Most Popular Cars in Pakistan: ಪ್ರಸ್ತುತ, ನೆರೆಯ ರಾಷ್ಟ್ರ ಪಾಕಿಸ್ತಾನದ ಆರ್ಥಿಕ ಸ್ಥಿತಿ ಹೇಗಿದೆ ಎಂದು ತಿಳಿದೇ ಇದೆ. ಯಾವುದೇ ಎರಡು ನೆರೆಯ ರಾಷ್ಟ್ರಗಳ ನಡುವೆ ಸಣ್ಣ ಪುಟ್ಟ ಮನಸ್ಥಾಪ, ಗಡಿ ವಾಗ್ವಾದ ಇದ್ದೇ ಇರುತ್ತದೆ. ಆದಾಗ್ಯೂ, ಇಡೀ ವಿಶ್ವದಲ್ಲೇ ಶತ್ರು ರಾಷ್ಟ್ರಗಳು ಎಂದರೆ ಮೊದಲು ನೆನಪಾಗುವುದೇ ಭಾರತ-ಪಾಕಿಸ್ತಾನ. ಭಾರತದ ಬಗ್ಗೆ ಕುರುಡು ದ್ವೇಷ ಭಾವವನ್ನು ಹೊಂದಿರುವ ಪಾಕಿಸ್ತಾನದ ಜನರಿಗೆ ಭಾರತೀಯ ವಾಹನಗಳ ಬಗೆಗಿನ ವ್ಯಾಮೋಹ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಭಾರತದ ಬಗ್ಗೆ ಕುರುಡು ದ್ವೇಷ ಭಾವವನ್ನು ಹೊಂದಿರುವ ಪಾಕಿಸ್ತಾನದ ಜನರಿಗೆ ಭಾರತೀಯ ವಾಹನಗಳ ಬಗೆಗಿನ ವ್ಯಾಮೋಹ ತಿಳಿದರೆ ನಿಮಗೆ ನಿಜಕ್ಕೂ ಅಚ್ಚರಿಯಾಗಬಹುದು. ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಟಾಪ್ 5 ಕಾರುಗಳಲ್ಲಿ ಮೂರು ಕಾರುಗಳು ಭಾರತೀಯ ಕಾರುಗಳು. ಮಾರುತಿ ಸುಜುಕಿಯ ಆಲ್ಟೊ ಕಾರಿಗೆ ಪಾಕಿಸ್ತಾನದಲ್ಲಿ ತುಂಬಾ ಬೇಡಿಕೆ ಇದೆ.
ಮಾರುತಿ ಸುಜುಕಿಯ ಆಲ್ಟೋ ಮಾತ್ರವಲ್ಲದೆ, ಮಾರುತಿ ಸುಜುಕಿಯ ಸ್ವಿಫ್ಟ್ ಕೂಡ ಪಾಕಿಸ್ತಾನದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿದೆ. ಮಾರುತಿ ಸುಜುಕಿಯ ಸ್ವಿಫ್ಟ್ ಪಾಕಿಸ್ತಾನದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ಕಾರು ಎಂದು ಹೇಳಲಾಗುತ್ತದೆ.
ಪಾಕಿಸ್ತಾನದಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಮಾರುತಿ ಸುಜುಕಿಯ ಕಾರ್ ಬೋಲನ್ ಅಲ್ಲಿ ಮೂರನೇ ಸ್ಥಾನದಲ್ಲಿದೆ. ಈ ಕಾರ್ ಭಾರತದಲ್ಲಿ ಮಾರಾಟವಾಗುವ ಒಮಿನಿಯ ಹೊಸ ವಿನ್ಯಾಸಎಂತಲೇ ಹೇಳಬಹುದು.
ಟೊಯೊಟಾದ ಸೆಡಾನ್ ಕೊರೊಲ್ಲಾ ಪಾಕಿಸ್ತಾನದಲ್ಲಿ ಮಾರಾಟವಾಗುತ್ತಿರುವ ಅತಿ ಬೇಡಿಕೆಯ ಕಾರುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಎಲೈಟ್ ವರ್ಗದ ಪಾಕಿಸ್ತಾನಿಗಳು ಈ ಕಾರನ್ನು ಹೊಂದಲು ಬಯಸುತ್ತಾರೆ.
ಐಷಾರಾಮಿ ಕಾರುಗಳನ್ನು ಇಷ್ಟಪಡುವ ಪಾಕಿಸ್ತಾನಿಗಳಿಗೂ ಕೂಡ ಹೋಂಡಾ ಸಿಟಿ ಕಾರೆಂದರೆ ಬಲು ಪ್ರಿಯ. ಈ ಕಾರಿನ 6 ಮಾದರಿಗಳನ್ನು ಅಲ್ಲಿ ಮಾರಾಟ ಮಾಡಲಾಗುತ್ತದೆ.