೇಮಕಥೆಗಳ ಬಗ್ಗೆ ನೀವೆಲ್ಲ ಕೇಳಿರುತ್ತೀರಿ. ಅದರಲ್ಲ್ಲೂ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಪ್ರೇಮ ಜೀವನ ಕೊಂಚ ವಿಶೇಷ ಎಂದರೆ ತಪ್ಪಾಗಲ್ಲ. ರವೀಂದ್ರ ಜಡೇಜಾ ರಜಪೂತಾನ ಕುಟುಂಬಕ್ಕೆ ಸೇರಿದವರು.
ರಜಪೂತಾನ ಕುಟುಂಬಕ್ಕೆ ಸೇರಿದ ರವೀಂದ್ರ ಜಡೇಜಾ ಅವರು ಆಗಿದ್ದು ಲವ್ ಕಂ ಅರೇಂಜ್ಡ್ ಮ್ಯಾರೇಜ್. 17 ಏಪ್ರಿಲ್ 2016 ರಂದು ರಿವಾಬ ಸೋಲಂಕಿ ಎಂಬಾಕೆಯ ಜೊತೆ ದಾಂಪತ್ಯಕ್ಕೆ ಕಾಲಿಟ್ಟರು ಜಡೇಜಾ. ಇಂದಿಗೆ ಇವರಿಬ್ಬರ ದಾಂಪತ್ಯ ಜೀವನಕ್ಕೆ 7 ವರ್ಷ ಪೂರೈಸಿದೆ.
ಜಡೇಜಾ ಅವರ ಪತ್ನಿ ರಿವಾಬ ಸೋಲಂಕಿ, ಅವರ ಸಹೋದರಿಯ ಸ್ನೇಹಿತೆ. ಇಬ್ಬರೂ ಪಾರ್ಟಿಯ ಸಂದರ್ಭದಲ್ಲಿ ಒಬ್ಬರಿಗೊಬ್ಬರರು ಭೇಟಿಯಾದರು. ಜಡೇಜಾ ಅವರ ಸಹೋದರಿ ಇಬ್ಬರನ್ನೂ ಸ್ನೇಹಿತರಾಗಿ ಮಾಡಿದರು. ಅಲ್ಲಿಂದ ಶುರುವಾಯಿತು ಲವ್ ಸ್ಟೋರಿ.
ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ, ಸ್ವಲ್ಪ ಸಮಯದ ಹಿಂದೆ ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟರು. 2019 ರ ಲೋಕಸಭೆ ಚುನಾವಣೆಗೆ ಮುನ್ನ ರಿವಾ ಬಿಜೆಪಿ ಸೇರುವ ಮೂಲಕ ರಾಜಕೀಯದಲ್ಲಿ ಸಕ್ರಿಯರಾದರು. ಮೂರು ವರ್ಷಗಳ ನಂತರ ಬಿಜೆಪಿ ಜಾಮ್’ನಗರ ಉತ್ತರ ಕ್ಷೇತ್ರದಿಂದ ಅವರನ್ನು ನಾಮನಿರ್ದೇಶನ ಮಾಡಿತು. ಅಲ್ಲಿಂದ ಅವರು ಗೆಲುವು ಸಾಧಿಸಿದರು.
ರವೀಂದ್ರ ಜಡೇಜಾ ಐಪಿಎಲ್ ಅವಧಿಯಲ್ಲಿಯೇ ಮದುವೆಯಾಗಿದ್ದರು. ಆಗ ರವೀಂದ್ರ ಜಡೇಜಾ ಗುಜರಾತ್ ಲಯನ್ಸ್ ತಂಡದ ಭಾಗವಾಗಿದ್ದರು.
ರಿವಾಬ ಸೋಲಂಕಿ ಮೆಕ್ಯಾನಿಕಲ್ ಇಂಜಿನಿಯರ್ ಓದಿದ್ದಾರೆ. ರವೀಂದ್ರ ಜಡೇಜಾ ಮತ್ತು ರಿವಾಬ ಅವರಿಗೆ ನಿಧಯಾನಾ ಎಂಬ ಮುದ್ದಾದ ಮಗಳಿದ್ದಾಳೆ.