ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು..

TTD News : ಭೂವೈಕುಂಠವನ್ನು ಬೆಳಗುತ್ತಿರುವ ಬಾಲಾಜಿ ದರ್ಶನಕ್ಕಾಗಿ ಸಾವಿರಾರು ಭಕ್ತರು ನಿಯಮಿತವಾಗಿ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳನ್ನೂ ಸಹ ಕರೆದೊಯ್ಯುತ್ತಾರೆ. ಆದರೆ ಕೆಲವೊಂದು ಬಾರಿ ಜನಸಂದಣಿ ಹೆಚ್ಚಾದಾಗ ಪೋಷಕರು ಪರದಾಡಬೇಕಾಗುತ್ತದೆ.. ಇದನ್ನು ಅರಿತ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ..

Written by - Krishna N K | Last Updated : Jun 26, 2024, 05:45 PM IST
    • ಭೂವೈಕುಂಠವನ್ನು ಬೆಳಗುತ್ತಿರುವ ಬಾಲಾಜಿ
    • ಭಕ್ತರು ನಿಯಮಿತವಾಗಿ ತಿರುಮಲಕ್ಕೆ ಭೇಟಿ
    • ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ..
ತಿರುಪತಿ ಭಕ್ತರಿಗೆ ಸಿಹಿ ಸುದ್ದಿ..! ಮಕ್ಕಳಿಗೆ ತಿಮ್ಮಪ್ಪನ ದರ್ಶನ ಉಚಿತ.. ವಯಸ್ಸು ಇಷ್ಟಾಗಿರಬೇಕು.. title=
TTD

Tirupati darshan ticket : ಶ್ರೀವಾರಿ ದರ್ಶನಕ್ಕಾಗಿ ನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಆಗಮಿಸುತ್ತಾರೆ. ಸ್ವಾಮಿಯ ದರ್ಶನ ಪಡೆಯಲು ಚಿಕ್ಕ ಮಕ್ಕಳೂ ಸಹ ಅವರ ಪೋಷಕರ ಜೊತೆ ತಿರುಪತಿಗೆ ಬರುತ್ತಾರೆ.. ಅಲ್ಲದೆ, ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಅವರಿಗೆ ಎದುರಾಗುತ್ತದೆ..

ಉಚಿತ ದರ್ಶನಕ್ಕೆ ತೆರಳುವ ಭಕ್ತರು ಸರಾಸರಿ 12 ಗಂಟೆಗಳ ಕಾಲ ಕಳೆಯುವ ಸಾಧ್ಯತೆ ಇದೆ. ಆದರೆ ಟಿಟಿಡಿ ಚಿಕ್ಕ ಮಕ್ಕಳ ಪೋಷಕರಿಗೆ ವಿಶೇಷ ದರ್ಶನ ಟಿಕೆಟ್ ಲಭ್ಯಗೊಳಿಸಿದೆ. 12 ವರ್ಷದೊಳಗಿನ ಮಕ್ಕಳಿಗೆ ದರ್ಶನ ಟಿಕೆಟ್‌ ನೀಡಲು ಮುಂದಾಗಿದೆ..

ಇದನ್ನೂ ಓದಿ: ಜೈಲಿನಲ್ಲಿದ್ದರೂ ಸದ್ದು ಮಾಡುತ್ತಿದೆ ʼಡಿ ಗ್ಯಾಂಗ್‌ʼ..! ದರ್ಶನ್‌ ʼಖೈದಿ ನಂಬರ್‌ 6106ʼ ಗೆ ಸಖತ್‌ ಡಿಮ್ಯಾಂಡ್‌

ಭಕ್ತರಿಗಾಗಿ ಟಿಟಿಡಿ ತಿರುಮಲದಲ್ಲಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ವೃದ್ಧರು ಮತ್ತು ಅಂಗವಿಕಲರಿಗಾಗಿ ವಿಶೇಷ ಸರತಿ ಸಾಲು ನಿಯೋಜಿಸಿದ್ದು, ಅದಕ್ಕಾಗಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬಿಡುಗಡೆ ಮಾಡುತ್ತಿದೆ. ತಿರುಮಲದ ಸುಪಥಂ ರಸ್ತೆಯಲ್ಲಿ ಮಕ್ಕಳಿಗಾಗಿ ಟಿಟಿಡಿ ವಿಶೇಷ ಕ್ಯೂ ಲೈನ್ ಅನ್ನು ಸ್ಥಾಪಿಸಿದೆ. ಈ ಕ್ಯುಲೈನ್‌ನಲ್ಲಿ ಮಕ್ಕಳೊಂದಿಗೆ ಪೋಷಕರಿಗೆ ಮಾತ್ರ ಅನುಮತಿಸಲಾಗಿದೆ.

ಈ ದರ್ಶನಕ್ಕೆ ತೆರಳಲು, ಆಧಾರ್ ಕಾರ್ಡ್, ಜನನ ಪ್ರಮಾಣಪತ್ರದಂತಹ ಯಾವುದೇ ಪರಿಶೀಲನೆ ದಾಖಲೆಯನ್ನು ಟಿಟಿಡಿಗೆ ತೋರಿಸಬೇಕು. ಪಾಲಕರು ಕೂಡ ತಮ್ಮ ಆಧಾರ್ ಕಾರ್ಡ್ ಅನ್ನು ಅಧಿಕಾರಿಗಳಿಗೆ ತೋರಿಸಬೇಕು. ಈ ಸುಪಥಂ ಮಾರ್ಗದ ಮೂಲಕ ಭಕ್ತರಿಗೆ ಕಲ್ಯಾಣೋತ್ಸವ ಸೇವೆಗೆ ಅವಕಾಶ ಕಲ್ಪಿಸಲಾಗಿದೆ. ಮಕ್ಕಳು ಸೇರಿದಂತೆ ಇಬ್ಬರು ದಂಪತಿಗಳಿಗೆ ಅವಕಾಶವಿದೆ. 12 ವರ್ಷ ಒಳಗಿನ ಮಕ್ಕಳಿಗೆ ಮಾತ್ರ ಇದು ಅನ್ವಯ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News