Anushka Sharma-Virat Kohli Wedding: ಸೆಲೆಬ್ರಿಟಿ ಲೋಕದಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಜಾಹೀರಾತು ಶೂಟ್ ವೇಳೆ ಪ್ರೇಮದಲ್ಲಿ ಬಿದ್ದ ಈ ಜೋಡಿ ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಇಟಲಿ ದೇಶದ ಖ್ಯಾತ ಸ್ಥಳವೊಂದರಲ್ಲಿ ವಿವಾಹವಾದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಜೋಡಿ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಸೆಲೆಬ್ರಿಟಿ ಜಗತ್ತಿನ ಪವರ್ ಕಪಲ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಮತ್ತು ಅನುಷ್ಕಾ, ಜಾಹೀರಾತು ಶೂಟ್ ವೇಳೆ ಪ್ರೇಮದಲ್ಲಿ ಬಿದ್ದು ಬಳಿಕ ಮದುವೆಯಾಗಿದ್ದಾರೆ.
ಸದ್ಯ ಈ ಮುದ್ದಾದ ಜೋಡಿಗೆ ವಾಮಿಕಾ ಮತ್ತು ಅಕಾಯ್ ಎಂಬ ಮುದ್ದಾದ ಮಕ್ಕಳಿದ್ದಾರೆ. ಅಂದಹಾಗೆ ಕೆಲ ವರ್ಷಗಳಿಂದ ಸಿನಿಮಾ ಪ್ರಪಂಚದಿಂದ ಅನುಷ್ಕಾ ದೂರ ಉಳಿದಿದ್ದಾರೆ.
2017 ರಲ್ಲಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ವಿವಾಹವಾದರು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯನ್ನೇ ಯಾಕೆ ಮದುವೆಯಾದಿರಿ? ಅದರಲ್ಲೂ ವೃತ್ತಿಜೀವನ ಉತ್ತುಂಗ ಮಟ್ಟದಲ್ಲಿದ್ದರೂ ಇಷ್ಟು ಬೇಗ ಮದುವೆಯಾದದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳು ಕೇಳಿಬಂದವು.
ಇಂತಹ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರ ನೀಡಿದ್ದ ಅನುಷ್ಕಾ, “ನಮ್ಮ ಸಂಬಂಧವನ್ನು ನೈಜವಾಗಿ ಇರಿಸಲು ಬಯಸಿದ್ದೇವೆ. ನಮ್ಮ ವೈಯಕ್ತಿಕ ಬದುಕಿಗೆ ಸೆಲೆಬ್ರಿಟಿಗಳು ಎಂಬ ವಿಷಯವನ್ನು ಸೇರಿಸುವುದು ನಮಗೆ ಇಷ್ಟವಿರಲಿಲ್ಲ. ನಾವು ಪ್ರೀತಿಯಲ್ಲಿ ಬಿದ್ದಾಗ ಆ ವ್ಯಕ್ತಿ ಎಷ್ಟು ಖ್ಯಾತಿ ಪಡೆದಿರುತ್ತಾನೆ ಎಂಬುದು ಎಂದಿಗೂ ಲೆಕ್ಕಿಸಲ್ಲ” ಎಂದು ಹೇಳಿದ್ದರು.
ಇನ್ನೊಂದೆಡೆ ವಿರಾಟ್ ಕೊಹ್ಲಿಯೂ ಅನುಷ್ಕಾ ಶರ್ಮಾ ಜೊತೆ ವಿವಾಹವಾಗಲು ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. “ಆಕೆ ನನ್ನ ಜೀವನಕ್ಕೆ ಕಾಲಿಟ್ಟ ಬಳಿಕ ಬದುಕೇ ಬದಲಾಯಿತು. ಇನ್ನು ಜಾಹೀರಾತು ಸೆಟ್’ನಲ್ಲಿ ಮೊದಲ ಬಾರಿಗೆ ಆಕೆಯನ್ನು ನೋಡಿದಾಗ ವಿಶೇಷ ಭಾವನೆ ಮೂಡತೊಡಗಿತು” ಎಂದು ಹೇಳಿದ್ದರು.
“ನಮ್ಮಿಬ್ಬರಲ್ಲಿ ವಿಶೇಷ ಅನುಬಂಧವಿದೆ, ತಿಳುವಳಿಕೆಯಿದೆ. ಈ ಎಲ್ಲಾ ಕಾರಣಗಳನ್ನು ನೋಡಿ ಅನುಷ್ಕಾ ಜೊತೆ ಪ್ರೀತಿಯಲ್ಲಿ ಬಿದ್ದೆ” ಎಂಬರ್ಥದಲ್ಲಿ ಒಂದೊಮ್ಮೆ ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.