ಔಷಧಿಯೇ ಇಲ್ಲದೆ ಯೂರಿಕ್ ಆಸಿಡ್ ಕಡಿಮೆಯಾಗಬೇಕೇ? ಹಾಗಾದ್ರೆ ಮನೆಯಂಗಳದಲ್ಲೇ ಸಿಗುವ ಈ ಎಲೆಯನ್ನು ಜಗಿಯಿರಿ!

Tulsi Remedy For Uric Acid: ಯೂರಿಕ್ ಆಮ್ಲವನ್ನು ನಿಯಂತ್ರಿಸಲು ವಿವಿಧ ಆಹಾರಗಳನ್ನು ತಿನ್ನುವುದು ಉತ್ತಮ. ಅದರಲ್ಲಿ ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ

Written by - Bhavishya Shetty | Last Updated : Jun 28, 2024, 08:38 PM IST
    • ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ
    • ಯೂರಿಕ್ ಆಮ್ಲವನ್ನು ನಿಯಂತ್ರಿಸಲು ವಿವಿಧ ಆಹಾರಗಳನ್ನು ತಿನ್ನುವುದು ಉತ್ತಮ
    • ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿವೆ
ಔಷಧಿಯೇ ಇಲ್ಲದೆ ಯೂರಿಕ್ ಆಸಿಡ್ ಕಡಿಮೆಯಾಗಬೇಕೇ? ಹಾಗಾದ್ರೆ ಮನೆಯಂಗಳದಲ್ಲೇ ಸಿಗುವ ಈ ಎಲೆಯನ್ನು ಜಗಿಯಿರಿ! title=
Tulsi Remedy For Uric Acid

Tulsi for Uric Acid: ಯೂರಿಕ್ ಆಮ್ಲವನ್ನು ನಿಯಂತ್ರಿಸುವುದು ಇಂದಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಜನರ ಜೀವನಶೈಲಿ ಮತ್ತು ಆಹಾರ ಪದ್ಧತಿಯು ತುಂಬಾ ಬದಲಾಗಿರುವುದು ಯೂರಿಕ್ ಆಸಿಡ್ ಸೇರಿದಂತೆ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸಲು ಪ್ರಮುಖ ಕಾರಣ.

ಯೂರಿಕ್ ಆಮ್ಲವನ್ನು ನಿಯಂತ್ರಿಸಲು ವಿವಿಧ ಆಹಾರಗಳನ್ನು ತಿನ್ನುವುದು ಉತ್ತಮ. ಅದರಲ್ಲಿ ತುಳಸಿ ಎಲೆಗಳು ದೇಹವನ್ನು ನಿರ್ವಿಷಗೊಳಿಸುವ ಗುಣವನ್ನು ಹೊಂದಿವೆ. ಇದು ದೇಹದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಮೂತ್ರಪಿಂಡದ ಕಲ್ಲುಗಳನ್ನು ಮೂತ್ರದ ಮೂಲಕವೇ ಹೊರಹಾಕಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಸಂಸದರ ಸಭೆ; ರಾಜ್ಯ ಸರ್ಕಾರದ ನಡೆಗೆ ಬಸವರಾಜ ಬೊಮ್ಮಾಯಿ ಅಭಿನಂದನೆ

ತುಳಸಿ, ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ, ಗೌಟ್’ನಿಂದ ಬಳಲುತ್ತಿರುವ ರೋಗಿಗಳಿಗೆ ಸಹ ಪರಿಹಾರವನ್ನು ನೀಡುತ್ತದೆ. ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡಲು ಬಯಸಿದರೆ, ತುಳಸಿ ಎಲೆಗಳನ್ನು ನಿಯಮಿತವಾಗಿ ಅಗಿಯಿರಿ.

ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡಲು, ತುಳಸಿ ಎಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಅಗಿಯಿರಿ. ಇದು ನಿಮ್ಮ ಮಾನಸಿಕ ಆರೋಗ್ಯ ಮತ್ತು ಯೂರಿಕ್ ಆಮ್ಲವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಇಲ್ಲವೇ, ತುಳಸಿಯ ಕಷಾಯವನ್ನು ತಯಾರಿಸಿಯೂ ಸೇವಿಸಬಹುದು. ಇದು ನಿಮ್ಮ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ. ಈ ಕಷಾಯವನ್ನು ತಯಾರಿಸಲು 2 ರಿಂದ 3 ತುಳಸಿ ಎಲೆಗಳನ್ನು ತೆಗೆದುಕೊಳ್ಳಿ. ಈ ಎಲೆಗಳನ್ನು ಚೆನ್ನಾಗಿ ತೊಳೆದು 1 ಕಪ್ ನೀರು ಸೇರಿಸಿ ಚೆನ್ನಾಗಿ ಕುದಿಸಿ.

ನಂತರ, ನೀರನ್ನು ಸೋಸಿಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯಿರಿ. ಇದು ಯೂರಿಕ್ ಆಮ್ಲವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸುತ್ತದೆ.

ಇದನ್ನೂ ಓದಿ: ಹಿಂದೂಗಳು ಬಹುಸಂಖ್ಯಾತರಾಗಿ ಇರುವುದರಿಂದಲೇ ಭಾರತ ಜಾತ್ಯಾತೀತ ರಾಷ್ಟ್ರ: ಪ್ರಲ್ಹಾದ್ ಜೋಶಿ ತಿರುಗೇಟು

ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಯಾವುದೇ ಪರಿಹಾರವನ್ನು ಪ್ರಯತ್ನಿಸುವ ಮೊದಲು ವೃತ್ತಿಪರ ಸಲಹೆಯನ್ನು ತೆಗೆದುಕೊಳ್ಳಬೇಕು.  ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News