ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ನಮ್ಮ ಹಿಂದೆ ಬರಲಿದೆ

ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ-ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ನಿಮಿತ್ತ 2008ನೇ ಬ್ಯಾಚ್ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ ಕಾರ್ಯಕ್ರಮ ನಡೆಯಿತು.  

Written by - Zee Kannada News Desk | Last Updated : Aug 8, 2023, 10:46 PM IST
  • ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಆಗ ಯಶಸ್ಸು ನಮ್ಮ ಹಿಂದೆ ಬರಲಿದೆ
  • ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ-ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ
  • 2008ನೇ ಬ್ಯಾಚ್‍ನ ಹಳೆಯ ವಿದ್ಯಾರ್ಥಿಗಳಿಂದ ಸ್ನೇಹಕೂಟ ಕಾರ್ಯಕ್ರಮ
ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ನಮ್ಮ ಹಿಂದೆ ಬರಲಿದೆ title=
2008ನೇ ಬ್ಯಾಚ್ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ

ಧಾರವಾಡ: ಯಶಸ್ಸಿನ ಹಿಂದೆ ಓಡುವ ಬದಲು, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಆಗ ಯಶಸ್ಸು ನಮ್ಮ ಹಿಂದೆ ಬರಲಿದೆ ಎಂದು ಜೀ ಕನ್ನಡ ನ್ಯೂಸ್ ಸಂಪಾದಕರಾದ ರವಿ ಎಸ್ ಸಲಹೆ ನೀಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ-ಪತ್ರಿಕೋದ್ಯಮ ವಿಭಾಗದ 40ನೇ ವರ್ಷಾಚರಣೆ ನಿಮಿತ್ತ 2008ನೇ ಬ್ಯಾಚ್ ಹಳೆಯ ವಿದ್ಯಾರ್ಥಿಗಳ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತ ಹರ್ಷವರ್ಧನ ಶೀಲವಂತ ಮಾತನಾಡಿ, ‘ಇತ್ತೀಚೆಗೆ ಮನುಷ್ಯರು ಬದುಕಿನ ಬೇರುಗಳನ್ನು ಮರೆಯುತ್ತಿದ್ದಾರೆ. ಹೀಗೆ ಆಗಲು ಅವಕಾಶ ನೀಡದೆ ಮನುಷ್ಯ ಸಂಬಂಧಗಳು ಸದಾಕಾಲ ಜೀವಂತ ಇರಿಸಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದನ್ನೂ ಓದಿ: ಅನ್ನದಾತರ ಕೈಹಿಡಿದ ಕಪ್ಪು ಬಂಗಾರ.. ಕಾಳುಮೆಣಸಿಗೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್‌..!

ಪತ್ರಕರ್ತ ಮುತ್ತುರಾಜ ಬಿ.ಎಸ್.ಮಾತನಾಡಿ, ‘ಪತ್ರಿಕೋದ್ಯಮ ರಂಗದಲ್ಲಿ ಅವಕಾಶಗಳು ಹೇರಳ, ಕೌಶಲ್ಯಗಳಿಂದ ಕಠಿಣ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಕ್ಷರ ಸಂಗಾತ ಪತ್ರಿಕೆಯ ಸಂಪಾದಕ ಟಿ.ಎಸ್.ಗೊರವರ ಮಾತನಾಡಿ, ‘ಪುಸ್ತಕ ಓದುವುದರಿಂದ ಪ್ರಜ್ಞೆ ಮತ್ತು ಧೈರ್ಯ ಬೆಳೆಯುತ್ತದೆ. ತರಗತಿಗಳೂ ನಮಗೆ ದಿಕ್ಸೂಚಿ ಆಗಬಹುದು. ಕೊನೆಗೆ ಆಯ್ಕೆ ನಮ್ಮದೇ ಆಗಿರಲಿದೆ’ ಎಂದು ಹೇಳಿದರು.

ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಉಪಸಂಪಾದಕ ಗುರುರಾಜ ಗುಂಜಾಳ ಮಾತನಾಡಿದರು. ಪ್ರತ್ರಕರ್ತರಾದ ಅಶೋಕ ಯಡಹಳ್ಳಿ, ಪರುಶುರಾಮ ಹವಾಲ್ದಾರ್, ಯಶವಚಿತ ನಾಯ್ಕ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಅಮರೇಶ್ ರಾಠೋಡ, ಬ್ಯಾಂಕ್ ನೌಕರ ಶರಣಪ್ಪ ಬಾರಕೇರ, ಡಾ.ಶೇಖ ಅಧೋನಿ ಸೇರಿದಂತೆ ಅನೇಕರು ತಮ್ಮ ಅನಿಸಿಕೆಗಳನ್ನು ಇದೇ ವೇಳೆ ಹಂಚಿಕೊಂಡರು.

ಇದನ್ನೂ ಓದಿ: ಸೋಲಿನಿಂದ ಎಚ್.ಡಿ.ಕುಮಾರಸ್ವಾಮಿ ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತೆ ಕಾಣುತ್ತಿದೆ: ಸಿದ್ದರಾಮಯ್ಯ

ವಿಭಾಗದ ಮುಖ್ಯಸ್ಥ ಪ್ರೊ.ಜೆ.ಎಂ.ಚುಂದುನವರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ವಿಭಾಗದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಜಯಣ್ಣ ಕಮ್ಮಾರ ದಂಪತಿಗೆ ಸನ್ಮಾನಿಸಿ ಗೌರವಿಸಲಾಯಿತು. ಡಾ.ಮಂಜುನಾಥ ಅಡಿಗಲ್ ನಿರೂಪಿಸಿದರೆ, ಪತ್ರಕರ್ತ ಬಸವರಾಜ ಹಿರೇಮಠ ಸ್ವಾಗತಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News