ಗಣೇಶ್ ಹುಟ್ಟು ಸಿರಿವಂತನೂ ಅಲ್ಲ.ಸಿನಿಮಾ ರಂಗದಲ್ಲಿ ಯಾವ ಗಾಡ್ ಫಾದರ್ ಕೂಡಾ ಇರಲಿಲ್ಲ. ತನ್ನ ಪರಿಶ್ರಮದ ಮೂಲಕವೇ ಗೋಲ್ಡನ್ ಸ್ಟಾರ್ ಎನ್ನುವ ಪಟ್ಟ ಕ್ಕೆ ಏರಿದವರು.
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ಸ್ಯಾಂಡಲ್ ವುಡ್ ನ ಜನಪ್ರಿಯ ಜೋಡಿ. ಇಬ್ಬರು ಮಕ್ಕಳೊಂದಿಗಿನ ಮುದ್ದಾದ ಸಂಸಾರ ಇವರದ್ದು. ಅನೇಕ ಸಂದರ್ಶನಗಳಲ್ಲಿ ಇವರಿಬ್ಬರು ತಮ್ಮ ಒಡನಾಟ, ಸಂಬಂಧಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ತಾನು ಯಶಸ್ಸಿನ ಹಿಂದೆ ಇರುವುದು ಪತ್ನಿ ಶಿಲ್ಪಾ ಎನ್ನುವುದನ್ನು ಗೋಲ್ಡನ್ ಸ್ಟಾರ್ ಅನೇಕ ಕಡೆಗಳಲ್ಲಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಗಣೇಶ್ ಹುಟ್ಟು ಸಿರಿವಂತನೂ ಅಲ್ಲ.ಸಿನಿಮಾ ರಂಗದಲ್ಲಿ ಯಾವ ಗಾಡ್ ಫಾದರ್ ಕೂಡಾ ಇರಲಿಲ್ಲ. ತನ್ನ ಪರಿಶ್ರಮದ ಮೂಲಕವೇ ಗೋಲ್ಡನ್ ಸ್ಟಾರ್ ಎನ್ನುವ ಪಟ್ಟ ಕ್ಕೆ ಏರಿದವರು.
ಕಾಮಿಡಿ ಟೈಮ್ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿದ್ದ ಗಣೇಶ್, ಮುಂಗಾರು ಮಳೆ ಚಿತ್ರದ ಮೂಲಕ ಭಾರೀ ಜನಪ್ರಿಯತೆ ಗಳಿಸಿದರು. ಅಪಾರ ಅಭಿಮಾನಿಗಳನ್ನು ಸಂಪಾದಿಸಿದರು.
ಹೀಗೆ ಜನಪ್ರಿಯತೆಯ ಉತ್ತುಂಗದಲ್ಲಿರುವಾಗಲೇ ಗಣೇಶ್ ಮದುವೆಯಾದರು ಎನ್ನುವ ಸುದ್ದಿ ರಾತೊರಾತ್ರಿ ಬಂದೆರಗಿತ್ತು. ಹೌದು, ಮಧ್ಯರಾತ್ರಿಯೇ ಗಣೇಶ್ ಮತ್ತು ಶಿಲ್ಪಾ ಮಾಡುವೆ ನಡೆದಿದ್ದು. ಇದು ಆ ಸಂದರ್ಭದಲ್ಲಿ ಎಲ್ಲರನ್ನೂ ಆಶ್ಚರ್ಯಗೊಳಿಸಿತ್ತು. ಸ್ಟಾರ್ ಒಬ್ಬನ ಮದುವೆ ಹೀಗೆ ಯಾಕಾಯಿತು ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡಿತ್ತು.
ಈ ಮದುವೆಯ ಹಿಂದೆ ಅಂತೆ ಕಂತೆಗಳ ಕತೆಗಳೂ ಹುಟ್ಟಿಕೊಂಡಿತ್ತು. ಅವರ ಮದುವೆಗೆ ಗಣೇಶ ಪಡೆದುಕೊಂಡಿದ್ದ ಜನಪ್ರಿಯತೆಯೇ ಮುಳುವಾಗಿತ್ತಂತೆ. ಈ ಮಾತನ್ನು ಸ್ವತಹ ಗಣೇಶ್ ಅವರೇ ಕಾರ್ಯಕ್ರಮವೊಂದರಲ್ಲಿ ಇದನ್ನು ಹೇಳಿಕೊಂಡಿದ್ದಾರೆ.
ಗಣೇಶ್ ಗಿದ್ದ ಪಾಪ್ಯುಲಾರಿಟಿಯೇ ಅವರಿಗೆ ಆ ಸಂದರ್ಭದಲ್ಲಿ ಅತೀವ ನೋವು ಕೂಡಾ ನೀಡಿತ್ತಂತೆ. ತಾನು ಸಿನಿಮಾದಲ್ಲಿದ್ದು, ಜನಪ್ರಿಯತೆ ಗಳಿಸಿರುವುದು ತನ್ನ ಪ್ರೀತಿ ಪಾಲಿಗೆ ಮುಳ್ಳಾಯಿತಾ ಎಂದು ಬಹಳ ನೊಂದು ಕೊಂಡಿದ್ದರಂತೆ.
. ಒಂದು ಹಂತದಲ್ಲಿ ಸಿನಿಮಾ ರಂಗವನ್ನು ಬಿಡುವ ಯೋಚನೆ ಕೂಡಾ ಬಂದಿತ್ತಂತೆ. ಆದರೆ ನಂತರ ಎಲ್ಲವನ್ನೂ ಧೈರ್ಯವಾಗಿ ನಿಭಾಯಿಸಿಕೊಂಡರು ಗಣೇಶ್ ಮತ್ತು ಶಿಲ್ಪಾ.
ಇದೀಗ ಸುಖ ದುಃಖದಲ್ಲಿ ಒಬ್ಬರಿಗೊಬ್ಬರು ಜೊತೆ ನಿಂತು ನೆಮ್ಮದಿಯ ಬದುಕು ಸಾಗಿಸುವ ಸುಂದರ ಜೋಡಿ ಇವರದ್ದು. ಸಿನಿಮಾಗಳಲ್ಲಿ ನಟನಾಗಿ ಮಿಂಚಿರುವ ಗಣೇಶ್ ಒಳ್ಳೆಯ ಪತಿ ಮತ್ತು ಅಪ್ಪ ಎಂದೆನಿಸಿಕೊಂಡಿದ್ದಾರೆ ಕೂಡಾ.