Gautam Gambhir Statement on Mohammad Shami: 2023ರ ವಿಶ್ವಕಪ್’ನಲ್ಲಿ ಬ್ಯಾಟ್ಸ್ಮನ್’ಗಳ ಜೊತೆಗೆ ಬೌಲರ್’ಗಳೂ ಮೇಲುಗೈ ಸಾಧಿಸುತ್ತಿದ್ದಾರೆ. ಬ್ಯಾಟ್ಸ್ಮನ್’ಗಳು ಬೌಂಡರಿ ಹಾಗೂ ಸಿಕ್ಸರ್ಗಳನ್ನು ಬಾರಿಸಿದರೆ, ಬೌಲರ್ಗಳು ಕೆಲವೇ ಓವರ್’ಗಳಲ್ಲಿ ಪಂದ್ಯಕ್ಕೆ ತಿರುವನ್ನು ನೀಡುತ್ತಿದ್ದಾರೆ. ಅಂದಗಾಗೆ ಟೂರ್ನಿಯಲ್ಲಿ ಇದುವರೆಗೆ ಆಡಿದ ಎಂಟು ಪಂದ್ಯಗಳಲ್ಲಿ ಗೆಲುವಿನದ್ದೇ ರುಚಿ ಕಂಡಿರುವ ಭಾರತ ತಂಡದ ಬಹುದೊಡ್ಡ ಶಕ್ತಿಗಳೆಂದರೆ ಬೌಲರ್’ಗಳು.
ಇದನ್ನೂ ಓದಿ: ಕೈಯಿಂದಲ್ಲ.. ಬೆನ್ನಿಂದ ಕ್ಯಾಚ್ ಹಿಡಿದ ವಿಕೆಟ್ ಕೀಪರ್! ಕ್ರಿಕೆಟ್ ಇತಿಹಾಸದಲ್ಲೇ ಕಂಡಿರದ ಅತ್ಯುತ್ತಮ ಫೀಲ್ಡಿಂಗ್ ಇದು…
ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ವೇಗದ ಬೌಲಿಂಗ್ ಜೋಡಿ, ಎದುರಾಳಿ ತಂಡದ ಬ್ಯಾಟ್ಸ್ಮನ್’ಗಳಿಗೆ ನಿದ್ದೆಯಿಲ್ಲದಂತೆ ಮಾಡಿದ್ದು ಸುಳ್ಳಲ್ಲ. ಇನ್ನೊಂದೆಡೆ ಕುಲದೀಪ್ ಮತ್ತು ಜಡೇಜಾರ ಮ್ಯಾಜಿಕ್ ಸ್ಪಿನ್ ಮತ್ತಷ್ಟು ಮೋಡಿ ಮಾಡುತ್ತಿದೆ. ಈ ಮಧ್ಯೆ ಭಾರತದ ಮಾಜಿ ಬ್ಯಾಟ್ಸ್’ಮನ್ ಗೌತಮ್ ಗಂಭೀರ್, ಈ ಮೆಗಾ ಈವೆಂಟ್’ನಲ್ಲಿ ಹೆಚ್ಚು ವಿಕೆಟ್ಗಳನ್ನು ಪಡೆಯಲಿರುವ ಭಾರತೀಯ ಬೌಲರ್ ಯಾರೆಂಬುದನ್ನು ಹೆಸರಿಸಿದ್ದಾರೆ.
ಸ್ಪೋರ್ಟ್ಸ್’ಕೋಡಾ ಜೊತೆ ಮಾತನಾಡಿದ ಗೌತಮ್ ಗಂಭೀರ್, “ಬುಮ್ರಾ ಅಲ್ಲ, ಮೊಹಮ್ಮದ್ ಶಮಿ 2023ರ ವಿಶ್ವಕಪ್’ನಲ್ಲಿ ಹೆಚ್ಚು ವಿಕೆಟ್’ಗಳನ್ನು ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಏಕೆಂದರೆ ಜಸ್ಪ್ರೀತ್ ಬುಮ್ರಾ ವಿರುದ್ಧ ಬ್ಯಾಟ್ಸ್’ಮನ್’ಗಳು ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಎದುರಾಳಿ ತಂಡಗಳ ದೃಷ್ಟಿಯಲ್ಲಿ ಬುಮ್ರಾ ಉತ್ತಮ ಬೌಲರ್" ಎಂದಿದ್ದಾರೆ.
“ಅತ್ಯುತ್ತಮ ಬೌಲರ್’ಗಳು ಅನೇಕ ಸಲ ಹೆಚ್ಚು ವಿಕೆಟ್ ಪಡೆಯಲು ಸಾಧ್ಯವಾಗೋದಿಲ್ಲ. ಇದಕ್ಕೆ ಕಾರಣ ಆ ಬೌಲರ್ ವಿರುದ್ಧ ಎದುರಾಳಿ ತಂಡಗಳು ಎಚ್ಚರಿಕೆಯಿಂದ ಆಡುವುದು. ನೀವು ಗಮನಿಸಿದರೆ, ಆರಂಭಿಕ ಸ್ಪೆಲ್’ನಲ್ಲಿ ಬುಮ್ರಾ ಅವರ ವಿರುದ್ಧ ಯಾರೂ ದೊಡ್ಡ ಹೊಡೆತಗಳನ್ನು ಆಡಲು ಪ್ರಯತ್ನಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದರು.
2023ರ ವಿಶ್ವಕಪ್’ನಲ್ಲಿ ಶಮಿ ಏಕೆ ಹೆಚ್ಚು ವಿಕೆಟ್’ಗಳನ್ನು ಕಬಳಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಗಂಭೀರ್ ಕೊಟ್ಟ ಉತ್ತರ ಹೀಗಿದೆ. "ಶಮಿ ಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ, ಏಕೆಂದರೆ ಎದುರಾಳಿ ತಂಡದ ಬ್ಯಾಟ್ಸ್ಮನ್ಗಳು ಅವರ ವಿರುದ್ಧ ದಾಳಿ ಮಾಡಲು ಹೋಗುತ್ತಾರೆ. ಇದರೊಂದಿಗೆ, ಬೌಲಿಂಗ್’ನಲ್ಲಿ ಮೊದಲ ಬದಲಾವಣೆಯಾಗಿ ಅವರು ಬರುತ್ತಾರೆ. ಬುಮ್ರಾ ಎಕ್ಸ್ ಫ್ಯಾಕ್ಟರ್. ಅವರ ಕಾರಣದಿಂದಾಗಿ ಈ ತಂಡವು ತುಂಬಾ ಪ್ರಬಲವಾಗಿದೆ, ಆದರೆ ಶಮಿ ಹೆಚ್ಚು ವಿಕೆಟ್’ಗಳನ್ನು ಪಡೆಯುವ ಸಾಮಾರ್ಥ್ಯ ಉಳ್ಳವರು” ಎಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.