Shukra Nakshatra Parivartan 2024: ಮೂರು ದಿನಗಳ ಬಳಿಕ 3 ರಾಶಿಗಳ ಜನರ ಕೃಪೆ ತೋರಲಿದ್ದಾನೆ ಶುಕ್ರ, ಉನ್ನತಿಯ ಜೊತೆಗೆ ಅಪಾರ ಧನಪ್ರಾಪ್ತಿ!

Shukra Shravana Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಶುಕ್ರನ ಶ್ರವಣಾ ನಕ್ಷತ್ರ ಗೋಚರ ನೆರವೇರಲಿದೆ. ಇದರಿಂದ ಕೆಲ ಜನರ ಜಾವನದಲ್ಲಿ ಖುಷಿಗಳೆ, ಖುಷಿಗಳ ಆಗಮನವಾಗಲಿದೆ.  (Spiritual News In Kannada)
 

Shukra Nakshatra Gochar 2024: ದೈತ್ಯರ ಗುರು ಹಾಗೂ ಧನವೈಭವ ಹಾಗೂ ಆಕರ್ಷಣೆಯ ಕಾರಕ ಗ್ರಹ ಶುಕ್ರ ಪ್ರಸ್ತುತ ಧನು ರಾಶಿಯಲ್ಲಿ ವಿರಾಜಮಾನನಾಗಿದ್ದು, ಫೆಬ್ರುವರಿ 12 ರಂದು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಶುಕ್ರ ತನ್ನ ರಾಶಿಯ ಜೊತೆಗೆ ನಕ್ಷತ್ರ ಪರಿವರ್ತನೆ ಕೂಡ ಮಾಡುತ್ತಾನೆ. ಪ್ರಸ್ತುತ ಶುಕ್ರ ಅನುರಾಧಾ ನಕ್ಷತ್ರದಲ್ಲಿದ್ದು, ಫೆಬ್ರುವರಿ 20 ರಂದು ಶ್ರವಣಾ ನಕ್ಷತ್ರಕ್ಕೆ ಪ್ರವೇಶಿಸಲಿದ್ದಾನೆ. ಶ್ರವಣಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ ಕೆಲ ರಾಶಿಗಳ ಜನರ ಜೀವನದಲ್ಲಿ ಭಾರಿ ಧನ ಸಂಪತ್ತು ಪ್ರಾಪ್ತಿಗೆ ಕಾರಣವಾಗಲಿದೆ. ಬನ್ನಿ ಇದರಿಂದ ಯಾವ ರಾಶಿಗಳ ಜನರಿಗೆ ಅಪಾರ ಲಾಭವಾಗಲಿದೆ ತಿಳಿದುಕೊಳ್ಳೋಣ, (Spiritual News In Kannada)

 

ಇದನ್ನೂ ಓದಿ-Mahalakshmi Yog 2024: ಮಕರ ರಾಶಿಯಲ್ಲಿ ಪವರ್ಫುಲ್ ಮಹಾಲಕ್ಷ್ಮೀ ಯೋಗ ರಚನೆ, ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶ್ರವಣಾ ನಕ್ಷತ್ರಕ್ಕೆ 27 ನಕ್ಷತ್ರಗಳಲ್ಲಿ 22ನೇ ಸ್ಥಾನ ಪ್ರಾಪ್ತಿಯಾಗಿದೆ. ಈ ನಕ್ಷತ್ರಕ್ಕೆ ಚಂದ್ರ ಹಾಗೂ ಶ್ರೀವಿಷ್ಣು ಅಧಿಪತಿ. ಹೀಗಿರುವಾಗ ಶುಕ್ರನ ಶ್ರವಣಾ ನಕ್ಷತ್ರ ಪ್ರವೇಶದಿಂದ ಆಧ್ಯಾತ್ಮದತ್ತ ನಿಮ್ಮ ಒಲವು ಅಪಾರ ಹೆಚ್ಚಾಗಲಿದೆ.   

