T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ

Virat Kohli Record: ಫೈನಲ್‌’ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಪವರ್ ಪ್ಲೇನಲ್ಲಿಯೇ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಾಗ ತೀವ್ರ ಆಘಾತಕ್ಕೊಳಗಾಯಿತು

Written by - Bhavishya Shetty | Last Updated : Jun 29, 2024, 10:39 PM IST
    • ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ 2024 ಸರಣಿಯ ಮೊದಲ ಅರ್ಧಶತಕ ದಾಖಲಿಸಿದ್ದಾರೆ
    • ವಿರಾಟ್ ಕೊಹ್ಲಿ ಅಂತಿಮವಾಗಿ 59 ಎಸೆತಗಳಲ್ಲಿ 76 ರನ್ ಗಳಿಸಿದ್ದರು.
    • ಇದು ಫೈನಲ್‌’ನಲ್ಲಿ ಭಾರತೀಯ ಕ್ರಿಕೆಟಿಗನೋರ್ವ ಗಳಿಸಿದ ಎರಡನೇ ಗರಿಷ್ಠ ಸ್ಕೋರ್
T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ title=
Virat Kohli Record

Virat Kohli Record: ಬಾರ್ಬಡೋಸ್‌’ನ ಬ್ರಿಡ್ಜ್‌ ಟೌನ್‌’ನಲ್ಲಿರುವ ಕೆನ್ಸಿಂಗ್ಟನ್ ಓವಲ್‌’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್‌ನಲ್ಲಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್ 2024 ಸರಣಿಯ ಮೊದಲ ಅರ್ಧಶತಕ ದಾಖಲಿಸಿದ್ದಾರೆ.

ಫೈನಲ್‌’ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಪವರ್ ಪ್ಲೇನಲ್ಲಿಯೇ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಾಗ ತೀವ್ರ ಆಘಾತಕ್ಕೊಳಗಾಯಿತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ಕೊಹ್ಲಿ ಮತ್ತು ಅಕ್ಷರ್ ಪಟೇಲ್. ನಾಲ್ಕನೇ ವಿಕೆಟ್‌’ಗೆ ಉತ್ತಮ ಜೊತೆಯಾಟವಾಡಿದ ಈ ಇಬ್ಬರು, 72 ರನ್‌’ಗಳ ಜೊತೆಯಾಟದ ಕೊಡುಗೆ ನೀಡಿದರು.

ಇದನ್ನೂ ಓದಿ: ʼನಾನು ದರ್ಶನ್‌ ರಿಲೇಟಿವ್ʼ : ಪರಪ್ಪನ ಅಗ್ರಹಾರಕ್ಕೆ ಓಡೋಡಿ ಬಂದ ಯುವತಿ! ಯಾರೀಕೆ?   

ಇನ್ನು ವಿರಾಟ್ ಕೊಹ್ಲಿ ಅಂತಿಮವಾಗಿ 59 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಇದು ಫೈನಲ್‌’ನಲ್ಲಿ ಭಾರತೀಯ ಕ್ರಿಕೆಟಿಗನೋರ್ವ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.

ಪುರುಷರ T20 ವಿಶ್ವಕಪ್ ಫೈನಲ್‌’ನಲ್ಲಿ ಅತಿ ಹೆಚ್ಚು ಅರ್ಧಶತಕ ದಾಖಲಿಸಿದ ಮೂವರು ಬ್ಯಾಟರ್’ಗಳಲ್ಲಿ ಕೊಹ್ಲಿ ಕೂಡ ಒಬ್ಬರು ಎಂದು ಪರಿಗಣಿಸಲ್ಪಟ್ಟಿದ್ದಾರೆ. ಇವರನ್ನು ಹೊರತುಪಡಿಸಿ ಮರ್ಲಾನ್ ಸ್ಯಾಮ್ಯುಯೆಲ್ಸ್ ಮತ್ತು ಕುಮಾರ ಸಂಗಕ್ಕಾರ ಈ ದಾಖಲೆ ಬರೆದಿದ್ದಾರೆ.

ಟಿ20 ವಿಶ್ವಕಪ್‌’ನ ಮೊದಲ ಏಳು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 75 ರನ್ ಗಳಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಕೊಹ್ಲಿ, ರೋಹಿತ್ ಶರ್ಮಾ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

ಇನ್ನೊಂದೆಡೆ ವಿರಾಟ್ ಕೊಹ್ಲಿ ತಮ್ಮ ಟಿ20 ವೃತ್ತಿಜೀವನದ 39ನೇ 50+ ಸ್ಕೋರ್ ಮಾಡಿದ್ದಾರೆ. ಆ ಮೂಲಕ ಪುರುಷರ T20I ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತು ಪ್ಲಸ್ ಸ್ಕೋರ್‌ ಮಾಡಿದ ದಾಖಲೆಯನ್ನು ಸರಿಗಟ್ಟಿದ್ದಾರೆ.

1. ಬಾಬರ್ ಅಜಮ್ - 123 ಪಂದ್ಯಗಳಲ್ಲಿ 39- 50+ ಸ್ಕೋರ್

2. ವಿರಾಟ್ ಕೊಹ್ಲಿ - 126 ಪಂದ್ಯಗಳಲ್ಲಿ 39- 50+ ಸ್ಕೋರ್

3. ರೋಹಿತ್ ಶರ್ಮಾ - 159 ಪಂದ್ಯಗಳಲ್ಲಿ 37

4. ಮೊಹಮ್ಮದ್ ರಿಜ್ವಾನ್ - 102 ಪಂದ್ಯಗಳಲ್ಲಿ 30

5. ಡೇವಿಡ್ ವಾರ್ನರ್ - 110 ಪಂದ್ಯಗಳಲ್ಲಿ 29

ಇದನ್ನೂ ಓದಿ:  ರೋಹಿತ್ ಶರ್ಮಾ ವಿಕೆಟ್ ಕಬಳಿಸಿ ಮಿಂಚಿದ ದ.ಆಫ್ರಿಕಾದ ಕೇಶವ್ ಮಹಾರಾಜ್ ಹಿನ್ನೆಲೆ ಏನು ಗೊತ್ತಾ? ಈತ ಆಂಜನೇಯನ ಪರಮಭಕ್ತ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News