ಬೆಂಗಳೂರು: ರಾಜ್ಯದ #ATMSarkaraದ ಅವಾಸ್ತವಿಕ ಗ್ಯಾರಂಟಿಗಳ ಅಪ್ರಬುದ್ಧ ಅನುಷ್ಠಾನದಿಂದ ರಾಜ್ಯದ ಆರ್ಥಿಕತೆ ವಿನಾಶದತ್ತ ಸಾಗುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಈ ಬಗ್ಗೆ ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಶಕ್ತಿ’ ಯೋಜನೆಯಿಂದ ಸಾರಿಗೆ ನಿಗಮಗಳ ಆರ್ಥಿಕ ಶಕ್ತಿ ಸಂಪೂರ್ಣವಾಗಿ ಕುಂದಿದ್ದು, ಸಾರಿಗೆ ನೌಕರರಿಗೆ ಜೂನ್ ತಿಂಗಳ ಸಂಬಳ ‘ಕೈ’ ಸೇರುವುದು ಅನುಮಾನ ಎಂಬ ಮಾತು ಕೇಳಿ ಬರುತ್ತಿದೆ. ಇದಿನ್ನು ಆರಂಭ, ಪರಿಸ್ಥಿತಿ ಹೀಗೆಯೇ ಮುಂದುವರೆದರೇ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆ ನಷ್ಟಕ್ಕಿಡಾಗಿ, ನೌಕರರ ಬಾಳು ಬೀದಿಗೆ ಬರಲಿದೆ’ ಎಂದಿದೆ.
ಇದನ್ನೂ ಓದಿ: Karnataka Budget 2023-24: ಸಿಎಂ ಸಿದ್ದರಾಮಯ್ಯನವರ ದಾಖಲೆಯ 14 ನೇ ಬಜೆಟ್ ಮಂಡನೆ ವೇಳೆ ನೀಡಿದ ಭರವಸೆಗಳೇನು?
‘ಇದು #ATMSarkaraದ ಗ್ಯಾರಂಟಿ ಕೊಡುಗೆ. ವರ್ಗಾವಣೆ ದಂಧೆ..!, ಮರಳು ಮಾಫಿಯಾ..! ಮತ್ತು ಹಫ್ತಾ ವಸೂಲಿ ದಂಧೆ..! ಇವು ರಾಜ್ಯದ ಪೊಲೀಸರಿಗೆ ಕೊಟ್ಟಿರುವ ಟಾಸ್ಕ್. ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯ, ಶ್ಯಾಡೋ ಹೋಮ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಈ ದಂಧೆಯಲ್ಲಿ ತೊಡಗಿದ್ದಾರೆ. ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ಹಣದ ದಾಹಕ್ಕೆ ರಾಜ್ಯದ ದಕ್ಷ ಪೊಲೀಸರನ್ನು ಇನ್ನೆಷ್ಟು ಹಿಂಸಿಸುವಿರಿ?’ ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜ್ಯದಲ್ಲಿ ನೂರಕ್ಕೆ ನೂರು ಜಾರಿಯಾದ ಏಕೈಕ ಗ್ಯಾರಂಟಿ ಯಾವುದೆಂದು ನೂರೈವತ್ತರ ಗಡಿ ಗಾಟಿದ ಟೊಮೆಟೊ-ಬದನೆಗಳೇ ತೋರಿಸಿಕೊಡುತ್ತಿವೆ.
ಬೆಲೆ ನಿಯಂತ್ರಣ ಮಾಡುವುದು ಕ್ರಮ ಬದಿಗಿರಲಿ, ಪರಿಸ್ಥಿತಿ ಅವಲೋಕನಕ್ಕೂ ಒಂದು ಸಭೆ ಮಾಡದ ಹೊಣೆಗೇಡಿ ಈ @INCKarnataka ಸರ್ಕಾರ.
ಎಲ್ಲೆಲ್ಲಿ ಕಮಿಷನ್ ಇದೆಯೋ ಅಷ್ಟಕ್ಕೇ ಮಾತ್ರ #ATMSarkara ತಕ್ಷಣದ… pic.twitter.com/zz976UR4E0
— BJP Karnataka (@BJP4Karnataka) July 7, 2023
ಇದನ್ನೂ ಓದಿ: ಪಕ್ಷ ಕೊಟ್ಟ ಭರವಸೆಗಳನ್ನು ಸರ್ಕಾರ ಈಡೇರಿಸಿದೆ-ಎದೆ ಎತ್ತಿ ಉತ್ತರಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
‘ರಾಜ್ಯದಲ್ಲಿ ನೂರಕ್ಕೆ ನೂರು ಜಾರಿಯಾದ ಏಕೈಕ ಗ್ಯಾರಂಟಿ ಯಾವುದೆಂದು ನೂರೈವತ್ತರ ಗಡಿ ಗಾಟಿದ ಟೊಮೆಟೊ-ಬದನೆಗಳೇ ತೋರಿಸಿಕೊಡುತ್ತಿವೆ. ಬೆಲೆ ನಿಯಂತ್ರಣ ಮಾಡುವುದು ಕ್ರಮ ಬದಿಗಿರಲಿ, ಪರಿಸ್ಥಿತಿ ಅವಲೋಕನಕ್ಕೂ ಒಂದು ಸಭೆ ಮಾಡದ ಹೊಣೆಗೇಡಿ ಈ ಕಾಂಗ್ರೆಸ್ ಸರ್ಕಾರ. ಎಲ್ಲೆಲ್ಲಿ ಕಮಿಷನ್ ಇದೆಯೋ ಅಷ್ಟಕ್ಕೇ ಮಾತ್ರ #ATMSarkara ತಕ್ಷಣದ ಸಭೆಗಳನ್ನು ನಡೆಸುತ್ತಿದೆ’ ಎಂದು ಬಿಜೆಪಿ ಕುಟುಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.