ಜೆಡಿಎಸ್-ಬಿಜೆಪಿ ಧರಣಿ ನಡುವೆ ಎಪಿಎಂಸಿ‌ ತಿದ್ದುಪಡಿ ವಿಧೇಯಕ ಅಂಗೀಕಾರ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ವಿವಾದಿತ ಎಪಿಎಂಸಿ ತಿದ್ದುಪಡಿ ಕಾನೂನು ವಾಪಸ್ ಪಡೆದು ಕೊಳ್ಳಲಾಗಿದೆ. ವಿಧಾನಸಭೆಯಲ್ಲಿ  2023 ನೇ ಸಾಲಿನ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ( ನಿಯಂತ್ರಣ ಮತ್ತು ಅಭಿವೃದ್ಧಿ) ( ತಿದ್ದುಪಡಿ) ವಿಧೇಯಕ ಅಂಗೀಕಾರಗೊಂಡಿತು.   

Written by - RACHAPPA SUTTUR | Edited by - Savita M B | Last Updated : Jul 17, 2023, 05:27 PM IST
  • ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕವನ್ನು ಮಂಡಿಸಿದರು
  • ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನು ಇದಾಗಿತ್ತು
  • ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ‌ಕಾನೂನನ್ನು ಕೇಂದ್ರ ಹಿಂಪಡೆದಿದೆ.
ಜೆಡಿಎಸ್-ಬಿಜೆಪಿ ಧರಣಿ ನಡುವೆ ಎಪಿಎಂಸಿ‌ ತಿದ್ದುಪಡಿ ವಿಧೇಯಕ ಅಂಗೀಕಾರ title=

ಬೆಂಗಳೂರು : ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧೇಯಕವನ್ನು ಮಂಡಿಸಿದರು. ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕಾನೂನು ಇದಾಗಿತ್ತು. ಆದರೆ  ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ‌ಕಾನೂನನ್ನು ಕೇಂದ್ರ ಹಿಂಪಡೆದಿದೆ. ಹೀಗಿದ್ದರೂ, ರಾಜ್ಯದಲ್ಲಿ ಈ ಕಾನೂನು ಹಿಂಪಡೆದಿರಲಿಲ್ಲ. ಕೇಂದ್ರ ವಾಪಸ್ ಪಡೆದರೂ ರಾಜ್ಯ ವಾಪಸ್ ಪಡೆದಿಲ್ಲ.‌ ಇದರಿಂದ ರೈತರಿಗೆ ತೊಂದರೆ ಆಗುತ್ತಿತ್ತು. ಈ ಕಾರಣಕ್ಕಾಗಿ ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದರು. 

ಕಾನೂನು ತಿದ್ದುಪಡಿ ಕುರಿತಾಗಿ, ಮಾಜಿ ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ,‌ ಎಪಿಎಂಸಿ ಬಗ್ಗೆ ಅಧ್ಯಯನ ಮಾಡಿದರೆ ಕಾನೂನು‌ ವಾಪಸ್ ಪಡೆಯುತ್ತಿರಲಿಲ್ಲ. ಎಪಿಎಂಸಿಯನ್ನು ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಆರಂಭ ಮಾಡಿದ್ದು. ಎಪಿಎಂಸಿ ಒಳಗಡೆ ಬೆಳೆ ಮಾರಾಟ ಮಾಡಬೇಕು. ಹೊರಗಡೆ ಮಾರಾಟ ಮಾಡಲು ಅವಕಾಶ ಇಲ್ಲ ಎಂದರು.

ಆದರೆ ತಿದ್ದುಪಡಿಯಲ್ಲಿ ರೈತರ ಬೆಳೆಯನ್ನು ಯಾವಾಗ ಎಲ್ಲಿ ಯಾರಿಗೆ ಬೇಕಾದರೂ ಮಾರಾಟ ಮಾರಾಟ ಮಾಡಲು ಅವಕಾಶ ಇತ್ತು. ಈ ನಿಟ್ಟಿನಲ್ಲಿ ರೈತರಿಗೆ ಅನುಕೂಲ ತರುವ ನಿಟ್ಟಿನಲ್ಲಿ ಕಾನೂನು ಜಾರಿಗೆ ತರಲಾಗಿತ್ತು. 

