ವಿರಾಟ್ ಅಂದ್ರೆ ಇಷ್ಟನಾ? ಇಷ್ಟ ಇಲ್ವಾ?... ಗೌತಮ್ ಗಂಭೀರ್ ಕೊಟ್ಟ ಉತ್ತರ ಏನು ಗೊತ್ತಾ?

Gautam Gambhir Statement About Virat: ವಿರಾಟ್ ಕೊಹ್ಲಿ ಇಷ್ಟವೇ? ಇಲ್ಲವೇ ಎಂಬ ಪ್ರಶ್ನೆಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಝೀ ನ್ಯೂಸ್‌’ನ 'ದಿ ಕ್ರಿಕೆಟ್ ಶೋ' ನಲ್ಲಿ, “ನಿಮಗೆ ವಿರಾಟ್ ಕೊಹ್ಲಿ ಅಥವಾ ಮೊಹಮ್ಮದ್ ಅಮೀರ್ ಇಷ್ಟವಿಲ್ಲವೇ” ಎಂಬ ಪ್ರಶ್ನೆಯನ್ನು ಕೇಳಲಾಯಿತು.

Written by - Bhavishya Shetty | Last Updated : Oct 6, 2023, 08:44 PM IST
    • ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್
    • ತೀಕ್ಷ್ಣವಾದ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ
    • ವಿರಾಟ್ ಕೊಹ್ಲಿ ಇಷ್ಟವೇ? ಇಲ್ಲವೇ ಎಂಬ ಪ್ರಶ್ನೆಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ
ವಿರಾಟ್ ಅಂದ್ರೆ ಇಷ್ಟನಾ? ಇಷ್ಟ ಇಲ್ವಾ?... ಗೌತಮ್ ಗಂಭೀರ್ ಕೊಟ್ಟ ಉತ್ತರ ಏನು ಗೊತ್ತಾ? title=
Virat Kohli

Gautam Gambhir Statement: ಟೀಂ ಇಂಡಿಯಾದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅವರು ತಮ್ಮ ತೀಕ್ಷ್ಣವಾದ ಹೇಳಿಕೆಗಳಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇದೀಗ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದು, ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ: ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?

ವಿರಾಟ್ ಕೊಹ್ಲಿ ಇಷ್ಟವೇ? ಇಲ್ಲವೇ ಎಂಬ ಪ್ರಶ್ನೆಗೆ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ಝೀ ನ್ಯೂಸ್‌’ನ 'ದಿ ಕ್ರಿಕೆಟ್ ಶೋ' ನಲ್ಲಿ, “ನಿಮಗೆ ವಿರಾಟ್ ಕೊಹ್ಲಿ ಅಥವಾ ಮೊಹಮ್ಮದ್ ಅಮೀರ್ ಇಷ್ಟವಿಲ್ಲವೇ” ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು, “ನಾನು ಅವರನ್ನು ಇಷ್ಟಪಡುವುದಿಲ್ಲ ಎಂದು ನಿಮಗೆ ಯಾರು ಹೇಳಿದರು? ನಾನು ಈಗಾಗಲೇ ಸಾಮಾಜಿಕ ಮಾಧ್ಯಮದ ಉದಾಹರಣೆಗಳನ್ನು ನೀಡಿದ್ದೇನೆ. ಈ ಬಗ್ಗೆ ನನಗೆ ಪದೇ ಪದೇ ಸ್ಪಷ್ಟನೆ ನೀಡುವ ಅಗತ್ಯವಿಲ್ಲ” ಎಂದರು.

ಇದೇ ವೇಳೆ ಆಟಗಾರರಲ್ಲಿ ಆಗ್ರೆಸ್ಸೀವ್ ಬಿಹೇವಿಯರ್ ಕಡಿಮೆ ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ, “ ಪೀಳಿಗಳನ್ನು ಹೋಲಿಕೆ ಮಾಡುವುದು ತುಂಬಾ ಕಷ್ಟ. ನೀವು ಅದನ್ನು ಎಂದಿಗೂ ಹೋಲಿಸಬಾರದು. ಮೊದಲು ನಿಮ್ಮನ್ನು ಟೀಕಿಸುವ ವೇದಿಕೆಗಳಿರಲಿಲ್ಲ ಆದರೆ ಇಂದು ನಿಮ್ಮನ್ನು ಟೀಕಿಸುವ ಅನೇಕ ಸ್ಥಳಗಳಿವೆ. ನೀವು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಲ್ಲ” ಎಂದು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ಚಿನ್ನ ಗೆದ್ದ ಭಾರತ ಪುರುಷರ ಹಾಕಿ ತಂಡ: ಪ್ಯಾರಿಸ್ ಒಲಿಂಪಿಕ್ಸ್’ಗೆ ಟಿಕೆಟ್ ಫಿಕ್ಸ್

“ಆಗ್ರೆಸ್ಸೀವ್ ಬಿಹೇವಿಯರ್ ವೈಯಕ್ತಿಕ, ಅದು ನಮ್ಮೊಳಗಿನಿಂದ ಬರುತ್ತದೆ ಎಂದು ನಾನು ನಂಬುತ್ತೇನೆ. ಇದನ್ನು ಯಾರಿಗೂ ಕಲಿಸಲಾಗುವುದಿಲ್ಲ. ಇದು ನಿಮ್ಮ ಅನುಭವದಿಂದಲೂ ಬಂದಿರಬಹುದು. ನೀವು ಕಷ್ಟಪಟ್ಟು ಏನನ್ನಾದರೂ ಪಡೆದರೆ, ಅದರ ಮೌಲ್ಯ ನಿಮಗೆ ತಿಳಿಯುತ್ತದೆ. ನಿಮ್ಮ ಅನುಭವಗಳು ನಿಮಗೆ ಕಲಿಸುತ್ತವೆ. ಅನೇಕ ಆಟಗಾರರು ಸುಲಭವಾಗಿ ವಿಷಯಗಳನ್ನು ಪಡೆಯುವುದಿಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನದೇ ಆದ ಅನುಭವವನ್ನು ಹೊಂದಿರುತ್ತಾನೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News