World Biggest King Cobra: ವಿಶ್ವದ ಅತಿದೊಡ್ಡ ಕಿಂಗ್ ಕೋಬ್ರಾ ಎಷ್ಟು ಅಪಾಯಕಾರಿ ಎಂದರೆ ಅದು ದೈತ್ಯ ಹೆಬ್ಬಾವುಗಳನ್ನು ಸಹ ಕ್ಷಣಾರ್ಧದಲ್ಲಿ ನುಂಗುತ್ತಿತ್ತು & ದೈತ್ಯ ಮೊಸಳೆಗಳನ್ನು ಸಹ ಅದು ಮುಕ್ಕುತ್ತಿತ್ತು.
ವಿಶ್ವದ ಅತಿ ಉದ್ದದ ಕಿಂಗ್ ಕೋಬ್ರಾ: ಹಾವಿನ ಹೆಸರು ಕೇಳಿದ್ರೆ ಸಾಕು ಯಾರಾದರೂ ನಡುಗುತ್ತಾರೆ. ಇನ್ನೂ ಹಾವು ಕಣ್ಮುಂದೆ ಪ್ರತ್ಯಕ್ಷವಾದರೆ ಮಾರುದ್ದ ಓಡಿಹೋಗುತ್ತಾರೆ. ಜಗತ್ತಿನಲ್ಲಿ ಹಲವಾರು ಪ್ರಭೇದದ ಹಾವುಗಳಿವೆ. ಕೆಲವು ಅತ್ಯಂತ ವಿಷಕಾರಿಯಾದರೆ, ಇನ್ನೂ ಕೆಲವು ಕಚ್ಚಿದರೂ ಏನೂ ಆಗುವುದಿಲ್ಲ. ಕಿಂಗ್ ಕೋಬ್ರಾ ಅಥವಾ ಕಾಳಿಂಗ ಸರ್ಪದ ಬಗ್ಗೆ ಮಾತನಾಡಿದರೆ ಎಂಥವರು ಹೆದರುತ್ತಾರೆ. ವಿಶ್ವದ ಅತಿದೊಡ್ಡ ಕಿಂಗ್ ಕೋಬ್ರಾ ಎಷ್ಟು ಅಪಾಯಕಾರಿ ಎಂದರೆ ಅದು ದೈತ್ಯ ಹೆಬ್ಬಾವುಗಳನ್ನು ಸಹ ಕ್ಷಣಾರ್ಧದಲ್ಲಿ ನುಂಗುತ್ತಿತ್ತು. ದೈತ್ಯ ಮೊಸಳೆಗಳನ್ನು ಸಹ ಅದು ಮುಕ್ಕುತ್ತಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವಿಶ್ವದ ಅತಿದೊಡ್ಡ ಕಿಂಗ್ ಕೋಬ್ರಾ 5.7 ಮೀ (18.8 ಅಡಿ) ಉದ್ದವಿತ್ತು. ಇದನ್ನು 2ನೇ ಮಹಾಯುದ್ಧದ ಸಮಯದಲ್ಲಿ ಪತ್ತೆ ಹಚ್ಚಲಾಗಿತ್ತು. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಕಾರ, ಈ ಹಾವು ಏಪ್ರಿಲ್ 1937ರಲ್ಲಿ ಮಲೇಷ್ಯಾದಲ್ಲಿ ಹಿಡಿಯಲ್ಪಟ್ಟಿತು. ಇದರ ದೊಡ್ಡ ಗಾತ್ರವು ಪ್ರಪಂಚದಾದ್ಯಂತ ಜನರ ಗಮನವನ್ನು ಸೆಳೆಯಿತು. ನಂತರ ಅದನ್ನು ಲಂಡನ್ ಮೃಗಾಲಯಕ್ಕೆ ಸ್ಥಳಾಂತರಿಸಲಾಯಿತು. ಇದರಿಂದ ಹೆಚ್ಚು ಹೆಚ್ಚು ಜನರು ಆ ಹಾವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು.
