ಕುಡಿಯುವ ನೀರಿನ ಪೈಪ್ ಒಡೆದು ರಸ್ತೆಗೆ ಕಾರಂಜಿ ರೀತಿ ನೀರು ಚಿಮ್ಮಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಪಂಪ್ ಹೌಸ್ ಸರ್ಕಲ್ ಬಳಿ ನಡೆದಿದೆ.
ಪೈಪ್ ಲೈನ್ ಒಡೆದು ನೀರು ಚಿಮ್ಮತ್ತಾ ಪೋಲಾಗುತ್ತಿದ್ರು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ.
ಪೈಪ್ ನಿಂದ ಭಾರೀ ಪ್ರಮಾಣದ ನೀರು ರಸ್ತೆಗೆ ಚಿಮ್ಮುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.
ಕೆ.ಆರ್.ಎಸ್ -ಮೈಸೂರು ರಸ್ತೆ ಪಕ್ಕದಲ್ಲಿರುವ ಪೈಪ್ ಲೈನ್ ಒಡೆದು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ.
ಪೈಪ್ ಲೈನ್ ಬಲಮುರಿಯಿಂದ ಮೈಸೂರಿನ ವಾಣಿ ವಿಲಾಸ ನೀರು ಸರಬರಾಜು ಕೇಂದ್ರಕ್ಕೆ ಹೋಗಿದೆ