ʼನಾನು ದರ್ಶನ್‌ ರಿಲೇಟಿವ್ʼ : ಪರಪ್ಪನ ಅಗ್ರಹಾರಕ್ಕೆ ಓಡೋಡಿ ಬಂದ ಯುವತಿ! ಯಾರೀಕೆ?

Darshan: ನಟ ದರ್ಶನ್‌ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ.. ನಿನ್ನೆ ದಿಢೀರ್ ಎಂದು ಮಾಸ್ಕ್ ಧರಿಸಿ ಪ್ರತ್ಯಕ್ಷವಾದ ಯುವತಿಯೊಬ್ಬಳು ನಾನು ದರ್ಶನ್‌ ಅವರನ್ನು ಭೇಟಿಯಾಗಬೇಕು ಎಂದಿದ್ದಾರೆ.. ಯಾರು ಈ ಹುಡುಗಿ? 

1 /6

ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಅವರನ್ನು ನೋಡಲು ಸಾಕಷ್ಟು ಜನ ನಿತ್ಯ ಪರಪ್ಪನ ಅಗ್ರಹಾರಕ್ಕೆ ಆಗಮಿಸುತ್ತಿದ್ದಾರೆ.. ಆದರೆ ನಿನ್ನೆ ಪಿಂಕ್‌ ಕಲರ್‌ ಬಟ್ಟೆ ತೊಟ್ಟು, ಮಾಸ್ಕ್‌ ಧರಿಸಿದ ಯುವತಿಯೊಬ್ಬಳು ಕ್ಯಾಮೆರಾ ನೋಡಿ ಓಡಿ ಹೋಗಿ ನಾನು ದರ್ಶನ್‌ ಅವರ ಸಂಬಂಧಿ ಅವರನ್ನು ನೋಡಲೇವೇಕು ಎಂದು ಪೊಲೀಸ್‌ ಬಳಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ..   

2 /6

 ಪರಪ್ಪನ ಅಗ್ರಹಾರ ಜೈಲಿನ ಹತ್ತಿರ ನಟ ದರ್ಶನ್‌ ಅವರನ್ನು ನೋಡಲು ಬಂದಿದ್ದ ಯುವತಿ ಯಾರು ಎನ್ನುವ ಚರ್ಚೆ ಸೋಷಿಯಲ್‌ ಮಿಡಿಯಾದಲ್ಲಿ ನಡೆಯುತ್ತಿದೆ..   

3 /6

ದರ್ಶನ್‌ ಅವರನ್ನು ನೋಡಲು ಬಂದ ಆ ಯುವತಿ ದರ್ಶನ್‌ ನಮ್ಮ ಸಂಬಂಧಿ ಅದಕ್ಕೆ ನಾನು ಅವರನ್ನು ನೋಡಲು ಬಂದಿದ್ದೇನೆ ಎಂದು ಜೈಲು ಅಧಿಕಾರಿಗಳ ಮುಂದೆ ಹೇಳಿದ್ದಾರೆ.. ಆದರೆ ಅಧಿಕಾರಿಗಳು ಆಕೆಗೆ ಅವಕಾಶ ನೀಡಿಲ್ಲ.. ಆಗ ಆ ಯುವತಿ ತನ್ನ ಹೆಸರನ್ನು ಬಹಿರಂಗ ಪಡಿಸಿಲ್ಲ..   

4 /6

ಇದೀಗ ಲಭಿಸಿರುವ ಮಾಹಿತಿಯ ಪ್ರಕಾರ ದರ್ಶನ್‌ ಭೇಟಿಗೆ ಬಂದ ಆ ಯುವತಿಯ ಹೆಸರು ಹಂಸ ಶೆಟ್ಟರ್.. ಈಕೆ ಮಾಡೆಲ್ ಅಲ್ಲ.. ನಟಿಯೂ ಅಲ್ಲ.. ಆದ್ರೂ ನಟ ದರ್ಶನ್ ಗೆ ಈಕೆ ಆಪ್ತ ಗೆಳತಿ ಎನ್ನಲಾಗುತ್ತಿದೆ.. ಮಾಧ್ಯಮಗಳಿಗೆ ನಾನು ದರ್ಶನ್ ಫ್ರೆಂಡ್, ರಿಲೇಟಿವ್ ಎಂದು ಈ ಯುವತಿ ಹೇಳಿಕೊಂಡಿದ್ದಾರೆ.. ಈಕೆ ಶೆಟ್ಟರ್.. ದರ್ಶನ್ ನಾಯ್ಡು.. ರಿಲೇಟಿವ್ ಅಂದ್ರೆ ಹೇಗೆ..? ಎನ್ನುವ ಪ್ರಶ್ನೆ ಎಲ್ಲರಲ್ಲಿಯೂ ಮೂಡಿತ್ತು...   

5 /6

ಅಂದಹಾಗೆ ಈಕೆ ದರ್ಶನ್ ಗೆ ಪರಿಚಯ ಆಗಿರೋದೇ ಡಿ ಗ್ಯಾಂಗ್ ಮೂಲಕ.. ಹೌದು ತೋಟದ ಮನೆ,‌ ಪಾರ್ಟಿ,‌ ಪಬ್ ಅಂತೆಲ್ಲಾ ಹಂಸ ದರ್ಶಶ್‌ಗೆ ಆಪ್ತ ಸ್ನೇಹಿತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ..   

6 /6

ಕುಟುಂಬ ಬಿಟ್ರೆ ಬೇರೆ ಯಾರನ್ನೂ ಜೈಲೊಳಗೆ ಬಿಡಲ್ಲ.. ಇದು ಗೊತ್ತಿದ್ದೂ ಪರಪ್ಪನ ಅಗ್ರಹಾರವರೆಗೂ ಓಡಿಕೊಂಡು ಬಂದದ್ದೇಕೆ..? ದರ್ಶನ್ ಮತ್ತೆ ಹಂಸ ಶೆಟ್ಟರ್ ಗೂ ಇರೋ ಬಾಂಧವ್ಯ ಎಂಥದ್ದು..?! ಇದು ಸ್ನೇಹನಾ..? ಪ್ರೀತಿನಾ..? ಫಾರಿನ್ ನಲ್ಲಿ ವ್ಯಾಸಂಗ ಮಾಡಿಕೊಂಡು ಬಂದಿರೋ ಈ ಯುವತಿ ದರ್ಶನ್ ಗೆ ಇಷ್ಟು ಕ್ಲೋಸ್ ಆಗಿದ್ದು ಹೇಗೆ..? ಎನ್ನುವ ಪ್ರಶ್ನೆಗಳು ಇದೀಗ ಮೂಡುತ್ತಿವೆ..