ಲಕ್ನೋ: ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನೀರಿನ ಸಂರಕ್ಷಣೆ ಬಗ್ಗೆ ವಿಶಿಷ್ಟ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ. ವಿಧಾನಸಭೆಯ ಸ್ಪೀಕರ್, ಗುರುವಾರ (ಜುಲೈ 18) ನಾರಾಯಣ್ ದೀಕ್ಷಿತ್, 'ನೀರಿನ ಸಂರಕ್ಷಣೆ' ಬಗ್ಗೆ ನಿರ್ದೇಶನ ನೀಡಿದರು. "ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ". ಈ ಕಾರ್ಯ ಅಸೆಂಬ್ಲಿ ಆವರಣದಿಂದಲೇ ಮೊದಲಿಗೆ ಆರಂಭವಾಗಲಿ ಎಂದು ತಿಳಿಸಿದ ಸ್ಪೀಕರ್, ನೀರು ಉಳಿಸಲು ಎಲ್ಲರಿಗೂ ಮೊದಲ ಅರ್ಧ ಗ್ಲಾಸ್ ನೀರನ್ನು ನೀಡಬೇಕು ಎಂದು ಸೂಚನೆ ನೀಡಿದರು. ಬಳಿಕ ಅಗತ್ಯವಿದ್ದರೆ ಮಾತ್ರ ನೀರನ್ನು ಕೇಳಿ ಪಡೆಯಬಹುದು ಎಂದು ಅವರು ಸಭೆಗೆ ತಿಳಿಸಿದರು.
ನೀರು ಅನೇಕ ಬಾರಿ ವ್ಯರ್ಥವಾಗುತ್ತದೆ:
"ವಿಧಾನಸಭೆಯಲ್ಲಿ ಹಲವು ಬಾರಿ ಲೋಟದಲ್ಲಿರುವ ನೀರನ್ನು ಪೂರ್ಣ ಬಳಸದೆ ವ್ಯರ್ಥವಾಗುವುದನ್ನು ಕಾಣುತ್ತೇವೆ ಎಂದು ಸದನದ ಗಮನ ಸೆಳೆದ ಸ್ಪೀಕರ್, ನಾವೆಲ್ಲರೂ ನೀರನ್ನು ಸಂರಕ್ಷಿಸಬೇಕು. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಅಸೆಂಬ್ಲಿ ಕಾಂಪ್ಲೆಕ್ಸ್ ಮತ್ತು ಸೆಕ್ರೆಟರಿಯೇಟ್ನ ಎಲ್ಲಾ ವಿಭಾಗಗಳಲ್ಲಿ ಅರ್ಧ ಗ್ಲಾಸ್ ನೀರನ್ನು ಮಾತ್ರ ನೀಡಿ" ಎಂದು ನಿರ್ದೇಶಿಸಿದರು.
Uttar Pradesh Assembly Speaker, Hriday Narayan Dikshit directs staff of the Assembly Secretariat to offer "only half a glass of water at first, as it is often seen that a whole glass is not used", in a bid to conserve water. pic.twitter.com/ehvgmoXYB0
— ANI UP (@ANINewsUP) July 18, 2019
ನೀರಿನ ಸಂರಕ್ಷಣೆಗಾಗಿ ಬೇಡಿಕೆ:
ವಿಧಾನಸಭೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರು ಈ ವ್ಯವಸ್ಥೆಯನ್ನು ತಕ್ಷಣದಿಂದಲೇ ಅನುಸರಿಸಬೇಕು. ತಕ್ಷಣದ ಪರಿಣಾಮದ ಅನುಸರಣೆಯನ್ನು ಖಚಿತಪಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
2030 ರ ವೇಳೆಗೆ ಪರಿಸ್ಥಿತಿ ಭೀಕರ:
ಭಾರತವು ಇತಿಹಾಸದಲ್ಲಿ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂದು ನೀತಿ ಆಯೋಗವು ಈಗಾಗಲೇ ಹೇಳಿದೆ. ಪ್ರತಿದಿನ 60 ದಶಲಕ್ಷ ಜನರು ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ. ಪ್ರತಿವರ್ಷ ಸುಮಾರು 2 ಲಕ್ಷ ಜನರು ಶುದ್ಧ ಕುಡಿಯುವ ನೀರನ್ನು ಪಡೆಯುತ್ತಿದ್ದಾರೆ. ದೇಶದ 75 ಪ್ರತಿಶತದಷ್ಟು ಮನೆಗಳಲ್ಲಿ ನೀರು ಸರಬರಾಜಾಗುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ 2030 ರ ಹೊತ್ತಿಗೆ ನೀರಿನ ಕೊರತೆ ಹೆಚ್ಚಾಗುತ್ತದೆ. ಹಾಗಾಗಿ ನೀರಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ.