ಯಡಿಯೂರಪ್ಪನವರ ಮಗ ಈಶ್ವರಪ್ಪ ಪುತ್ರನ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕುವುದು ಖಚಿತ: ಕಾಂಗ್ರೆಸ್

BJP vs BJP: ಈಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ! ಎಂದು ಕಾಂಗ್ರೆಸ್ ಟೀಕಿಸಿದೆ.

Written by - Puttaraj K Alur | Last Updated : Nov 13, 2023, 04:17 PM IST
  • ರಿಟೈರ್ಡ್ ರಾಜಾಕಾರಿಣಿ ಕೆ.ಎಸ್.ಈಶ್ವರಪ್ಪನವರೇ ಇದೆಂತಹಾ ದುಸ್ಥಿತಿ ನಿಮ್ಮದು
  • ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು
  • ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು ಎಂದು ಟೀಕಿಸಿದ ಕಾಂಗ್ರೆಸ್
ಯಡಿಯೂರಪ್ಪನವರ ಮಗ ಈಶ್ವರಪ್ಪ ಪುತ್ರನ ರಾಜಕೀಯ ಭವಿಷ್ಯಕ್ಕೆ ಕಲ್ಲು ಹಾಕುವುದು ಖಚಿತ: ಕಾಂಗ್ರೆಸ್ title=
BJP vs BJP

ಬೆಂಗಳೂರು: ಬಿ.ವೈ.ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲವೆಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಿಟೈರ್ಡ್ ರಾಜಾಕಾರಿಣಿ ಕೆ.ಎಸ್.ಈಶ್ವರಪ್ಪನವರೇ, ಇದೆಂತಹಾ ದುಸ್ಥಿತಿ ನಿಮ್ಮದು, ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು, ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು’ ಎಂದು ಕುಟುಕಿದೆ.

‘ಈಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ!’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಮಂಜೂರಾದ ಪೂರ್ತಿ ಸಾಲದ ಹಣ ನೀಡದ ಹಣಕಾಸು ಸಂಸ್ಥೆಗೆ ರೂ.1 ಲಕ್ಷ ದಂಡ

‘#BJPvsBJP ಕದನ ಈಗ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. 20, 30 ವರ್ಷಗಳಿಂದ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಪಕ್ಷದಲ್ಲಿ ಕಾಣಿಸಿಕೊಂಡು "ಯಡಿಯೂರಪ್ಪನವರ ಮಗ" ಎಂಬ ಒಂದೇ ಅರ್ಹತೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವ ಬಿ.ವೈ.ವಿಜಯೇಂದ್ರರನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ. ಒಡಕಿನ ಮನೆಯಾಗಿರುವ #FamilyJanataParty ಮುಂದೆ ಸಂಪೂರ್ಣ ನುಜ್ಜುಗುಜ್ಜಾಗುವ ಎಲ್ಲಾ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

‘ಬಿ.ಎಸ್.ಯಡಿಯೂರಪ್ಪನವರ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್ ಲೆಸ್ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದಶಕಗಳ ಕಾಲ ಪಕ್ಷದಲ್ಲಿ ದುಡಿದವರು ಹಲವರಿದ್ದರೂ "ಎಳೆ ಹುಡುಗ"ನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರೆಲ್ಲ ಅನರ್ಹರು ಎಂಬ ಸಂದೇಶ ನೀಡಿದ್ದೇ ಅಥವಾ ಕುಟುಂಬ ರಾಜಕಾರಣಕ್ಕೆ ಮಣಿದಿದ್ದೇ ? ಬಿಜೆಪಿ ಉತ್ತರಿಸುವುದೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಇದನ್ನೂ ಓದಿ: ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ:  ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

#FamilyJanataPartyಯಲ್ಲಿ ನಿವೃತ್ತಿ ಪರ್ವ!

‘ಸಿಟಿ ರವಿಯವರೇ ಈಗ ಯಡಿಯೂರಪ್ಪನವರ ಕಿಚನ್ ಕ್ಯಾಬಿನೆಟ್‍ನಲ್ಲೇ ಎಲ್ಲವೂ ನಿರ್ಧಾರವಾಗಲಿದೆ, ಅವರ ಕಿಚನ್ ಕ್ಯಾಬಿನೆಟ್‍ಗೆ ತಾವು ಹೋಗುವಿರಾ ಅಥವಾ ತಾವೂ ರಾಜಕೀಯ ನಿವೃತ್ತಿ ಪಡೆಯುವಿರಾ? ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? #FamilyJanataPartyಯಲ್ಲಿ ಇನ್ಮುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ!’ವೆಂದು ಕಾಂಗ್ರೆಸ್ ಟೀಕಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News