2ನೇ ಮಹಾಯುದ್ಧದಲ್ಲಿ ಶತ್ರುಗಳ ಬಾಂಬ್ ದಾಳಿಯ ವೇಳೆ ಲಂಡನ್‌ನಲ್ಲಿರುವ ಅನೇಕ ಪ್ರಾಣಿಸಂಗ್ರಹಾಲಯಗಳನ್ನು ಮುಚ್ಚಲಾಯಿತು. ಆ ಸಮಯದಲ್ಲಿ ಮೃಗಾಲಯದಲ್ಲಿದ್ದ ಅಪಾಯಕಾರಿ ಜೀವಿಗಳ ಬಗ್ಗೆ ಅಹಿತಕರ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಈ ನಿರ್ಧಾರಕ್ಕೆ ಕಾರಣವೆಂದರೆ ಬಾಂಬ್ ಸ್ಫೋಟದಿಂದ ಆ ಪ್ರಾಣಿಗಳು ಮೃಗಾಲಯದಿಂದ ಹೊರ ಹೋಗಬಹುದು ಎಂಬುದು. ಇದರಿಂದ ಸಾಮಾನ್ಯ ಜನರ ಜೀವನಕ್ಕೆ ಕುತ್ತು ಉಂಟಾಗುತ್ತಿತ್ತು. ಹೀಗಾಗಿ ಇದೇ ಅವಧಿಯಲ್ಲಿ ವಿಶ್ವದ ಅತಿಉದ್ದದ ಮತ್ತು ಭಾರವಾದ ಹಾವು ಸಹ ಕೊಲ್ಲಲ್ಪಟ್ಟಿತು.
ಕಿಂಗ್ ಕೋಬ್ರಾ ಆಗ್ನೇಯ ಏಷ್ಯಾ ಮತ್ತು ಭಾರತದಲ್ಲಿ ವ್ಯಾಪಕವಾಗಿ ಕಂಡುಬರುವ ಅಪಾಯಕಾರಿ ಹಾವು. ಇದು ಅಮೆರಿಕದಲ್ಲಿ ಕಂಡುಬರುತ್ತದೆ ಆದರೆ ವ್ಯಾಪಕವಾಗಿ ಅಲ್ಲ. ಇಂತಹ ಹಾವುಗಳು ಸಾಮಾನ್ಯವಾಗಿ 9-12 ಅಡಿ ಉದ್ದವಿರುತ್ತವೆ, ಇನ್ನೂ ಕೆಲವು ಉದ್ದವಾಗಿ ಬೆಳೆಯುತ್ತವೆ. ಕಿಂಗ್ ಕೋಬ್ರಾ ವಿಶ್ವದ ಅತಿ ಉದ್ದದ ವಿಷಕಾರಿ ಹಾವು.
ಕಿಂಗ್ ಕೋಬ್ರಾಗಳು ತಮ್ಮ ಹಲ್ಲುಗಳಿಂದ ಕಚ್ಚುವ ಮೂಲಕ ವಿಷ ಬಿಡುಗಡೆ ಮಾಡುತ್ತವೆ. ಇದರ ವಿಷದಿಂದ ಯಾವುದೇ ಜೀವಿ ಕ್ಷಣಮಾತ್ರದಲ್ಲಿ ಸಾಯುತ್ತದೆ. ಇದು ಎಷ್ಟು ಅಪಾಯಕಾರಿ ಎಂದರೆ ಅದು ಇತರ ಹಾವುಗಳನ್ನು ತಿನ್ನುತ್ತದೆ, 10 ಅಡಿ ಹೆಬ್ಬಾವನ್ನು ಸಹ ತಿನ್ನುತ್ತದೆ. ಈ ಕಾರಣದಿಂದ ಇತರ ಹಾವುಗಳು ಕಿಂಗ್ ಕೋಬ್ರಾದಿಂದ ದೂರವಿರುತ್ತವೆ.
ಹಾಗೆ ನೋಡಿದ್ರೆ ಕಿಂಗ್ ಕೋಬ್ರಾ ವಿಶ್ವದ ಅತಿಉದ್ದದ ಹಾವು ಅಲ್ಲ. ಹೆಬ್ಬಾವುಗಳು ಅವುಗಳಿಗಿಂತ ಹೆಚ್ಚು ಉದ್ದವಾಗಿರಬಹುದು. ಹೆಬ್ಬಾವುಗಳು ವಿಷಕಾರಿಯಲ್ಲದಿದ್ದರೂ, ಅವು ಉಸಿರಾಟ ನಿಲ್ಲಿಸಿ ಸಾಯುವವರೆಗೂ ತಮ್ಮ ಬೇಟೆಯನ್ನು ಸುತ್ತಿಹಾಕಿಕೊಳ್ಳುತ್ತವೆ. ಭಾರತೀಯ ಹೆಬ್ಬಾವುಗಳ ಉದ್ದವು 20 ಅಡಿಗಳವರೆಗೆ ಇರುತ್ತದೆ. ಅವು 150 ಪೌಂಡ್‌ಗಳಷ್ಟು ತೂಗುವ ಕಿಂಗ್ ಕೋಬ್ರಾಗಿಂತಲೂ ದೊಡ್ಡದಾಗಿರುತ್ತವೆ. ಬರ್ಮಾದಲ್ಲಿ ಕಂಡುಬರುವ ಹೆಬ್ಬಾವಿನ ಉದ್ದವು 23 ಅಡಿಗಳವರೆಗೆ ಇರುತ್ತದೆ.
ರೆಟಿಕ್ಯುಲೇಟೆಡ್ ಹೆಬ್ಬಾವು 29 ಅಡಿ ಉದ್ದ ಮತ್ತು 500 ಪೌಂಡ್ ತೂಕದವರೆಗೆ ಬೆಳೆಯುತ್ತದೆ. ಇದನ್ನು ವಿಶ್ವದ ಅತಿದೊಡ್ಡ ಹಾವು ಎಂದು ಪರಿಗಣಿಸಲಾಗಿದೆ. ಈ ಹಾವುಗಳು ಭಾರತ, ಬೊರ್ನಿಯೊ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿ ಇತರ ಸ್ಥಳಗಳಲ್ಲಿ ಕಂಡುಬರುತ್ತವೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಪ್ರಕಾರ 1912ರಲ್ಲಿ ಇಂಡೋನೇಷ್ಯಾದಿಂದ 32 ಅಡಿ ಉದ್ದದ ರೆಟಿಕ್ಯುಲೇಟೆಡ್ ಹೆಬ್ಬಾವು ದಾಖಲಾದ ಅತಿದೊಡ್ಡ ಹಾವು. ಇದು ಫುಟ್ಬಾಲ್ ಮೈದಾನದಲ್ಲಿ ಸುಮಾರು 10 ಗಜಗಳಷ್ಟು ಉದ್ದವಿತ್ತು.
ವಿಶ್ವದ ಅತಿದೊಡ್ಡ ಹೆಬ್ಬಾವು ಎಂದು ಕರೆಯಲ್ಪಡುವ ಹಸಿರು ಅನಕೊಂಡಗಳು 550 ಪೌಂಡ್‌ಗಳಷ್ಟು ತೂಗುತ್ತವೆ. ಆ ಬೃಹತ್ ಹಾವುಗಳು ಮೊಸಳೆಯನ್ನೂ ಸುಲಭವಾಗಿ ನುಂಗಬಲ್ಲವು. ಇದಲ್ಲದೆ ಅವು ಹಂದಿಗಳು ಮತ್ತು ಜಿಂಕೆಗಳನ್ನು ಸಹ ತಿನ್ನುತ್ತವೆ. ತಮ್ಮ ಎದುರಿಗೆ ಒಬ್ಬ ಮನುಷ್ಯ ಬಂದರೆ ಅವನನ್ನು ಕೊಲ್ಲಲೂ ಸಹ ಹಿಂಜರಿಯುವುದಿಲ್ಲ.