Mars Transit 2023: ಶೀಘ್ರದಲ್ಲೇ ತನ್ನ ನೀಚ ರಾಶಿಗೆ ಸಾಗಿ ಈ ಜನರಿಗೆ ಬಂಪರ್ ಲಾಭ ಕಲ್ಪಿಸಲಿದ್ದಾನೆ ಮಂಗಳ!

Mars Transit May 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ದೇವ ಮೇ 10.2023 ರಂದು ಮಿಥುನ ರಾಶಿಯನ್ನು ತೊರೆದು ಕರ್ಕ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ಈ ಗೋಚರ ಹಲವು ರಾಶಿಗಳ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ. ಹಾಗಾದರೆ ಬನ್ನಿ ಯಾವ ರಾಶಿಗಳಿಗೆ ಮಂಗಳನ ಈ ಗೋಚರ ಅಪಾರ ಧನಪ್ರಾಪ್ತಿ, ಸುಖ-ಸಮೃದ್ಧಿ ಕಲ್ಪಿಸಲಿದೆ ಎಂಬುದನ್ನೂ ತಿಳಿದುಕೊಳ್ಳೋಣ, 

Mars Transit To Cancer 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲಕಾಲಕ್ಕೆ ತಮ್ಮ ರಾಶಿಗಳನ್ನು ಪರಿವರ್ತಿಸುವ ಮೂಲಕ  ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಶುಭ ಅಶುಭ ಪ್ರಭಾವವನ್ನು ಬೀರುತ್ತವೆ. ಪ್ರಸ್ತುತ ನವಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ದೇವ ಮಿಥುನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಆತ ಮೇ 10, 2023 ರಂದು ಮಧ್ಯಾಹ್ನ 1 ಗಂಟೆ 44 ನಿಮಿಷಕ್ಕೆ ಕರ್ಕ ರಾಶ್ಯನ್ನು ಪ್ರವೇಶಿಸಲಿದ್ದಾನೆ ಮತ್ತು ಅಲ್ಲಿ ಜುಲೈ 1, 2023ರ ಎಲಗ್ಗೆ 1 ಗಂಟೆ 52 ನಿಮಿಷದವರೆಗೆ ಇರಲಿದ್ದಾನೆ. ಸಾಮಾನ್ಯವಾಗಿ ಜೋತಿಷ್ಯ ಶಾಸ್ತ್ರದಲ್ಲಿ ಕರ್ಕ ರಾಶಿಯನ್ನು ಮಂಗಳನ ನೀಚ ರಾಶಿ ಎಂದು ಭಾವಿಸಲಾಗುತ್ತದೆ. ಹೀಗಾಗಿ ಮಂಗಳನ ಈ ಗೋಚರ ಎಲ್ಲಾ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿ ಮಂಗಳನ ಈ ಗೋಚರ ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಮಂಗಳನ ಕರ್ಕ ಗೋಚರ ಹಲವು ರಾಶಿಗಳ ಜನರ ಜೀವನದಲ್ಲಿ ಸಾಕಷ್ಟು ಖುಷಿಗಳನ್ನು ತರಲಿದೆ. ಏಕೆಂದರೆ ಮಂಗಳನನ್ನು ಸಾಹಸ, ಪರಾಕ್ರಮದ ಕಾರಕ ಗ್ರಹ ಎಂದು ಭಾವಿಸಲಾಗುತ್ತದೆ. ಮಂಗಳನ ಈ ಕರ್ಕ ಗೋಚರ ಯಾವ ರಾಶಿಯ ಜನರಿಗೆ ಬಂಪರ್ ಲಾಭವನ್ನು ದಯಪಾಲಿಸಲಿದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-Grah Gochar In May: ಮೇ ತಿಂಗಳಿನಲ್ಲಿ ಶುಕ್ರ ಸೇರಿದಂತೆ ಈ ಗ್ರಹಗಳ ರಾಶಿ ಪರಿವರ್ತನೆ, 5 ರಾಶಿಗಳ ಜನರಿಗೆ ಅಪಾರ ಧನ-ಘನತೆ-ಗೌರವ ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ಮೇಷ ರಾಶಿ- ಮೇಷ ರಾಶಿಯ ಜನರ ಗೋಚರ ಜಾತಕದ ಚತುರ್ಥ ಭಾವದಲ್ಲಿ ಮಂಗಳನ ಈ ಗೋಚರ ನೆರವೇರಲಿದೆ. ಹಾಗೆ ನೋಡಿದರೆ ಮೇಷ ರಾಶಿಯ ಜನರಿಗೆ ಮಂಗಳ ಅಧಿಪತಿ. ಹೀಗಾಗಿ ಈ ರಾಶಿಯ ಜನರಿಗೆ ವಿಶೇಷ ಲಾಭ ಸಿಗುವ ಸಾಧ್ಯತೆ ಇದೆ. ಆದಾಯದ ಹೊಸ ಮೂಲಗಳು ನಿರ್ಮಾಣಗೊಳ್ಳಲಿವೆ. ಆರ್ಥಿಕ ಪಕ್ಷ ಬಲವಾಗಿರುವ ಕಾರಣ ನಿಮ್ಮ ಹಲವು ಕನಸುಗಳು ನನಸಾಗುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಪ್ರಸನ್ನರಾಗಲಿದ್ದಾರೆ. ಹೀಗಿರುವಾಗ ನಿಮಗೆ ಪದೋನ್ನತಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ವಾಹನ ಖರೀದಿಸಲು ಯೋಜನೆ ರೂಪಿಸುತ್ತಿದ್ದಾರೆ, ತಡಮಾಡಬೇಡಿ, ಶುಭ ಮುಹೂರ್ತ ನೋಡಿ ಖರೀದಿಸಿಯೇ ಬಿಡಿ. ಇದರಿಂದ ಶುಭ ಫಲ ಪ್ರಾಪ್ತಿಯಾಗಲಿದೆ.  

2 /3

ಕನ್ಯಾ ರಾಶಿ- ನಿಮ್ಮ ರಾಶಿಯ ಗೋಚರ ಜಾತಕದ ಏಕಾದಶ ಭಾವದಲ್ಲಿ ಮಂಗಳನ ಈ ಗೋಚರ ನೆರವೇರಲಿದೆ. ಹೀಗಿರುವಾಗ ಈ ರಾಶಿಯ ಜಾತಕದವರಿಗೆ ಹಣಕಾಸಿನ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದೆ. ವೈವಾಹಿಕ ಜೀವನ ಸುಖಮಯವಾಗಲಿದೆ. ಒತ್ತಡದಿಂದ ಮುಕ್ತಿ ಸಿಗಲಿದೆ. ಬಂಧು ಮಿತ್ರರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಬಿಸ್ನೆಸ್ ಹಾಗೂ ನೌಕರಿಯಲ್ಲಿಯೂ ಕೂಡ ಲಾಭದ ಲಕ್ಷಣಗಳು ಗೋಚರಿಸುತ್ತಿವೆ. ಇದಲ್ಲದೆ ನಿಮಗೆ ಆಕಸ್ಮಿಕ ಧನಲಾಭ ಯೋಗ ಕೂಡ ಪ್ರಾಪ್ತಿಯಾಗಬಹುದು.   

3 /3

ಕುಂಭ ರಾಶಿ- ಕುಂಭ ರಾಶಿಯ ಜಾತಕದವರಿಗೆ ಮಂಗಳನ ಈ ಗೋಚರ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಶಷ್ಟಮ ಭಾವದಲ್ಲಿ ಮಂಗಳ ಪ್ರವೇಶಿಸುತ್ತಿದ್ದಾನೆ. ಹೀಗಿರುವಾಗ ನೀವು ನಿಮ್ಮ ಶತ್ರುಗಳ ಮೇಲೆ ಜಯ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಹೀಗಾಗಿ ಇನ್ನೂ ಹೆಚ್ಚಿನ ಪರಿಶ್ರಮವಹಿಸಿ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಈ ಅವಧಿಯಲ್ಲಿ ನಿಮಗೆ ಹಣಕಾಸಿನ ಮುಗ್ಗಟ್ಟು ಎದುರಾಗುವುದಿಲ್ಲ. ಬಂಧು-ಮಿತ್ರರು ಅಥವಾ ಕುಟುಂಬ ಸದಸ್ಯರ ಜೊತೆಗೆ ನೀವು ಒಂದು ಅವಿಸ್ಮರಣೀಯ ಪ್ರವಾಸ ಕೈಗೊಳ್ಳಬಹುದು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)