Unique Railway Stations of India: ಭಾರತದಲ್ಲಿ 7000ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳಿವೆ. ಕೆಲವು ರೈಲು ನಿಲ್ದಾಣಗಳು ಸ್ವಚ್ಛತೆಗೆ ಹೆಸರುವಾಸಿಯಾಗಿದ್ದರೆ, ಇನ್ನೂ ಕೆಲವು ರೈಲ್ವೆ ನಿಲ್ದಾಣಗಳು ಅವುಗಳ ಅನನ್ಯತೆಯಿಂದಾಗಿ ಆಕರ್ಷಣೆಯ ಕೇಂದ್ರ ಬಿಂದುವಾಗಿವೆ. ಈ ಫೋಟೋ ಗ್ಯಾಲರಿಯಲ್ಲಿ ಅಂತಹ ಐದು ವಿಶಿಷ್ಟ ರೈಲು ನಿಲ್ದಾಣಗಳ ಬಗ್ಗೆ ತಿಳಿಯೋಣ...
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.
ದೆಹಲಿ-ಮುಂಬೈ ರೈಲು ಮಾರ್ಗದಲ್ಲಿರುವ ಭವಾನಿ ಮಂಡಿ ರೈಲು ನಿಲ್ದಾಣವು ಎರಡು ವಿಭಿನ್ನ ರಾಜ್ಯಗಳಿಗೆ ಸಂಪರ್ಕವನ್ನು ಹೊಂದಿದೆ. ಈ ರೈಲು ನಿಲ್ದಾಣವನ್ನು ನಿರ್ದಿಷ್ಟವಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದ ನಡುವೆ ವಿಂಗಡಿಸಲಾಗಿದೆ. ಈ ನಿಲ್ದಾಣದಲ್ಲಿ ನಿಲ್ಲುವ ಪ್ರತಿ ರೈಲಿನ ಇಂಜಿನ್ ರಾಜಸ್ಥಾನದಲ್ಲಿ ನಿಂತರ ಉಳಿದ ಕೋಚ್ ಗಳು ಮಧ್ಯಪ್ರದೇಶದಲ್ಲಿ ನಿಲ್ಲುತ್ತವೆ.
ಭಾರತದಲ್ಲಿರುವ ವಿಶಿಷ್ಟವಾದ ರೈಲು ನಿಲ್ದಾಣಗಳಲಿ ನವಪುರ ರೈಲು ನಿಲ್ದಾಣವೂ ಒಂದು. ಈ ರೈಲು ನಿಲ್ದಾಣದಲ್ ಒಂದು ಭಾಗ ಮಹಾರಾಷ್ಟ್ರದಲ್ಲಿದ್ದರೆ, ಇನ್ನೊಂದು ಭಾಗ ಗುಜರಾತ್‌ನಲ್ಲಿದೆ. ಹಾಗಾಗಿಯೇ, ಈ ರೈಲು ನಿಲ್ದಾಣದಲ್ಲಿ ಮರಾಠಿ ಮತ್ತು ಗುಜರಾತಿ ಎರಡೂ ಭಾಷೆಗಳಲ್ಲಿ ಬರೆಯಲಾಗಿದೆ.
ಭಾರತದಲ್ಲಿರುವ ಅನನ್ಯ ರೈಲು ನಿಲ್ದಾಣ ಈ ಅಟ್ಟಾರಿ ರೈಲು ನಿಲ್ದಾಣ. ನೀವು ಈ ರೈಲು ನಿಲ್ದಾಣದಲ್ಲಿ ಇಳಿಯಲು ಬಯಸಿದರೆ ವೀಸಾ ಪಡೆಯುವುದು ತುಂಬಾ ಅವಶ್ಯಕ. ವಾಸ್ತವವಾಗಿ, ಅಮೃತಸರದ ಅಟ್ಟಾರಿ ರೈಲು ನಿಲ್ದಾಣ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವುದರಿಂದ ಈ ನಿಲ್ದಾಣದಲ್ಲಿ ವೀಸಾ ಇಲ್ಲದೆ ಇಳಿಯುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಜಾರ್ಖಂಡ್‌ನ ರಾಜಧಾನಿ ರಾಂಚಿಯಿಂದ ತೋರಿಗೆ ಹೋಗುವ ಹಾದಿಯಲ್ಲಿ ಹೆಸರೇ ಇಲ್ಲದ ಒಂದು ರೈಲು ನಿಲ್ದಾಣವಿದೆ. 2011 ರಲ್ಲಿಮೊದಲ ಬಾರಿಗೆ ಇಲ್ಲಿ ರೈಲು ಸಂಚಾರ ಆರಂಭವಾದಾಗ ಇಯಕ್ಕೆ ಬಡ್ಕಿಚಂಪಿ ನಿಲ್ದಾಣ ಎಂದು ಕರೆಯಲಾಗುತ್ತಿತ್ತು. ಆದರೆ. ಸ್ಥಳೀಯರ ವಿರೋಧದಿಂದ ಈ ಹೆಸರನ್ನು ತೆಗೆಯಲಾಗಿದ್ದು, ಅಂದಿನಿಂದ ಈ ನಿಲ್ದಾಣಕ್ಕೆ ಯಾವುದೇ ಹೆಸರನ್ನೂ ನಾಮಕರಣ ಮಾಡಲಾಗಿಲ್ಲ.
2008 ರಲ್ಲಿ ಬಂಕುರಾ-ಮಸಾಗ್ರಾಮ್ ರೈಲು ಮಾರ್ಗದಲ್ಲಿ ನಿರ್ಮಿಸಲಾಗಿರುವ ರೈಲು ನಿಲ್ದಾಣವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೂ, ಈ ರೈಲು ನಿಲ್ದಾಣಕ್ಕೂ ಕೂಡ ಯಾವುದೇ ಹೆಸರನ್ನು ನಾಮಕರಣ ಮಾಡಲಾಗಿಲ್ಲ. ಆರಂಭದಲ್ಲಿ ಇದಕ್ಕೆ ರಾಯನಗರ ಎಂದು ನಾಮಕರಣ ಮಾಡಲಾಗಿತ್ತು. ಆದರೂ, ಸ್ಥಳೀಯರ ವಿರೋಧದಿಂದಾಗಿ ಆ ಹೆಸರನ್ನು ತೆಗೆಯಲಾಯಿತು.