Asia Cup Final 2023 ಪಂದ್ಯದ ಆರಂಭದಲ್ಲಿಯೇ ಭಾರಿ ವಿಧ್ವಂಸ ಸೃಷ್ಟಿಸಿದ ಮಹಮ್ಮದ್ ಸಿರಾಜ್ !

Asia Cup Final 2023: ಟೀಂ ಇಂಡಿಯಾದ ಮಾರಕ ವೇಗಿ ಮೊಹಮ್ಮದ್ ಸಿರಾಜ್ ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರಿ ವಿಧ್ವಂಸ ಸೃಷ್ಟಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರು ಏಷ್ಯಾ ಕಪ್ 2023 ರ ಫೈನಲ್ ಪಂದ್ಯವನ್ನು ಇನ್ನೇನು ಆರಂಭವಾಗಿದೆ ಎನ್ನುವಷ್ಟರಲ್ಲೇ ಬಹುತೇಕ ಮುಗಿಸಿ ಬಿಟ್ಟಿದ್ದಾರೆ. (Cricket News In Kannada)  

Written by - Nitin Tabib | Last Updated : Sep 17, 2023, 05:14 PM IST
  • ಶ್ರೀಲಂಕಾದ ಕೊಲಂಬೊ ನಗರದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ,
  • ಆದರೆ ಮೊಹಮ್ಮದ್ ಸಿರಾಜ್ ಶ್ರೀಲಂಕಾದ ಈ ನಿರ್ಧಾರ ತಪ್ಪು ಎಂದು ಸಾಬೀತುಪಡಿಸಿದ್ದಾರೆ.
  • ಟಾಸ್ ಬಳಿಕ ಮಳೆ ಸುರಿದು ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಇದಾದ ಬಳಿಕ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಸೃಷ್ಟಿಸಿದ ವಿಧ್ವಂಸ ಊಹೆಗೂ ಮೀರಿದೆ.
Asia Cup Final 2023 ಪಂದ್ಯದ ಆರಂಭದಲ್ಲಿಯೇ ಭಾರಿ ವಿಧ್ವಂಸ ಸೃಷ್ಟಿಸಿದ ಮಹಮ್ಮದ್ ಸಿರಾಜ್ ! title=

Asia Cup Final 2023 Ind Vs SL: ಟೀಂ ಇಂಡಿಯಾದ ಮಾರಕ ವೇಗಿ ಮೊಹಮ್ಮದ್ ಸಿರಾಜ್ ಏಷ್ಯಾಕಪ್ 2023 ರ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರಿ ವಿಧ್ವಂಸ ಸೃಷ್ಟಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರು ಏಷ್ಯಾ ಕಪ್ 2023 ರ ಫೈನಲ್ ಪಂದ್ಯವನ್ನು ಇನ್ನೇನು ಆರಂಭವಾಗಿದೆ ಎನ್ನುವಷ್ಟರಲ್ಲೇ ಬಹುತೇಕ ಮುಗಿಸಿ ಬಿಟ್ಟಿದ್ದಾರೆ. ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಶ್ರೀಲಂಕಾದ ಆಟಗಾರರನ್ನು ಬಗ್ಗುಬಡಿದಿದ್ದಾರೆ. ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್ ಪರಿ ಹೇಗಿದೆ ಎಂದರೆ ಅವರು ಕೇವಲ 3 ಓವರ್ ಗಳಲ್ಲಿ 5 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. 

2023ರ ಏಷ್ಯಾಕಪ್‌ನ ಫೈನಲ್‌ನಲ್ಲಿ ಸಿರಾಜ್ ಭಾರಿ ವಿಧ್ವಂಸ
ಶ್ರೀಲಂಕಾದ ಕೊಲಂಬೊ ನಗರದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ, ಆದರೆ ಮೊಹಮ್ಮದ್ ಸಿರಾಜ್ ಶ್ರೀಲಂಕಾದ ಈ ನಿರ್ಧಾರ ತಪ್ಪು ಎಂದು ಸಾಬೀತುಪಡಿಸಿದ್ದಾರೆ. ಟಾಸ್ ಬಳಿಕ ಮಳೆ ಸುರಿದು ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಯಿತು. ಇದಾದ ಬಳಿಕ ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ಸೃಷ್ಟಿಸಿದ ವಿಧ್ವಂಸ ಊಹೆಗೂ ಮೀರಿದೆ.