2 /5

ಮೇಷ ರಾಶಿ: ನಿಮ್ಮ ಗೋಚರ ಜಾತಕದ ದಶಮಭಾವದಲ್ಲಿ ಶುಕ್ರನ ಈ ಶ್ರವಣಾ ನಕ್ಷತ್ರ ಗೋಚರ ನೆರವೇರಲಿದೆ. ಇದರಿಂದ ಮೇಷ ರಾಶಿಯ ಜಾತಕದವರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸಿನ ಜೊತೆಗೆ ಅಪಾರ ಧನಲಾಭ ಉಂಟಾಗಲಿದೆ. ದೀರ್ಘ ಕಾಲದಿಂದ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ. ವೃತ್ತಿ ಜೀವನದ ಕುರಿತು ಹೇಳುವುದಾದರೆ. ಅಪಾರ ಯಶಸ್ಸಿನ ಜೊತೆಗೆ ಸಾಧನೆಗಳು ನಿಮ್ಮದಾಗಲಿವೆ. ಸಂಗಾತಿಯ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ. ನಿಮ್ಮ ಮದ್ಯೆ ಏರ್ಪಟ್ಟ ಒತ್ತಡ ನಿವಾರಣೆಯಾಗಲಿದೆ. ವ್ಯಾಪಾರ ಕ್ಷೇತ್ರದ ಕುರಿತು ಹೇಳುವುದಾದರೆ, ವಿಭಿನ್ನ ಮಾರ್ಗಗಳಿಂದ ಸಾಕಷ್ಟು ಹಣಗಳಿಕೆ ಮಾಡುವಿರಿ. ದೊಡ್ಡ ಡೀಲ್ ಹಾಗೂ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹೀಗಿರುವಾಗ ಈ ರಾಶಿಗಳ ಜನರ ಆರ್ಥಿಕ ಸ್ಥಿತಿಯಲ್ಲಿ ಅಪಾರ ಸುಧಾರಣೆಯಾಗಲಿದೆ.   

3 /5

ಧನು ರಾಶಿ: ಧನು ಜಾತಕದವರ ಪಾಲಿಗೆ ಶುಕ್ರ ಶ್ರವಣಾ ನಕ್ಷತ್ರದ ದ್ವಿತೀಯ ಭಾವದಲ್ಲಿ ವಿರಾಜಮಾನನಾಗಲಿದ್ದಾನೆ. ಹೀಗಿರುವಾಗ ಈ ರಾಶಿಗಳ ಜನರಿಗೆ ಅಪಾರ ಧನ ಸಂಪತ್ತು ಪಾಪ್ತಿಯಾಗಲಿದೆ ನೌಕರಿ ಹಾಗೂ ವ್ಯಾಪಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಣಗಳಿಕೆಗೆ ಅವಕಾಶ ಸಿಗಲಿದೆ. ಇದರೊಂದಿಗೆ ನಿಂತು ಹೋದ ಕಾರ್ಯಗಳಿಗೂ ಕೂಡ ಪುನಃ ಗತಿ ಸಿಗಲಿದೆ. ಈ ಅವಧಿಯಲ್ಲಿ ನೀವು ಅಪಾರ ಹಣ ಉಳಿತಾಯ ಮಾಡುವಲ್ಲಿಯೂ ಕೂಡ ಯಶಸ್ವಿಯಾಗುವಿರಿ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ ಹಾಗೂ ಮಕ್ಕಳ ಕಡೆಯಿಂದ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ. ಶ್ರವಣಾ ನಿಯಕ್ಷತ್ರದಲ್ಲಿ ಶುಕ್ರನ ಗೋಚರ ಸುಖ ಸೌಕರ್ಯಗಳನ್ನು ವೇಗವಾಗಿ ಹೆಚ್ಚಿಸಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸಿನ ಜೊತೆಗೆ ಸಮಾಜದಲ್ಲಿ ಘನತೆ ಗೌರವ ಹೆಚ್ಚಿಸಲಿದೆ.   

4 /5

ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೆ ಶುಕ್ರ ಶ್ರವಣಾ ನಕ್ಷತ್ರದ ದ್ವಾದಶ ಭಾವದಲ್ಲಿ ಇರಲಿದ್ದಾನೆ. ಇದರಿಂದ ವಿದೇಶಕ್ಕೆ ತೆರಳಬೇಕೆಂಬ ನಿಮ್ಮ ಕನಸು ಪೂರ್ಣಗೊಳ್ಳಲಿದೆ. ಇದಲ್ಲದೆ ಆಧ್ಯಾತ್ಮದಲ್ಲಿ ನಿಮ್ಮ ಸದಭಿರುಚಿ ಹೆಚ್ಚಾಗಲಿದೆ. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ಮುಂಚೂಣಿಯಲ್ಲಿಡುಕೊಂಡು ಭಾಗವಹಿಸುವುರಿ. ಇದಲ್ಲದೆ ವಿದೇಶದಲ್ಲಿ ನೀವು ಮಾಡುತ್ತಿರುವ ವ್ಯಾಪಾರದಲ್ಲಿಯೂ ಕೂಡ ನಿಮಗೆ ಅಪಾರ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಪೊರೇಟ್ ಹಾಗೂ ವ್ಯಾಪಾರ ವೇದಿಕೆಗೆ ವಿದೇಶ ಯಾತ್ರೆ ಅತ್ಯುತ್ತಮ ಸಾಬೀತಾಗಲಿದೆ. ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಸಿಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)