ಜುಲೈ 28ರಿಂದ ಆರಂಭವಾಗಿರುವ ಕ್ರೀಡಾಕೂಟ

  • Aug 04, 2023, 17:05 PM IST
1 /5

ಜರ್ಮನಿಯಲ್ಲಿ ನಡೆದ 8ನೇ ವಿಶ್ವ ಕುಬ್ಜರ ಕ್ರೀಡಾಕೂಡದಲ್ಲಿ ಬೆಳಗಾವಿ ಜಿಲ್ಲೆಯ ಕುವರಿ ಮೂರು ಪದಕಗಳನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾರೆ. 

2 /5

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಚಿಕ್ಕನಂದಿ ಗ್ರಾಮದ ಕುಬ್ಜ ಕುವರಿ ಮಂಜುಳಾ ಗೊರಗೊದ್ದಿ ಈ ಸಾಧನೆ ಮಾಡಿರುವ ಕುವರಿ. 

3 /5

ಕುಬ್ಜ ಕುವರಿ ಮಂಜುಳಾ ಗುಂಡು ಎಸೆತದಲ್ಲಿ ಪ್ರಥಮ, ಚಕ್ರ ಎಸೆತದಲ್ಲಿ ಎರಡನೇ ಸ್ಥಾನ, ಜಾವೆಲಿನ್ ಥ್ರೋ ದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. 

4 /5

2.5 ಲಕ್ಷ ರೂ.  ಬಡ್ಡಿಗೆ ಸಾಲ ಪಡೆದು ಜರ್ಮನಿಗೆ ಹೋಗಿ ಕುಬ್ಜ ಕುವರಿ ಮಂಜುಳಾ ಈ  ಸಾಧನೆ ಮಾಡಿದ್ದಾರೆ. 

5 /5

2023ರಲ್ಲಿ ಜುಲೈ 28ರಿಂದ ಆರಂಭವಾಗಿರುವ ಈ ಕುಬ್ಜರ ಕ್ರೀಡಾಕೂಡದಲ್ಲಿ ಮೂರು ಪದಕ ತಂದು ಕುಬ್ಜ ಕುವರಿ ಮಂಜುಳಾ ದೇಶಕ್ಕೆ, ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಸರು ಕೀರ್ತಿಯನ್ನು ತಂದಿದ್ದಾರೆ. ಮಾತ್ರವಲ್ಲ, ತಮ್ಮ ಸಾಧನೆ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ.