ಈ ಮೂರು ರಾಶಿಯವರಿಗೆ ಗುರು ದೆಸೆ ! ಕೈ ಹಾಕಿದ ಕೆಲಸದಲ್ಲಿ ಭರ್ಜರಿ ಯಶಸ್ಸು, ಉಕ್ಕಿ ಬರುವುದು ಧನ ಸಂಪತ್ತು

ಗುರುವಿನ ನಕ್ಷತ್ರ ಬದಲಾವಣೆಯು ಮೂರು ರಾಶಿಯವರಿಗೆ  ಅದೃಷ್ಟವನ್ನು ತರುತ್ತದೆ. ಮಾತ್ರವಲ್ಲ ಬಹಳಷ್ಟು ಹಣವನ್ನು ಕೂಡಾ ನೀಡುತ್ತದೆ.

ಬೆಂಗಳೂರು : ದೇವಗುರು ಬೃಹಸ್ಪತಿ ವರ್ಷಕ್ಕೊಮ್ಮೆ ರಾಶಿಯನ್ನು  ಬದಲಾಯಿಸುತ್ತಾರೆ. 2023 ರ ಏಪ್ರಿಲ್ 22 ರಂದು ಗುರು ಗ್ರಹವು ತನ್ನ ರಾಶಿಯನ್ನು ಬದಲಾಯಿಸಿತು. ಇತ್ತೀಚೆಗೆ, ಜೂನ್ 21, 2023 ರಂದು, ಗುರುವು ನಕ್ಷತ್ರವನ್ನು ಬದಲಾಯಿಸುವ ಮೂಲಕ ಭರಣಿ ನಕ್ಷತ್ರವನ್ನು ಪ್ರವೇಶಿಸಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಭರಣಿ ನಕ್ಷತ್ರವನ್ನು  ಪ್ರವೇಶಿಸಿರುವ ಗುರು ನವೆಂಬರ್ 27 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ನಂತರ ಗುರು ಭರಣಿ ನಕ್ಷತ್ರವನ್ನು ತೊರೆದು ಅಶ್ವಿನಿ ನಕ್ಷತ್ರದ ಮೊದಲ ಹಂತವನ್ನು ಪ್ರವೇಶಿಸುತ್ತಾನೆ. ಈ ರೀತಿಯಾಗಿ ನವೆಂಬರ್ 27 ರವರೆಗೆ ಸುಮಾರು 150 ದಿನಗಳ ಕಾಲ ಗುರು ಭರಣಿ ನಕ್ಷತ್ರದಲ್ಲಿ ಉಳಿದುಕೊಳ್ಳುವ ಸಮಯದಲ್ಲಿ ಎಲ್ಲಾ 12 ರಾಶಿಗಳಿಗೆ ಶುಭ ಮತ್ತು ಅಶುಭ ಪರಿಣಾಮಗಳನ್ನು ನೀಡುತ್ತದೆ. 

2 /5

ಗುರುವಿನ ನಕ್ಷತ್ರ ಬದಲಾವಣೆಯು ಮೂರು ರಾಶಿಯವರಿಗೆ  ಅದೃಷ್ಟವನ್ನು ತರುತ್ತದೆ. ಮಾತ್ರವಲ್ಲ ಬಹಳಷ್ಟು ಹಣವನ್ನು ಕೂಡಾ ನೀಡುತ್ತದೆ. ಗುರುವಿನ ನಕ್ಷತ್ರ ಬದಲಾವಣೆಯಿಂದ ಅದೃಷ್ಟ ಬೆಳಗುವ ರಾಶಿಗಳು  ಯಾವುವು ನೋಡೋಣ. 

3 /5

ಮೇಷ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗುರುವಿನ ನಕ್ಷತ್ರ ಬದಲಾವಣೆಯಿಂದ ಮೇಷ ರಾಶಿಯಲ್ಲಿ ಗುರು-ರಾಹುವಿನ ಸಂಯೋಗ ರೂಪುಗೊಂಡ ಗುರು ಚಂಡಾಲ ಯೋಗ ಅಂತ್ಯಗೊಳ್ಳುತ್ತದೆ.  ಇದರೊಂದಿಗೆ ಈವರೆಗೆ ಅನುಭವಿಸುತ್ತಿದ್ದ ಕಷ್ಟಗಳು ಕೊನೆಯಾಗುತ್ತವೆ. . ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು. 

4 /5

ಮಿಥುನ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ವಿಶೇಷವಾಗಿ ವ್ಯಾಪಾರ ವರ್ಗದವರಿಗೆ ಲಾಭವಾಗಲಿದೆ. ಸಾಕಷ್ಟು ಹಣ ಹರಿದು ಸಿಗಲಿದೆ. ಆದಾಯ ಹೆಚ್ಚಲಿದೆ. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಹೊಸ ಜನರ ಭೇಟಿಯಿಂದ ಲಾಭವಾಗಲಿದೆ. 

5 /5

ಕರ್ಕಾಟಕ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ನಿರೀಕ್ಷೆಗೂ ಮೀರಿದ ಹಣ ಕೈ ಸೇರುತ್ತದೆ. ಹೊಸ ಮೂಲಗಳಿಂದ ಹಣ ಬರುತ್ತದೆ ಮತ್ತು ಆದಾಯವೂ ಹೆಚ್ಚಾಗಬಹುದು. ಆರೋಗ್ಯ ಚೆನ್ನಾಗಿರುತ್ತದೆ. ನಿರುದ್ಯೋಗಿಗಳು ಉದ್ಯೋಗ ಪಡೆಯುವ ಅವಕಾಶವಿರುತ್ತದೆ. ವ್ಯಾಪಾರ ವರ್ಗದವರಿಗೆ  ಸಮಯವು ತುಂಬಾ ಮಂಗಳಕರವಾಗಿರಲಿದೆ.  ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)