Mars Transit in Scorpio: ಮಂಗಳ ಇತ್ತೀಚೆಗೆ ತನ್ನದೇ ಆದ ವೃಶ್ಚಿಕ ರಾಶಿಯಲ್ಲಿ ರಾಶಿ ಪರಿವರ್ತನೆ ಹೊಂದಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೆ, ಈ ಸಮಯವು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಸಾಬೀತು ಪಡಿಸಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳ ಗ್ರಹವನ್ನು ಕಮಾಂಡರ್ ಗ್ರಹ ಎಂದು ಕರೆಯಲಾಗುತ್ತದೆ. ಇತ್ತೀಚೆಗಷ್ಟೇ ಮಂಗಳನು ತನ್ನದೇ ಆದ ರಾಶಿಚಕ್ರ ಚಿಹ್ನೆಯನ್ನು ಪ್ರವೇಶಿಸಿದ್ದಾರೆ.
ಮಂಗಳ ಗ್ರಹವು ನವೆಂಬರ್ 16, 2023ರಂದು ಬೆಳಿಗ್ಗೆ 10.46 ಕ್ಕೆ ತುಲಾ ರಾಶಿಯನ್ನು ತೊರೆದು ವೃಶ್ಚಿಕ ರಾಶಿಗೆ ಪ್ರವೇಶಿಸಿದ್ದಾನೆ. ಡಿಸೆಂಬರ್ 27 ರ ಮಧ್ಯರಾತ್ರಿಯವರೆಗೂ ಮಂಗಳ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಮಂಗಳ ರಾಶಿ ಪರಿವರ್ತನೆಯು ಎಲ್ಲಾ 12 ರಾಶಿಯವರ ಜೀವನದಲ್ಲೂ ಶುಭ ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಆದರೆ, ಮುಂದಿನ ಒಂದು ತಿಂಗಳುಗಳ ಕಾಲ ಕೆಲವು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮಂಗಳ ರಾಶಿ ಪರಿವರ್ತನೆಯಿಂದ ಮೇಷ ರಾಶಿಯವರ ಆರೋಗ್ಯ ಸುಧಾರಣೆ ಕಾಣಲಿದೆ. ಭೂಮಿ, ಆಸ್ತಿ ಖರೀದಿಯಿಂದ ಲಾಭವಾಗಲಿದ್ದು, ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ.
ವೃಶ್ಚಿಕ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರವು ಮಿಥುನ ರಾಶಿಯವರಿಗೆ ವರದಾನಕ್ಕಿಂತ ಕಡಿಮೆ ಇಲ್ಲ. ಈ ಸಮಯದಲ್ಲಿ ನ್ಯಾಯಾಲಯದ ಪ್ರಕರಣಗಳು ನಿಮ್ಮ ಪರವಾಗಿ ಇತ್ಯರ್ಥವಾಗಲಿವೆ. ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ.
ಮಂಗಳ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರ ಜೀವನದಲ್ಲೂ ಅನುಕೂಲಕರ ಫಲಗಳನ್ನು ತರಲಿದೆ. ಆದಾಗ್ಯೂ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸ್ವಲ್ಪ ಕಷ್ಟಪಟ್ಟು ಪ್ರಯತ್ನಿಸಿ. ನವವಿವಾಹಿತ ದಂಪತಿಗಳಿಗೆ ಸಂತಾನ ಭಾಗ್ಯವಿದೆ.
ಮಂಗಳ ರಾಶಿ ಬದಲಾವಣೆಯು ಸಿಂಹ ರಾಶಿಯವರ ಜೀವನದಲ್ಲಿ ಆಹ್ಲಾದಕರ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ಹೊಸ ವಾಹನ ಖರೀದಿ ಯೋಗವಿದ್ದು, ದೀರ್ಘ ಸಮಯದ ಸಮಸ್ಯೆಗಳಿಂದ ಪರಿಹಾರವನ್ನೂ ಪಡೆಯುವಿರಿ.
ಸ್ವ ರಾಶಿಯಲ್ಲಿ ಮಂಗಳ ಸಂಚಾರವು ವೃಶ್ಚಿಕ ರಃಶಿಯವರಿಗೆ ಜೀವನದ ಅನೇಕ ಆಯಾಮಗಳಲ್ಲಿ ಫಲಪ್ರದವಾಗಿದೆ ಎಂದು ಸಾಬೀತುಪಡಿಸಲಿದೆ. ಸ್ಥಿರಾಸ್ತಿಗೆ ಸಂಬಂಧಿಸಿದ ವಿಷಯಗಳು ಇತ್ಯರ್ಥವಾಗಲಿವೆ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.