RGV about fear : ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಪರಿಚಯದ ಅಗತ್ಯವಿಲ್ಲ. ತಮಗೆ ಇಷ್ಟವಾದುದ್ದನ್ನು ಇಷ್ಟ ಬಂದಂತೆ ಮಾಡುವುದರಲ್ಲಿ ಅವರು ಯಾರಿಗೂ ಹೆದರುವುದಿಲ್ಲ, ಕೇರ್ ಮಾಡುವುದಿಲ್ಲ. ಆರ್ಜಿವಿಗೆ ಮಾಫಿಯಾ ಡಾನ್ಗಳಿಂದ ಹಲವು ಬೆದರಿಕೆಗಳು ಸಹ ಬಂದಿದ್ದವು. ಆದರೆ, ಅವರು ಎಂದಿಗೂ ಹೆದರುವುದಿಲ್ಲ ಅಂತ ಹೇಳಿಕೊಂಡಿದ್ದರು. ಆದ್ರೆ, ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು, ಜೀವನದಲ್ಲಿ ಒಮ್ಮೆ ಮಾತ್ರ ಭಯದಿಂದ ನಡುಗಿದ್ದೇನೆ ಎಂದಿದ್ದಾರೆ.
ನನ್ನ ಜೀವನದಲ್ಲಿ ಯಾವುದೇ ಭಯವಿಲ್ಲ. ಆದರೆ, ಒಮ್ಮೆ ನಾನು 20 ಸೆಕೆಂಡುಗಳ ಕಾಲ ಹೆದರಿದ್ದೆ. ಅಂದು ನನ್ನ ಜೀವನದಲ್ಲಿ ನನಗೆ ಭಯವಾಗಿತ್ತು. ಬಾಂಬೆಯಲ್ಲಿ ಕಟ್ಟಡದ 7 ನೇ ಮಹಡಿಯಲ್ಲಿ ವಾಸಿಸುತ್ತಿದ್ದೆ. ಒಂದು ದಿನ ನಾನು ಹೊರಗೆ ಹೋಗುವ ಸಮಯದಲ್ಲಿ ಮೊದಲು ನನ್ನ ಡ್ರೈವರ್ಗೆ ಕರೆ ಮಾಡಿದ್ದೆ. ಚಾಲಕ ಕಟ್ಟಡದ ಹಿಂದಿನಿಂದ ಕಾರನ್ನು ತೆಗೆದುಕೊಂಡು ಬರಬೇಕಿತ್ತು. ಎರಡು ದ್ವಾರಗಳಿದ್ದವರು. ಒಂದು ಬಲಭಾಗದಲ್ಲಿದೆ ಮತ್ತೊಂದು ಎಡಭಾಗದಲ್ಲಿತ್ತು.
ಇದನ್ನೂ ಓದಿ: ಅದ್ಧೂರಿಯಾಗಿ ಸಪ್ತಪದಿ ತುಳಿದ ಪರಿಣಿತಿ- ರಾಘವ್ ಚಡ್ಡಾ..! ಗ್ರ್ಯಾಂಡ್ ಮದುವೆ ಬಜೆಟ್ ಎಷ್ಟು ಗೊತ್ತಾ..?
ನಾನು ಕೆಳಗೆ ಬಂದೆ. ಅಲ್ಲಿಯವರೆಗೆ ಕಾರು ಬಂದಿರಲಿಲ್ಲ. ನಾನು ಹೊರಗೆ ನೋಡಿದೆ. ಅಲ್ಲಿ ವ್ಯಾನ್ ನಿಂತಿದೆ. ನಾಲ್ವರು ನನ್ನನ್ನೇ ನೋಡುತ್ತಿದ್ದರು. ನನ್ನತ್ತ ನೋಡುತ್ತಾ ವ್ಯಾನ್ ನಿಧಾನವಾಗಿ ಹಿಂದಕ್ಕೆ ಹೋಯಿತು. ನನಗೋಸ್ಕರ ಬಂದಿದ್ದಾರಾ ಎಂಬ ಅನುಮಾನ ಬಂತು. ಆ ಸಮಯದಲ್ಲಿ ನನಗೆ ಭೂಗತ ಜಗತ್ತಿನೊಂದಿಗೆ ಭಿನ್ನಾಭಿಪ್ರಾಯವಿತ್ತು. ನಾನು ಅವರನ್ನು ನೋಡಿದಾಗ ಸ್ವಲ್ಪ ಹಿಂದೆ ಸರಿದೆ. ಆಗ ನನ್ನ ಡ್ರೈವರ್ ಬಂದ ನಂತರ.. ಮತ್ತೆ ಮುಂದೆ ಹೋದೆ. ಆಗ ಅವರು ಕಾಣಿಸಲಿಲ್ಲ.
ಅವರು ಹೋದರು ಎಂದು ನಾನು ಭಾವಿಸಿದೆ. ಕಾರು ಹತ್ತಿದೆ. ಆ ವ್ಯಾನ್ ನಮ್ಮ ಅಪಾರ್ಟ್ಮೆಂಟ್ ಒಳಗೆ ಬಂತು. ನೀವು ಯಾರು ಎಂದು ಕಾವಲುಗಾರ ಕೇಳುತ್ತಾನೆ. ಆಗ ನನಗೆ ಭಯವಾಯಿತು. ನಾನು ತಕ್ಷಣ ಕಾರಿನಿಂದ ಇಳಿದು 5 ನೇ ಮಹಡಿಗೆ ಮೆಟ್ಟಿಲುಗಳನ್ನು ಹತ್ತಿದೆ. ಅಲ್ಲಿಂದ 10ನೇ ಮಹಡಿಗೆ ಹೋದೆ. ಅಲ್ಲಿದ್ದ ಮನೆಯೊಂದರ ಬಾಗಿಲು ತಟ್ಟಿದೆ. ಅವರು ಹೊರಗೆ ಬಂದು ನನ್ನನ್ನು ಗುರುತಿಸಿದರು. ನಾನು ನನ್ನ ಫೋನ್ ಅನ್ನು ಕಾರಿನಲ್ಲಿ ಮರೆತಿದ್ದೇನೆ ಎಂದು ಅವರಿಗೆ ಹೇಳಿದೆ. ನಾನು ನಮ್ಮ ಡ್ರೈವರ್ಗೆ ಕರೆ ಮಾಡಿದೆ. ಏನಾಯ್ತು ಅಂತ ಕೇಳಿದೆ. ಆಗ ಅವರು ಲಿಫ್ಟ್ ರಿಪೇರಿ ಮಾಡಲು ಬಂದವರು ಅಂತ ತಿಳಿಯಿತು. ಆ ಸಮಯದಲ್ಲಿ ನಾನು ತುಂಬಾ ಹೆದರಿದ್ದೆ ಎಂದು ವರ್ಮಾ ಬಹಿರಂಗಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.