ವಿರೇಂದ್ರ ಸೆಹ್ವಾಗ್ ಲವ್ ಸ್ಟೋರಿ

  • Mar 06, 2024, 15:11 PM IST
1 /8

ಟೆಸ್ಟ್ ಕ್ರಿಕೆಟ್‌’ನಲ್ಲಿ ಭಾರತೀಯರೊಬ್ಬರು ಮಾಡಿದ ಅತ್ಯಧಿಕ ಸ್ಕೋರ್ ಸೇರಿದಂತೆ ಅನೇಕ ದಾಖಲೆಗಳು ಸೆಹ್ವಾಗ್ ಹೆಸರಿನಲ್ಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ (ಕೇವಲ 278 ಎಸೆತಗಳಲ್ಲಿ 300) ​​ ಅತ್ಯಂತ ವೇಗದ ಟ್ರಿಪಲ್ ಶತಕವ ಬಾರಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

2 /8

ಇನ್ನು ಟೆಸ್ಟ್ ಕ್ರಿಕೆಟ್‌’ನಲ್ಲಿ ಎರಡು ಬಾರಿ 300 ದಾಟಿದ ವಿಶ್ವದ ನಾಲ್ವರು ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೂ ಸೆಹ್ವಾಗ್ ಪಾತ್ರರಾಗಿದ್ದಾರೆ. ಇಷ್ಟೆಲ್ಲಾ ಸಾಧನೆ ಮಾಡಿದ ಸೆಹ್ವಾಗ್, ವೈಯಕ್ತಿಕ ಜೀವನದಲ್ಲಿ ಕೊಂಚ ಕಷ್ಟವನ್ನು ಅನುಭವಿಸಿದ್ದರು ಎಂದರೆ ನೀವು ನಂಬುತ್ತೀರಾ? ಇಲ್ಲವಾದಲ್ಲಿ ಈ ವರದಿಯನ್ನೊಮ್ಮೆ ಓದಿ.

3 /8

ವೀರೇಂದ್ರ ಸೆಹ್ವಾಗ್ ಕೇವಲ 7 ವರ್ಷದವರಾಗಿದ್ದಾಗ ಮೊದಲ ಬಾರಿಗೆ ತಮ್ಮ ಪತ್ನಿ ಆರತಿ ಅಹ್ಲಾವತ್ ಅವರನ್ನು ಭೇಟಿಯಾದರು. ಆರತಿ ಅಹ್ಲಾವತ್ ತಂದೆ ವಕೀಲರು. ಇನ್ನು ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು. ಆದ್ದರಿಂದ ಎರಡೂ ಕುಟುಂಬಗಳು ಸಂಬಂಧ ಹೊಂದಿದ್ದವು. ಈ ಬಗ್ಗೆ ಆರತಿ ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು.

4 /8

ವೀರೇಂದ್ರ ಸೆಹ್ವಾಗ್ ಕೇವಲ 7 ವರ್ಷದವರಾಗಿದ್ದಾಗ ಮೊದಲ ಬಾರಿಗೆ ತಮ್ಮ ಪತ್ನಿ ಆರತಿ ಅಹ್ಲಾವತ್ ಅವರನ್ನು ಭೇಟಿಯಾದರು. ಆರತಿ ಅಹ್ಲಾವತ್ ತಂದೆ ವಕೀಲರು. ಇನ್ನು ಆರತಿಯ ಚಿಕ್ಕಮ್ಮ ಸೆಹ್ವಾಗ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದರು. ಆದ್ದರಿಂದ ಎರಡೂ ಕುಟುಂಬಗಳು ಸಂಬಂಧ ಹೊಂದಿದ್ದವು. ಈ ಬಗ್ಗೆ ಆರತಿ ಅವರ ಅಕ್ಕ ಸಂದರ್ಶನವೊಂದರಲ್ಲಿ ಹೇಳಿದ್ದರು.

5 /8

ಅಂದಹಾಗೆ ಸೆಹ್ವಾಗ್ ಮತ್ತು ಆರತಿ 2004 ರಲ್ಲಿ ವಿವಾಹವಾದರು. ಈ ಜೋಡಿಗೆ ಆರ್ಯವೀರ್ ಮತ್ತು ವೇದಾಂತ್ ಎಂಬ ಇಬ್ಬರು ಮಕ್ಕಳಿದ್ದಾರೆ. ಬಿಜೆಪಿಯ ಮಾಜಿ ನಾಯಕ ಅರುಣ್ ಜೇಟ್ಲಿ ಅವರ ಸರ್ಕಾರಿ ಬಂಗಲೆಯಲ್ಲಿ ಸೆಹ್ವಾಗ್ ಮದುವೆ ನಡೆದಿತ್ತು.

6 /8

ಇನ್ನು 2002 ರಲ್ಲಿ, ಸೆಹ್ವಾಗ್ ತಮಾಷೆಯಾಗಿ ಆರತಿ ಅವರನ್ನು ಮದುವೆಯಾಗುತ್ತೀಯಾ ಎಂದು ಕೇಳಿದ್ದರಂತೆ. ಆದರೆ ಆರತಿ, ಗಂಭೀರವಾಗಿ ಪ್ರತಿಕ್ರಿಯಿಸಿ, ಹೌದು ಎಂದು ಒಪ್ಪಿಗೆ ನೀಡಿದ್ದರು ಎಂದು ಸ್ವತಃ ವೀರೂ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

7 /8

ಆದರೆ ಈ ಮದುವೆಗೆ ಸೆಹ್ವಾಗ್ ಕುಟುಂಬ ಮಾತ್ರವಲ್ಲದೆ, ಆರತಿ ಕುಟುಂಬದಲ್ಲೂ ವಿರೋಧ ವ್ಯಕ್ತವಾಗಿತ್ತು. “ನಮ್ಮ ಕುಟುಂಬದಲ್ಲಿ ನಿಕಟ ಸಂಬಂಧಿಗಳ ನಡುವೆ ಯಾವುದೇ ವಿವಾಹ ನಡೆದಿರಲಿಲ್ಲ. ನಮ್ಮ ತಂದೆ-ತಾಯಿ ಕೂಡ ನಮ್ಮ ಮದುವೆಗೆ ವಿರೋಧಿಸಿದ್ದರು. ಸ್ವಲ್ಪ ಸಮಯ ಹಿಡಿಯಿತು, ಕಡೆಗೂ ಮದುವೆಗೆ ಒಪ್ಪಿದರು” ಎಂದು ಸೆಹ್ವಾಗ್ ಹೇಳಿದ್ದರು.  

8 /8

ಆರತಿ ಹೇಳುವಂತೆ “ನಮ್ಮ ಮನೆಯಲ್ಲಿ ಈ ಮದುವೆಯಿಂದ ಅನೇಕರಿಗೆ ಮನಸ್ತಾಪ ಕಂಡುಬಂದಿತ್ತು. ಬರೀ ನನ್ನ ಕುಟುಂಬದವರೇ ಆಗಿರಲಿಲ್ಲ, ವೀರೂ ಕುಟುಂಬದವರೂ ಕೂಡ ಈ ಮದುವೆಗೆ ಸಿಟ್ಟು ಮಾಡಿಕೊಂಡಿದ್ದರು. ಆದರೆ ನಮ್ಮಿಬ್ಬರ ಸಂಬಂಧದ ಮುಂದೆ ಕುಟುಂಬ ಸೋಲನ್ನು ಒಪ್ಪಿಕೊಂಡಿತು” ಎಂದಿದ್ದಾರೆ.