ರೈತನಿಗೆ ತಾನು ಬೆಳೆದ ಬೆಳೆಯನ್ನು ಬೇರೆ ಕಡೆ ಮಾರಾಟ ಮಾಡಲು ಸ್ವಾತಂತ್ರ ಇಲ್ಲವೇ? ಈ ಹಿನ್ನಲೆಯಲ್ಲಿ ಈ ಕಾನೂನನ್ನು ಸರಿಯಾಗಿ ಅಧ್ಯಯನ ಮಾಡಿಲ್ಲ ಎಂದರು. 

ಇದನ್ನೂ ಓದಿ-Kalburgi News: ಪಿಎಸ್ಐ ಗನ್ ಕಿತ್ತುಕೊಂಡು ಓಡಿ ಹೋಗಿ ಮರವೇರಿ ಕುಳಿತ ಕಳ್ಳ..!

ಬೆಳೆಯನ್ನು ಎಪಿಎಂಸಿ ಹೊರತಾಗಿ ಹೊರಗಡೆ ಮಾರಾಟ ಮಾಡಿದ್ದಲ್ಲಿ ಏಕೆ ದಂಡ ಹಾಕುತ್ತೀರಿ? ರೈತರ ಬೆಳೆಗೆ ಉತ್ತಮ ಬೆಲೆ ಸಿಗಬೇಕು ಹಾಗೂ ಹೊಲದಲ್ಲೇ ಮಾರಾಟ ಮಾಡಲು ಅವಕಾಶ ಇರಬೇಕು ಎಂಬ ನಿಟ್ಟಿನಲ್ಲಿ ನಾನು ಕಾನೂನು ತಿದ್ದುಪಡಿ ಮಾಡಿದ್ದೆವು. ಆದರೆ ಇದೀಗ ಏಕೆ ತಿದ್ದುಪಡಿ ತರುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಅಲ್ಲದೆ, ರೈತರಿಗೆ ಅನುಕೂಲ ಆಗಲ್ಲ, ಬದಲಾಗಿ ದಲ್ಲಾಳಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕಾನೂನು‌ ತಿದ್ದುಪಡಿ ಮಾಡಲಾಗಿದೆ ಎಂದರು. ಯಾರ ಜೊತೆಗೆ ಚರ್ಚೆ ಮಾಡದೆ ಈ ತಿದ್ದುಪಡಿ ಮಾಡಲಾಗಿದೆ ಎಂದರು. 

ಟಿ.ಬಿ ಜಯಚಂದ್ರ ಮಾತನಾಡಿ, ಕೇಂದ್ರದ ಕಾನೂನನ್ನು ರೈತರು ಒಂದು ವರ್ಷ ವಿರೋಧ ಮಾಡಿ ಪ್ರತಿಭಟನೆ ಮಾಡಿದ್ದರು. 800 ಜನ ರೈತರು ಪ್ರಾಣ ಕಳೆದುಕೊಂಡಿದ್ದರು. ಕೇಂದ್ರ ವಾಪಸ್ ತೆಗೆದುಕೊಂಡರೂ ರಾಜ್ಯದಲ್ಲಿ ವಾಪಸ್ ಪಡೆದಿಲ್ಲ ಏಕೆ? ಈ ನಿಟ್ಟಿನಲ್ಲಿ ಕಾನೂನು ವಾಪಸ್ ಪಡೆಯುವ ತಿದ್ದುಪಡಿಗೆ ಬೆಂಬಲ ಕೊಡಿ ಎಂದು ಆಗ್ರಹಿಸಿದರು.

