Anupama Parameshwaran Traditional Look: ಕ್ಯೂಟ್ ಹೀರೋಯಿನ್ ಅನುಪಮಾ ‘ಅ..ಆ..’ ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿ ಕೊಟ್ಟ ನಟಿ ಪ್ರೇಮಂ ಚಿತ್ರದ ಮೂಲಕ ಸೌತ್ನಲ್ಲಿ ಗುರುತಿಸಿಕೊಂಡರು. ಇನ್ನು ಈ ಕರ್ಲಿ ಹೇರ್ ಬ್ಯೂಟಿ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟೀವ್.. ಇದೀಗ ಟ್ರೆಡಿಷನಲ್ ಪೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹೆಚ್ಚಿಸಿದ್ದಾರೆ.
ಮಲಯಾಳಿ ಹುಡುಗಿಯಾಗಿದ್ದರೂ ಅನುಪಮಾ ಅಚ್ಚ ತೆಲುಗು ನಟಿಯಾಗಿ ಪ್ರೇಕ್ಷಕರ ಮನಗೆದ್ದಿದ್ದಾರೆ.
ನಟಿ ಅನುಪಮಾ ಕಾರ್ತಿಕೇಯ 2 ಸಿನಿಮಾದ ಮೂಲಕ ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಪಡೆದರು.
ಇತ್ತೀಚೆಗೆ ಅನುಪಮಾ ತಮ್ಮ ಟ್ರೆಡಿಷನಲ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ವಿಶಿಷ್ಟವಾದ ಮಾಡರ್ನ್ ಡ್ರೆಸ್ಗಳಲ್ಲಿ ಈ ಕರ್ಲಿಬ್ಯೂಟಿ ಮಿಂಚುವುದನ್ನು ನಾವು ನೋಡುತ್ತಲೇ ಇರುತ್ತೇವೆ.
ಆದರೆ ಸದ್ಯ ನಟಿ ಅನುಪಮಾ ನೇರಳೆ ಬಣ್ಣದ ಸೀರೆಯಲ್ಲಿ ಕಿಚ್ಚಿಬ್ಬಿಸುವ ಲುಕ್ ನೀಡಿರುವ ಪೋಟೋಗಳನ್ನು ಶೇರ್ ಮಾಡಿದ್ದಾರೆ.
ಆ ಪೋಟೋಗಳಿಗೆ ಸೀರೆಯಲ್ಲಿ ಆಯಸ್ಕಾಂತದಂತೆ ಆಕರ್ಷಣೀಯವಾಗಿದೆ ಅನುಪಮ ಸೊಗಸು ಎಂದು ನೆಟ್ಟಿಗರು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ
ಸದ್ಯ ಸೌತ್ ಸುಂದರಿ ಅನುಪಮಾ ಮುದ್ದಾದ ನೋಟವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿರುವುದಂತೂ ಸುಳ್ಳಲ್ಲ