/kannada/photo-gallery/biggboss-11-first-elimination-yamuna-srinidhi-husband-and-children-249346 ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌  ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌ 249346

ಸೆ.17ಕ್ಕೆ ಪ್ರಧಾನಿ ಮೋದಿ ಜನ್ಮದಿನ: ಬಿಜೆಪಿಯಿಂದ 6 ದಿನಗಳ 'ಸೇವಾ ಸಪ್ತಾಹ' ಆರಂಭ

ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ದಾ ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದರು.

Last Updated : Sep 14, 2019, 09:10 AM IST
ಸೆ.17ಕ್ಕೆ ಪ್ರಧಾನಿ ಮೋದಿ ಜನ್ಮದಿನ: ಬಿಜೆಪಿಯಿಂದ 6 ದಿನಗಳ 'ಸೇವಾ ಸಪ್ತಾಹ' ಆರಂಭ title=
Image Courtesy: Twitter/@ANI

ನವದೆಹಲಿ: ಇದೇ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರ ಶನಿವಾರದಿಂದ ಸೆಪ್ಟೆಂಬರ್ 20ರವರೆಗೆ  6 ದಿನಗಳ ಸೇವಾ ಸಪ್ತಾಹವನ್ನು ಬಿಜೆಪಿ ಹಮ್ಮಿಕೊಂಡಿದೆ.

"ದೇಶದ ಬಡ ಜನರ ಸಮಸ್ಯೆಗಳನ್ನು ಪರಿಹರಿಸಲು ಯಾರಾದರೂ ಇದ್ದಾರೆ ಎನ್ನುವುದಾದರೆ ಅದು ಮೋದಿ ಮಾತ್ರ. ಆದ್ದರಿಂದ ನರೇಂದ್ರ ಮೋದಿಯವರ ಜನ್ಮದಿನದ ನಿಮಿತ್ತ ಸೆಪ್ಟೆಂಬರ್ 14ರಿಂದ 20 ರವರೆಗೆ 'ಸೇವಾ ಸಪ್ತಾಹ' ಆಚರಿಸಲು ಬಿಜೆಪಿ ನಿರ್ಧರಿಸಿದೆ"ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಸೇವಾ ಸಪ್ತಾಹಕ್ಕೆ ಚಾಲನೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ದಾ ಅವರು, ಈ ಅಭಿಯಾನದ ಮುಖಿ ಅವಿಶಯವಾಗಿರುವ ಸೇವೆ ಮತ್ತು ಸ್ವಚ್ಚತೆಯ ಮಹತ್ವವನ್ನು ಸಾರಲು ಆಸ್ಪತ್ರೆಯ ಮಹಡಿಗಳ ಸ್ವಚ್ಚತಾ ಕಾರ್ಯದಲ್ಲಿಯೂ ಭಾಗಿಯಾದರು.

ಅಷ್ಟೇ ಅಲ್ಲದೆ, ಇದುವರೆಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಕೈಗೊಂಡ ಸಮಾಜ ಸೇವಾ ಕಾರ್ಯಗಳನ್ನು ಬಿಂಬಿಸುವ ಅಳವು ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಳ್ಳಲಾಗಿದ್ದು, ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರದರ್ಶಿಸಲು ಪ್ರತಿ ಜಿಲ್ಲೆಯಲ್ಲಿ ಸೇವಾ ಸಪ್ತಾಹ ಆಯೋಜಿಸಲಾಗಿದೆ. 

ಈ ಕಾರ್ಯಕ್ರಮದಲ್ಲಿ ವಿವಿಧ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ, ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಬಡವರಿಗಾಗಿ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ.