Actress Prema : ಹಾವಿನ ವಿಷಯಾಧಾರಿತ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಸಿನಿಮಾಗಳಲ್ಲಿ ಗ್ರಾಫಿಕ್ಸ್‌ನಲ್ಲಿ ಹಾವುಗಳನ್ನು ಬಳಸಲಾಗಿದ್ದರೂ, ಕೆಲವು ದೃಶ್ಯಗಳಲ್ಲಿ ನಿಜವಾದ ಹಾವುಗಳು ಬೇಕಾಗುತ್ತವೆ. ಈ ಸಂದರ್ಭದಲ್ಲಿ ಚಿತ್ರೀಕರಣಕ್ಕೆ ವಿಶೇಷ ಮುಂಜಾಗ್ರತೆ ವಹಿಸಲಾಗುತ್ತದೆ. ಆದರೆ ಸಿನಿಮಾವೊಂದರ ಶೂಟಿಂಗ್ ವೇಳೆ ಬಳಸಲಾದ ಹಾವು ಕಚ್ಚಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಈ ಕುರಿತು ಸ್ವತಃ ನಟಿ ಪ್ರೇಮಾ ತಿಳಿಸಿದ್ದಾರೆ..
ಹೌದು.. ನಟಿ ಪ್ರೇಮ ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರು. 90ರ ದಶಕದಲ್ಲಿ ಈ ನಟಿಗೆ ಬಹುಬೇಡಿಕೆ ಇತ್ತು. ಇಂದಿಗೂ ಪ್ರೇಮ ಅಭಿನಯದ ಸಿನಿಮಾಗಳು ಅಂದ್ರೆ ಪ್ರೇಕ್ಷಕರಿಗೆ ತುಂಬಾ ಇಷ್ಟ. ಇನ್ನು ಪ್ರೇಮ ಬರೀ ಕನ್ನಡವಷ್ಟೇ ಅಲ್ಲದೆ, ತೆಲುಗು ಚಿತ್ರರಂಗದಲ್ಲಿಯೂ ಸಕ್ರಿಯವಾಗಿದ್ದರು. ಈ ವೇಳೆ ನಡೆದ ಘಟನೆಯೊಂದರ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಇದನ್ನೂ ಓದಿ:Priya Bhavani : ಅಲ್ಲು ಅರ್ಜುನ ಬಿಟ್ಟು ಯಾರ್ ಜೊತೆನೂ ʼಲಿಪ್‌ಲಾಕ್ʼ ಮಾಡಲ್ವಂತೆ ಈ ಸ್ಟಾರ್ ನಟಿ..!
‘ದೇವಿ’ ಸಿನಿಮಾ ಬಿಡುಗಡೆಯಾಗಿ ಸುಮಾರು 25 ವರ್ಷಗಳಾಗಿವೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಸಿನಿಮಾದಲ್ಲಿ ಪ್ರೇಮಾ ಪ್ರಮುಖ ಪಾತ್ರ ನಿರ್ವಹಿಸಿದ್ದರು. ವನಿತಾ, ಶಿಜು, ಅಬು ಸಲೀಂ, ಭಾನುಚಂದರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು 12 ಮಾರ್ಚ್ 1999 ರಂದು ಬಿಡುಗಡೆಯಾಯಿತು.
ಇನ್ನು ಸಿನಿಮಾದ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರೇಮಾ ‘ದೇವಿ’ ಸಿನಿಮಾದ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದ ಶೂಟಿಂಗ್ ವೇಳೆ ನಡೆದ ಅನುಭವ ಮತ್ತು ಘಟನೆಗಳನ್ನು ಹೇಳಿಕೊಂಡಿದ್ದಾರೆ. ಚಿತ್ರೀಕರಣದ ವೇಳೆ ನಾಗರಹಾವು ಒಬ್ಬರ ಪ್ರಾಣ ತೆಗೆದ ಸಂಗತಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ:ಯಾರು ಹೆಚ್ಚು ಹಣ ನೀಡುತ್ತಾರೋ ಅವರ ಜೊತೆ ಇಡೀ ರಾತ್ರಿ ಕಳೆಯಬೇಕು..! ಖ್ಯಾತ ನಟಿ ಶಾಕಿಂಗ್ ಹೇಳಿಕೆ
ದೇವಿ ಸಿನಿಮಾ ಚಿತ್ರೀಕರಣದ ವೇಳೆ ವ್ಯಕ್ತಿಯೊಬ್ಬನಿಗೆ ಹಾವು ಕಚ್ಚಿತ್ತು. ಗಾಯಾಳು ವ್ಯಕ್ತಿಯನ್ನು ರಕ್ಷಿಸಲು ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ. ಆಸ್ಪತ್ರೆಗೆ ಕರೆದೊಯ್ದರೂ ಅವರು ಬದುಕಲಿಲ್ಲ. ಈ ಘಟನೆಯಿಂದಾಗಿ ಎರಡು ದಿನಗಳ ಕಾಲ ಶೂಟಿಂಗ್ ಮುಂದೂಡಲಾಯಿತು. ಸಾಕಷ್ಟು ಶ್ರಮದ ನಂತರ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಯಿತು. ಅದ್ಭುತ ಪ್ರತಿಫಲ ಸಿಕ್ಕಾಗ ಆ ಕಷ್ಟಗಳನ್ನೆಲ್ಲ ಮರೆತುಬಿಟ್ಟೆವು ಅಂತ ಪ್ರೇಮಾ ತಿಳಿಸಿದ್ದಾರೆ.
'ದೇವಿ' ಸಿನಿಮಾ ನನ್ನ ವೃತ್ತಿ ಜೀವನದಲ್ಲಿ ವಿಶೇಷ. ಮರೆಯಲಾಗದ ನೆನಪು ಎಂದು ಪ್ರೇಮಾ ಹೇಳಿಕೊಂಡಿದ್ದಾರೆ. ಪ್ರೇಮಾ 2006 ರಲ್ಲಿ ಕೈಗಾರಿಕೋದ್ಯಮಿಯನ್ನು ವಿವಾಹವಾದರು. ಕಾರಣಾಂತರದಿಂದ 2016 ರಲ್ಲಿ ವಿಚ್ಛೇದನ ಪಡೆದರು. ಇಷ್ಟು ದಿನ ಸಿನಿರಂಗದಿಂದ ದೂರವಿದ್ದ ನಟಿ ಇದೀಗ ಕಮ್‌ಬ್ಯಾಕ್ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.