Farmers suicide in Karnataka: ಬಿಜೆಪಿ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ!

Farmers suicide in Karnataka: ಬಿಜೆಪಿ ಸರ್ಕಾರದ ಅವಧಿಯಲ್ಲಿ 849 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ,  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 174 ಅನ್ನದಾತರು ಪ್ರಾಣಬಿಟ್ಟಿದ್ದಾರೆ.

Written by - Puttaraj K Alur | Last Updated : Sep 16, 2023, 08:28 PM IST
  • ಬಿಜೆಪಿ ಸರ್ಕಾರದ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ!
  • ಬಿಜೆಪಿ ಅವಧಿಯಲ್ಲಿ ಒಟ್ಟು 849 ಅನ್ನದಾತರ ಸೂಸೈಡ್
  • ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 174 ರೈತರ ಆತ್ಮಹತ್ಯೆ
Farmers suicide in Karnataka: ಬಿಜೆಪಿ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ! title=
ಬಿಜೆಪಿ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ!

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಅತಿಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರಗಾಲ ಹಾಗೂ ಬೆಳೆ ನಷ್ಟದಿಂದ ಪ್ರಾಣ ಕಳೆದುಕೊಂಡವರು ಬಿಜೆಪಿ ಅವಧಿಯಲ್ಲಿ ಒಟ್ಟು 849 ಅನ್ನದಾತರು ಪ್ರಾಣ ಬಿಟ್ಟಿದ್ದಾರೆ. 2022-23ನೇ ಸಾಲಿನ ರೈತರ ಆತ್ಮಹತ್ಯೆ ವರದಿಯಲ್ಲಿ ಈ ಮಾಹಿತಿ ಬಹಿರಂಗೊಂಡಿದೆ.   

ಬಿಜೆಪಿ ಅವಧಿಯಲ್ಲಿ ಅತ್ಯಧಿಕ ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಪ್ರಿಲ್ 1 2022ರಿಂದ ಮಾರ್ಚ್ 31 2023ರವರೆಗೆ ಒಟ್ಟು 968 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 111 ರೈತರ ಆತ್ಮಹತ್ಯೆ ಪ್ರಕರಣಗಳು ತಿರಸ್ಕೃತಗೊಂಡಿವೆ. ಹೀಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟು 849 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿ ತಿಳಿಸಿದೆ.

ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ

ಕಾಂಗ್ರೆಸ್ ಅವಧಿಯಲ್ಲಿ 174 ರೈತರ ಆತ್ಮಹತ್ಯೆ!

ಬಿಜೆಪಿ ಸರ್ಕಾರದ ಅವಧಿಯಲ್ಲಿ 849 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ,  ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 174 ಅನ್ನದಾತರು ಪ್ರಾಣಬಿಟ್ಟಿದ್ದಾರೆ. ಏಪ್ರಿಲ್ 1 2023ರಿಂದ ಸೆಪ್ಟೆಂಬರ್ 9 2023ರವರೆಗೆ ಒಟ್ಟು 250 ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಪ್ರಕರಣ ದಾಖಲಾಗಿವೆ. ಈ ಪೈಕಿ 18 ಪ್ರಕರಣಗಳು ತಿರಸ್ಕೃತಗೊಂಡಿವೆ. ಹೀಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಒಟ್ಟು 174 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ವಿಜಯಪುರದಲ್ಲಿ ಗೋಮಾತೆಗೆ ಸೀಮಂತ ಕಾರ್ಯ...!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News