ಸಿದ್ದು ಸವದಿ ಮಾತನಾಡಿ, ಎಪಿಎಂಸಿಯಲ್ಲಿ ರೈತರ ರಕ್ತ ಹೀರಲಾಗುತ್ತಿದೆ.‌ ಈ ನಿಟ್ಟಿನಲ್ಲಿ ಕಾನೂನು ವಾಪಸ್ ಪಡೆಯುವುದು ಬಂಡತನ ಎಂದರು. ಆದರೆ ಇದಕ್ಕೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ಕಾನೂನು ರದ್ದು ಮಾಡಿದ್ದು ಬಂಡತನವೇ? ಎಂದು ಪ್ರಶ್ನಿಸಿದರು.

ಇನ್ನು ತಿದ್ದುಪಡಿ ಕಾನೂನಿನ ಪ್ರಕಾರ ಎಪಿಎಂಸಿ ಹೊರತಾಗಿ ಬೇರೆ ಬೇರೆ ಖರೀದಿದಾರರಿಗೆ ಬೆಳೆ ಮಾರಾಟ ಮಾಡಿದ್ದಲ್ಲಿ ಆರು ತಿಂಗಳ ಅವಧಿಗೆ ಜೈಲು, ಐದು ಸಾವಿರ ದಂಡ ಹಾಕುವ ಅವಕಾಶ ಇದೆ.

ಇದನ್ನೂ ಓದಿ-ಕುಂದುಕೊರತೆ ನಿವಾರಣಾ ಸಮಿತಿ ರಚನೆ: ಅರ್ಹ ಹಾಗೂ ಆಸಕ್ತಿಯುಳ್ಳ ವ್ಯಕ್ತಿಗಳಿಂದ ಅರ್ಜಿ ಆಹ್ವಾನ

ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತನಾಡಿ, ರೈತರ ಶೋಷಣೆ ಎಂಪಿಎಂಸಿಯಿಂದ ನಿಲ್ಲಲ್ಲ. ಅದು ಸಂಘಟಿತವಾದ ಶೋಷಣೆಯಾಗಿದೆ.ರೈತರು ವಿದ್ಯಾವಂತರಾಗಿದ್ದಾರೆ‌. ಈ ಕಾರಣದಿಂದ ತೂಕದಲ್ಲಿ ವ್ಯತ್ಯಾಸ ಆಗಲು ಸಾಧ್ಯವಿಲ್ಲ. 

ಎಪಿಎಂಸಿಯಲ್ಲಿ ದಲ್ಲಾಳಿಗಳು ರೈತರ ಸುಳಿಗೆ ಮಾಡುತ್ತಾರೆ.ಆದರೆ ನಾವು ತಂದ ಕಾನೂನಿನಲ್ಲಿ ರೈತರ ಉತ್ಪನ್ನವನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಲು ಅವಕಾಶ ಇದೆ ಎಂದರು.

ವ್ಯಾಪಾರಿಗೋಸ್ಕರ ತಂದ ತಿದ್ದುಪಡಿ ಇದಾಗಿದೆ.ಇದು ರೈತರ ವಿರೋಧಿ ಕಾಯ್ದೆಯಾಗಿದೆ ಎಂದು ಜೆಡಿಎಸ್ ಸದಸ್ಯ ಎಚ್ ಡಿ ರೇವಣ್ಣ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು.

ಬಿಜೆಪಿ,ಜೆಡಿಎಸ್ ಧರಣಿ

ಮಸೂದೆ ಕುರಿತಾಗಿ ಮಾತನಾಡಲು ಅವಕಾಶ ಕೊಡಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು‌ ಜೆಡಿಎಸ್ ಸದಸ್ಯರು ಸದನದ ಬಾವಿಗೆ ಇಳಿದು ಧರಣಿ ನಡೆಸಿದರು.ಧರಣಿ ನಡುವೆ ವಿಧೇಯಕ ಅಂಗೀಕಾರಗೊಂಡಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News