ಕಲಿಯುಗ ನ್ಯಾಯದ ದೇವರು ಎಂದು ಕರೆಯಲ್ಪಡುವ ಶನಿ ದೇವನು 2024ರಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸುವುದಿಲ್ಲ. ಮೂವತ್ತು ವರ್ಷಗಳ ಬಳಿಕ ಕುಂಭ ರಾಶಿಗೆ ಪ್ರವೇಶಿಸಿರುವ ಶನಿ ದೇವನು 2024ರಲ್ಲಿಯೂ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಶನಿ ಸಾಡೇಸಾತಿ- ಧೈಯಾ ಪ್ರಭಾವ : ಆದಾಗ್ಯೂ, 2024ರಲ್ಲಿಯೂ ಕುಂಭ ರಾಶಿಯಲ್ಲಿಯೇ ಇರುವ ಶನಿಯ ಸಾಡೇಸಾತಿ ಹಾಗೂ ಧೈಯಾ ಪ್ರಭಾವವು ಕೆಲವು ರಾಶಿಯವರನ್ನು ಬೆಂಬಿಡದೆ ಕಾಡಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಕರ್ಕಾಟಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2024ರಲ್ಲಿ ಕರ್ಕಾಟಕ ರಾಶಿಯ ಜನರು ಶನಿಯ ಧೈಯಾ ಪ್ರಭಾವವನ್ನು ಎದುರಿಸಬೇಕಾಗುತ್ತದೆ. ಈ ಸಮಯದಲ್ಲಿ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಜೊತೆಗೆ ಕೆಲಸ ಕಾರ್ಯಗಳಲ್ಲಿ ಎಚ್ಚರಿಕೆಯಿಂದ ಇರಿ.
ವೃಶ್ಚಿಕ ರಾಶಿ: 2024ರಲ್ಲಿಯೂ ಸಹ ವೃಶ್ಚಿಕ ರಾಶಿಯವರು ಶನಿಯ ಧೈಯಾ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಈ ವರ್ಷ ನೀವು ಉದ್ಯೋಗ ರಂಗದಲ್ಲಿ ಸಾಕಷ್ಟು ಏರಿಳಿತಗಳನ್ನು ಕಾಣಬಹುದು. ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು.
ಶನಿ ಸಾಡೇ ಸಾತಿ ಪ್ರಭಾವ: ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 2024ರಲ್ಲಿ ಮೂರು ರಾಶಿಯವರ ಮೇಲೆ ಶನಿ ಸಾಡೇಸಾತಿ ಪ್ರಭಾವ ಕಂಡು ಬರುತ್ತದೆ. ಆ ರಾಶಿಗಳೆಂದರೆ...
ಮಕರ ರಾಶಿ: 2024ರಲ್ಲಿ ಮಕ್ರ ರಾಶಿಯವರಿಗೆ ಶನಿ ಸಾಡೇಸಾತಿಯ ಮೂರನೇ ಹಂತ ಆರಂಭವಾಗಲಿದೆ. ಇದರಿಂದಾಗಿ ನೀವು ಕೆಲಸಕಾರ್ಯಗಳಲ್ಲಿ ಅಡತಡೆಗಳನ್ನು ಎಉದ್ರಿಸಬೇಕಾಗಬಹುದು. ಕೌಟುಂಬಿಕ ಸುಖ-ಸಂತೋಷದಲ್ಲಿ ಕೊರತೆ ಕಾಣಬಹುದು.
ಕುಂಭ ರಾಶಿ: ಮುಂದಿನ ವರ್ಷ ಕುಂಭ ರಾಶಿಯವರಿಗೆ ಶನಿ ಸಾಡೇ ಸಾತಿಯ ಎರಡನೇ ಹಂತ ಆರಂಭವಾಗಲಿದೆ. ಇದರ ಪ್ರಭಾವದಿಂದಾಗಿ ವ್ಯಾಪಾರ-ವ್ಯವಹಾರದಲ್ಲಿ ನಾನಾ ರೀತಿಯ ಸಂಕಷ್ಟಗಳನ್ನು ಅನುಭವಿಸಬಹುದು. ಕುಟುಂಬದಿಂದ ದೂರವಾಗುವ ಸಾಧ್ಯತೆಯೂ ಇದೆ.
ಮೀನ ರಾಶಿ: ಮೀನ ರಾಶಿಯವರಿಗೆ 2024ರಲ್ಲಿ ಶನಿ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. ಈ ಹಂತವು ವ್ಯಕ್ತಿಯ ಆರ್ಥಿಕ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. ಹಣದ ನಷ್ಟದ ಜೊತೆಗೆ ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
ಶನಿ ಸಾಡೇಸಾತಿ, ಧೈಯಾ ಪ್ರಭಾವವನ್ನು ಕಡಿಮೆ ಮಾಡಲು ಶನಿವಾರದಂದು ಶನಿ ದೇವರನ್ನು ಪೂಜಿಸಿ, ಶನಿಸ್ತೋತ್ರವನ್ನು ಪಠಿಸಬೇಕು. ಕಪ್ಪು ವಸ್ತುಗಳನ್ನು ಅಗತ್ಯವಿದ್ದವರಿಗೆ ದಾನ ಮಾಡುವುದರಿಂದ ಶನಿಯ ಪ್ರಭಾವ ಕಡಿಮೆಯಾಗುತ್ತದೆ. ಪ್ರತಿ ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸಾವನ್ನು ಪಠಿಸಬೇಕು.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.