IND vs ENG, 3rd Test: ರಾಜ್ ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೂರನೇ ದಿನ ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅತ್ಯಂತ ಬಿರುಸಿನ ಶೈಲಿಯಲ್ಲಿ ಬೌಲಿಂಗ್ ಮಾಡಿ ಪ್ರವಾಸಿ ತಂಡದ ಬ್ಯಾಟಿಂಗ್ ಲೈನ್ಅಪ್ ಅನ್ನು ನಾಶಪಡಿಸಿದರು.
ರಾಜ್ಕೋಟ್’ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಕಿಲ್ಲರ್ ಬೌಲಿಂಗ್’ನಲ್ಲಿ 4 ವಿಕೆಟ್ ಪಡೆದು ಇಂಗ್ಲೆಂಡ್’ನ ಮೊದಲ ಇನ್ನಿಂಗ್ಸ್ ಅನ್ನು 319 ರನ್’ಗಳಿಗೆ ಆಲೌಟ್ ಮಾಡುವಲ್ಲಿ ದೊಡ್ಡ ಪಾತ್ರ ವಹಿಸಿದರು.
ಇದನ್ನೂ ಓದಿ: ಈ ನಗರವನ್ನು ಭಾರತದ ಸ್ಕಾಟ್ಲ್ಯಾಂಡ್ ಎಂದು ಕರೆಯಲಾಗುತ್ತದೆ.. ಕಾರಣ ಏನು ಗೊತ್ತಾ?
ಒಂದು ಬಾರಿ ಇಂಗ್ಲೆಂಡ್ ತಂಡ 35 ಓವರ್ಗಳಲ್ಲಿ 207 ರನ್ ಗಳಿಸಿ 8 ವಿಕೆಟ್’ಗಳನ್ನು ಉಳಿಸಿಕೊಂಡಿತ್ತು. ಇಲ್ಲಿಂದ ಇಂಗ್ಲೆಂಡ್ ತಂಡ ಸುಲಭವಾಗಿ 500 ರನ್ ಗಳ ಗಡಿ ದಾಟಬಹುದಿತ್ತು. ಆದರೆ ರವಿಚಂದ್ರನ್ ಅಶ್ವಿನ್ ಅನುಪಸ್ಥಿತಿಯಲ್ಲಿ ಭಾರತದ ಬೌಲರ್’ಗಳು ಅದ್ಭುತ ಪ್ರದರ್ಶನ ನೀಡಿ ಆಂಗ್ಲ ಬ್ಯಾಟ್ಸ್ಮನ್’ಗಳನ್ನು ಮಂಡಿಯೂರುವಂತೆ ಮಾಡಿದರು.
ಮೊಹಮ್ಮದ್ ಸಿರಾಜ್ ಇಂಗ್ಲೆಂಡ್ ವಿರುದ್ಧದ ಮೊದಲ ಇನಿಂಗ್ಸ್’ನಲ್ಲಿ ಅದ್ಭುತ ಬೌಲಿಂಗ್ ಮಾಡಿದ್ದು, 21.1 ಓವರ್’ಗಳಲ್ಲಿ 84 ರನ್’ಗಳಿಗೆ 4 ವಿಕೆಟ್ ಪಡೆದರು. ಇಂಗ್ಲೆಂಡ್ ತಂಡದ ಸ್ಕೋರ್ ಒಂದು ಬಾರಿ 2 ವಿಕೆಟ್’ಗೆ 224 ರನ್ ಆಗಿದ್ದರೂ 319 ರನ್ಗಳಿಗೆ ಆಲೌಟ್ ಆಗಿತ್ತು. ಕೇವಲ 95 ರನ್ ಗಳಿಸುವಷ್ಟರಲ್ಲಿ ಇಂಗ್ಲೆಂಡ್ ತನ್ನ ಕೊನೆಯ 8 ವಿಕೆಟ್’ಗಳನ್ನು ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಇಂಗ್ಲೆಂಡ್’ನ ಮೊದಲ ಇನ್ನಿಂಗ್ಸ್ನಲ್ಲಿ ಒಲಿ ಪೋಪ್ (39), ಬೆನ್ ಫಾಕ್ಸ್ (13), ರೆಹಾನ್ ಅಹ್ಮದ್ (6) ಮತ್ತು ಜೇಮ್ಸ್ ಆಂಡರ್ಸನ್ (1) ಅವರನ್ನು ಔಟ್ ಮಾಡಿದ್ದರು. ಸಿರಾಜ್ ಅವರ ಬಿರುಸಿನ ಬೌಲಿಂಗ್’ನಿಂದಾಗಿ ಇಂಗ್ಲೆಂಡ್ ತಂಡ 319 ರನ್’ಗಳಿಗೆ ಕುಸಿದಿತ್ತು.
ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್’ನಲ್ಲಿ 319 ರನ್’ಗಳಿಗೆ ಆಲೌಟ್ ಆಗಿದೆ. ಬೆನ್ ಡಕೆಟ್ ಈ ಇನ್ನಿಂಗ್ಸ್’ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ 153 ರನ್ ಗಳಿಸಿದರು. ಟೀಂ ಇಂಡಿಯಾ ಪರ ಮೊಹಮ್ಮದ್ ಸಿರಾಜ್ ಮೊದಲ ಇನ್ನಿಂಗ್ಸ್’ನಲ್ಲಿ ಗರಿಷ್ಠ 4 ವಿಕೆಟ್ ಪಡೆದರು. ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ತಲಾ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ ಮತ್ತು ರವಿಚಂದ್ರನ್ ಅಶ್ವಿನ್ ತಲಾ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: ದಂಗಲ್ ಸಿನಿಮಾದಲ್ಲಿ ಅಮೀರ್ ಖಾನ್ ಜೊತೆ ಅಭಿನಯಿಸಿದ್ದ ಖ್ಯಾತ ಬಾಲನಟಿ ನಿಗೂಢ ಸಾವು
ಭಾರತ ಮೊದಲ ಇನಿಂಗ್ಸ್ನಲ್ಲಿ 445 ರನ್ ಗಳಿಸಿತ್ತು. ನಾಯಕ ರೋಹಿತ್ ಶರ್ಮಾ ಭಾರತ ಪರ ಗರಿಷ್ಠ 131 ರನ್ ಗಳಿಸಿದರೆ, ಆಲ್ ರೌಂಡರ್ ರವೀಂದ್ರ ಜಡೇಜಾ 112 ರನ್ ಕೊಡುಗೆ ನೀಡಿದರು. ಮೊದಲ ಇನ್ನಿಂಗ್ಸ್’ನಲ್ಲಿ ಇಂಗ್ಲೆಂಡ್ ಪರ ಮಾರ್ಕ್ ವುಡ್ ಗರಿಷ್ಠ 4 ವಿಕೆಟ್ ಪಡೆದಿದ್ದಾರೆ. ರೆಹಾನ್ ಅಹ್ಮದ್ 2 ವಿಕೆಟ್ ಪಡೆದರೆ, ಜೇಮ್ಸ್ ಆಂಡರ್ಸನ್, ಜೋ ರೂಟ್ ಮತ್ತು ಟಾಮ್ ಹಾರ್ಟ್ಲಿ ತಲಾ ಒಂದೊಂದು ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು
ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್