ನಾನು ಹೇಳಿದಂತೆ ಮಾಡಿದ್ರೆ ವಿರಾಟ್ ಪಕ್ಕಾ ಔಟ್ ಆಗ್ತಾರೆ… ಸೀಕ್ರೆಟ್ ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್

AB de Villiers on Virat Kohli: ಟೆಸ್ಟ್ ಕ್ರಿಕೆಟ್‌ ಮಾದರಿಯಲ್ಲಿ ದಕ್ಷಿಣ ಆಫ್ರಿಕಾದ ಪಿಚ್‌’ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ವಿರಾಟ್ ಕೊಹ್ಲಿ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 51.35ರ ಸರಾಸರಿಯಲ್ಲಿ 719 ರನ್ ಗಳಿಸಿದ್ದಾರೆ.

Written by - Bhavishya Shetty | Last Updated : Dec 25, 2023, 06:08 PM IST
    • ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್
    • ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಡೆಯಲಿರುವ ಟೆಸ್ಟ್ ಸರಣಿ
    • ದಕ್ಷಿಣ ಆಫ್ರಿಕಾದ ಪಿಚ್‌’ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ
ನಾನು ಹೇಳಿದಂತೆ ಮಾಡಿದ್ರೆ ವಿರಾಟ್ ಪಕ್ಕಾ ಔಟ್ ಆಗ್ತಾರೆ… ಸೀಕ್ರೆಟ್ ಬಿಚ್ಚಿಟ್ಟ ಎಬಿ ಡಿವಿಲಿಯರ್ಸ್ title=
AB de Villiers

AB de Villiers on Virat Kohli: ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮತ್ತು ಭಾರತದ ಬ್ಯಾಟಿಂಗ್ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ನಡುವಿನ ಸ್ನೇಹದ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ.

ಇದನ್ನೂ ಓದಿ: Arbaaz Shura Marriage: 56 ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಸಲ್ಮಾನ್ ಖಾನ್ ಸಹೋದರ!    

ಆದರೆ ಎಬಿ ಡಿವಿಲಿಯರ್ಸ್ ಈ ಗೆಳೆತನವನ್ನು ಬದಿಗೊತ್ತಿ ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಮುನ್ನ ಆತಿಥೇಯ ತಂಡದ ಬೌಲರ್‌’ಗಳಿಗೆ ಉಪಾಯವೊಂದನ್ನು ನೀಡಿದ್ದಾರೆ. ಇದರಲ್ಲಿ ವಿರಾಟ್ ಕೊಹ್ಲಿಯನ್ನು ಸುಲಭವಾಗಿ ಹೇಗೆ ಔಟ್ ಮಾಡಬಹುದು ಎಂಬುದನ್ನು ತಿಳಿಸಿಕೊಟ್ಟಿದ್ದಾರೆ.

ಟೆಸ್ಟ್ ಕ್ರಿಕೆಟ್‌ ಮಾದರಿಯಲ್ಲಿ ದಕ್ಷಿಣ ಆಫ್ರಿಕಾದ ಪಿಚ್‌’ಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಆಟಗಾರ ವಿರಾಟ್ ಕೊಹ್ಲಿ. ದಕ್ಷಿಣ ಆಫ್ರಿಕಾದಲ್ಲಿ ಇದುವರೆಗೆ 7 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ, 51.35ರ ಸರಾಸರಿಯಲ್ಲಿ 719 ರನ್ ಗಳಿಸಿದ್ದಾರೆ. ಇದೀಗ ಮತ್ತೊಮ್ಮೆ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಲಿಷ್ಠ ಪ್ರದರ್ಶನ ನೀಡುವ ಜವಾಬ್ದಾರಿ ಕೊಹ್ಲಿ ಹೆಗಲ ಮೇಲಿದೆ.

ಈ ಮಧ್ಯೆ ಡಿಸೆಂಬರ್ 26 ರಿಂದ ಸೆಂಚುರಿಯನ್‌’ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್‌’ಗೆ ಮುಂಚಿತವಾಗಿ, ಟೆಸ್ಟ್ ಕ್ರಿಕೆಟ್‌’ನಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಇರುವ ಒಂದೇ ಒಂದು ಮಾರ್ಗದ ಬಗ್ಗೆ ಎಬಿ ಡಿವಿಲಿಯರ್ಸ್ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಹೊಸ ವ್ಯವಹಾರದಲ್ಲಿ ರಾಮ್ ಚರಣ್...ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ ಗೆ ಗ್ಲೋಬಲ್ ಸ್ಟಾರ್ ಎಂಟ್ರಿ! 

ಪಿಟಿಐಗೆ‌ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಅವರು, “ಕೊಹ್ಲಿಯನ್ನು ‌ಸುಲಭವಾಗಿ ಔಟ್ ಮಾಡಬೇಕೆಂದರೆ, ನಾಲ್ಕನೇ ಸ್ಟಂಪ್ ಮೇಲೆಯೇ ಪದೇ ಪದೇ ಬೌಲ್ ಮಾಡಬೇಕು. ಯಾವುದಕ್ಕೂ ಈ ಟ್ರಿಕ್ಸ್’ನ್ನು‌ ತಪ್ಪಿಸಬಾರದು. ವಿಕೆಟ್ ಕಾಪಾಡಿಕೊಳ್ಳಲು ಯತ್ನಿಸುತ್ತಿದ್ದರೂ ಅವಕಾಶ ಮಿಸ್ ಮಾಡಿಕೊಳ್ಳಬಾರದು. ಇದೇ‌ ಲೈನ್ ಆಂಡ್ ಲೆಂತ್’ನಲ್ಲಿ ಬೌಲಿಂಗ್ ಮಾಡಿದರೆ ಖಂಡಿತವಾಗಿ ಔಟಾಗುತ್ತಾರೆ” ಎಂದು ಅವರು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News