ನವದೆಹಲಿ: ಫ್ರಾನ್ಸ್ ನಿಂದ ಖರೀದಿಸಲಾಗುತ್ತಿರುವ ರಫೇಲ್ ಫೈಟರ್ ಜೆಟ್ ಒಪ್ಪಂದದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸುಳ್ಳು ಹರಡುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ತೀವ್ರ ವಾಗ್ಧಾಳಿ ನಡೆಸಿದ್ದಾರೆ.
ರಾಹುಲ್ ಗಾಂಧಿ ಭಾರತೀಯ ಸೇನಾ ಪಡೆಯ ನೈತಿಕತೆಯನ್ನು ಕುಗ್ಗಿಸುವ ರೀತಿಯಲ್ಲಿ ಮತ್ತು ರಫೇಲ್ ಪ್ರತಿಸ್ಪರ್ಧಿಗಳಿಗೆ ಲಾಭವಾಗುವ ರೀತಿಯಲ್ಲಿ
ಉದ್ದೇಶಪೂರ್ವಕವಾಗಿ ರಫೇಲ್ ಒಪ್ಪಂದದ ಬಗ್ಗೆ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಆರೋಪಿಸಿದ್ದಾರೆ.
"ರಾಹುಲ್ ಗಾಂಧಿಯವರ ಸುಳ್ಳು ಹೇಳಿಕೆಗಳನ್ನು ನಾನು ಸಂಪೂರ್ಣವಾಗಿ ಖಂಡಿಸುತ್ತೇನೆ. ಅವರು ಭಾರತೀಯ ವಾಯುಪಡೆಯನ್ನು ನಂಬುವುದಿಲ್ಲ, ಸಿಎಜಿ ಮೇಲೆ ಯಾವುದೇ ವಿಶ್ವಾಸ ಇರುವಂತೆ ಕಾಣುವುದಿಲ್ಲ. ಅವರು ಹಾಗಿದ್ದರೆ ಅವರು ಪಾಕಿಸ್ತಾನವನ್ನು ನಂಬುತ್ತಾರೆಯೇ? ಅವರು ಅಜಾಗರೂಕತೆಯಿಂದ ಅಥವಾ ಉದ್ದೇಶಪೂರ್ವಕವಾಗಿ ರಫೇಲ್ ಒಪ್ಪಂದದ ಬಗೆಗೆ ಆಟವಾಡುತ್ತಿದ್ದಾರೆ'' ಎಂದು ರವಿ ಶಂಕರ್ ಪ್ರಸಾದ್ ಹರಿಹೈದಿದ್ದಾರೆ.
RS Prasad,Union Minister: Totally condemn the blatant lies of Rahul Gandhi. He doesn't believe the Indian Air Force, he doesn't believe the SC, doesn't believe the CAG. Does he want to believe Pakistan? He is inadvertently or deliberately playing into hands of #Rafale competitors pic.twitter.com/YRgTITWxHB
— ANI (@ANI) March 7, 2019
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಫೇಲ್ ವ್ಯವಹಾರದಲ್ಲಿ "ಉಳಿಸಲು" ಸರ್ಕಾರವನ್ನು ದುರ್ಬಳಕೆ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಫ್ರಾನ್ಸ್ ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ರಫೇಲ್ ಫೈಲ್ ನಾಪತ್ತೆಯಾಗಿಲ್ಲ, ಅದನ್ನು ಬಚ್ಚಿಡಲಾಗಿದೆ. ತನಿಖೆ ನಡೆಸಿದರೆ ಸತ್ಯ ಜನತೆಗೆ ಗೊತ್ತಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.
ರಫೇಲ್ ಒಪ್ಪಂದದ ದಾಖಲೆ ಕಳೆದು ಹೋಗಿವೆ ಎಂದು ಹೇಳಿರುವುದು ಸುಳ್ಳಾಗಿದೆ. ಈ ಬಗ್ಗೆ ವಿಸ್ತೃತ ತನಿಖೆ ನಡೆಸಿದಾಗ ಎಲ್ಲಾ ಸತ್ಯ ಹೊರಬರಲಿದೆ. ಹಣ ಎಲ್ಲಿಗೆ ಹೋಗಿದೆ ಎಂಬ ಸತ್ಯ ಶೀಘ್ರದಲ್ಲೇ ಹೊರಬರುತ್ತದೆ. ಫೈಲ್ ಹೇಗೆ ನಾಪತ್ತೆಯಾಗಿದೆ ಎಂದು ಮೋದಿ ಸ್ಪಷ್ಟನೆ ನೀಡಬೇಕೆಂದು ರಾಹುಲ್ ಒತ್ತಾಯಿಸಿದ್ದಾರೆ.
ರಕ್ಷಣಾ ಇಲಾಖೆ ಸಮನಾಂತರ ಚೌಕಾಸಿ ನಡೆದಿದೆ ಎಂದು ಹೇಳಿದೆ. ಚೌಕಾಸಿ ಮಾಡಲು ಏನಾದರೂ ಒಂದು ಕಾರಣ ಇರುತ್ತದೆ ಅಲ್ಲವೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಆ ಕಾರಣ ಏನೆಂದರೆ, ಅನಿಲ್ ಅಂಬಾನಿಗೆ ಹಣ ಕೊಡಬೇಕಿದೆ. ರಫೇಲ್ ನಲ್ಲಿ 30,000 ಕೋಟಿ ರೂ. ಹಗರಣ ನಡೆದಿದೆ ಎಂದು ರಾಹುಲ್ ಗಾಂಧಿ ದೂರಿದ್ದಾರೆ.