ಇದನ್ನೂ ಓದಿ-ಚಿತ್ರಾ ನಕ್ಷತ್ರಕ್ಕೆ ಗ್ರಹಗಳ ಸೇನಾಪತಿ ಮಂಗಳನ ಪ್ರವೇಶ, 3 ರಾಶಿಗಳ ಜನರ ಮೇಲೆ ಧನಕುಬೇರ ಕೃಪೆಯಿಂದ ಭಾರಿ ಧನವೃಷ್ಟಿ!

ಸಿರಾಜ್ ಸೃಷ್ಟಿಸಿದ ಅವಾಂತರ ಈ ರೀತಿಯಾಗಿತ್ತು
ಪಂದ್ಯ ಆರಂಭವಾದ ತಕ್ಷಣ ಜಸ್ಪ್ರೀತ್ ಬುಮ್ರಾ ಅವರು ಶ್ರೀಲಂಕಾ ತಂಡದ ಮೊತ್ತ ಕೇವಲ 1 ರನ್ ಇದ್ದಾಗ ಆರಂಭಿಕ ಆಟಗಾರ ಕುಸಾಲ್ ಪೆರೆರಾ (0) ಅವರನ್ನು ಪೆವಿಲಿಯಂಗೆ ವಾಪಸ್ ಕಳುಹಿಸುವ ಮೂಲಕ ಶಿಲಂಕಾ ತಂಡಕ್ಕೆ ಮೊದಲ ಹೊಡೆತ ನೀಡಿದರು. ಇದಾದ ಬಳಿಕ ಮೊಹಮ್ಮದ್ ಸಿರಾಜ್ ಅವರ ನಾಲ್ಕನೇ ಓವರ್ ಶ್ರೀಲಂಕಾ ತಂಡಕ್ಕೆ ಭಾರಿ ಸವಾಲನ್ನೇ ಎಸಗಿದೆ. ನಾಲ್ಕನೇ ಓವರ್‌ನ ಮೊದಲ ಎಸೆತದಲ್ಲಿ ಪಾತುಮ್ ನಿಸ್ಸಾಂಕ (2), ಮೂರನೇ ಎಸೆತದಲ್ಲಿ ಸದೀರ ಸಮರವಿಕ್ರಮ (0), ನಾಲ್ಕನೇ ಎಸೆತದಲ್ಲಿ ಚರಿತ್ ಅಸಲಂಕಾ (0) ಮತ್ತು ಆರನೇ ಎಸೆತದಲ್ಲಿ ಧನಂಜಯ್ ಡಿ ಸಿಲ್ವಾ (4) ಅವರನ್ನು ಹಠಾತ್ ಪೆವಿಲಿಯಂಗೆ ಅಟ್ಟುವ ಮೂಲಕ ಮೊಹಮ್ಮದ್ ಸಿರಾಜ್ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರಿ ವಿಧ್ವಂಸವನ್ನೆ ಸೃಷ್ಟಿಸಿದ್ದಾರೆ. ಇಲ್ಲಿಗೆ ನಿಲ್ಲದ ಮೊಹಮ್ಮದ್ ಸಿರಾಜ್ ಆರನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಶ್ರೀಲಂಕಾ ನಾಯಕ ದಸುನ್ ಶನಕಾ (0) ಅವರನ್ನು ಕೂಡ ಔಟ್ ಮಾಡಿ ಶ್ರೀಲಂಕಾ ತಂಡದ ಒಟ್ಟು ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ ಕೇವಲ 12 ರನ್ ಗಳಿಗೆ ಇಳಿಸಿದ್ದಾರೆ. 

ಇದನ್ನೂ ಓದಿ-ಕೆಲವೇ ಗಂಟೆಗಳಲ್ಲಿ ಧನ ರಾಜಯೋಗ ನಿರ್ಮಾಣ, 4 ರಾಶಿಗಳ ಜನರ ಜೀವನದಲ್ಲಿ ಹಣದ ಹೊಳೆಯೇ ಹರಿಸಲಿದ್ದಾಳೆ ವಿಷ್ಣುಪ್ರಿಯೆ ಲಕ್ಷ್ಮಿ!

ಏಷ್ಯಾಕಪ್ ಫೈನಲ್‌ನ ಪವರ್‌ಪ್ಲೇನಲ್ಲಿ ಮೊಹಮ್ಮದ್ ಸಿರಾಜ್ ಅಬ್ಬರ 

0,0,0,0,0,0 - 1 ನೇ ಓವರ್
W,0,W,W,4,W - 2ನೇ ಓವರ್
0,0,0,W,0,1 - 3ನೇ ಓವರ್
1,0,0,0,0,0 - 4ನೇ ಓವರ್
0,1,0,0,0,0 - 5ನೇ ಓವರ್

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

Trending News