Cucumber to burn belly fat:ಬೊಜ್ಜು ಪ್ರಪಂಚದ ಅನೇಕ ಜನರನ್ನು ಕಾಡುವ ಸಮಸ್ಯೆಯಾಗಿದೆ. ಅದು ಕೂಡಾ ಹೊಟ್ಟೆ ಮತ್ತು ಸೊಂಟದ ಭಾಗದಲ್ಲಿ ಕೊಬ್ಬು ಸೇರಿಕೊಂಡರೆ ಸಮಸ್ಯೆ ತಪ್ಪಿದ್ದಲ್ಲ.
ಬೆಂಗಳೂರು : Cucumber to burn belly fat: ತೂಕವನ್ನು ಕಳೆದುಕೊಳ್ಳುವ ಭರಾಟೆಯಲ್ಲಿ ನಾವು ಬೇರೆ ಬೇರೆ ಪ್ರಯತ್ನಕ್ಕೆ ಇಳಿದು ಬಿಡುತ್ತವೆ. ಆದರೆ ಹೀಗೆ ಮಾಡುವಾಗ ನಾವು ಮಾಡುವ ಯಾವುದೇ ಪ್ರಯೋಗ ನಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸೌತೆಕಾಯಿಯ ಸೇವನೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಇದರಲ್ಲಿ ನೀರಿನಂಶ ಹೆಚ್ಚಾಗಿರುತ್ತದೆ ಮತ್ತು ಕ್ಯಾಲೋರಿಗಳು ತುಂಬಾ ಕಡಿಮೆ. ಆದ್ದರಿಂದ ಇದು ತೂಕ ನಷ್ಟಕ್ಕೆ ತುಂಬಾ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ರಾತ್ರಿ ಊಟವಾದ ಬಳಿಕ ತಿಂದರೆ ಜೀರ್ಣಕ್ರಿಯೆಗೆ ಸಹಕಾರಿಯಾಗುತ್ತದೆ.ಒಂದು ತಿಂಗಳ ಕಾಲ ನಿತ್ಯ ರಾತ್ರಿ ಸಮಯದಲ್ಲಿ ಸೌತೆಕಾಯಿ ಸೇವಿಸಿದರೆ ದೇಹ ತೂಕ ಕಳೆದುಕೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಸೌತೆಕಾಯಿಯನ್ನು ಸಿಪ್ಪೆ ಸುಲಿದು ಟೊಮೆಟೊ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಉಪ್ಪು,ಕಾಳುಮೆಣಸು ಮತ್ತು ನಿಂಬೆ ರಸವನ್ನು ಬೆರೆಸಿ ಸಲಾಡ್ ರೀತಿಯಲ್ಲಿ ಸೇವಿಸಿದರೆ ರುಚಿಕರವಾಗಿಯೂ ಇರುತ್ತದೆ ಜೊತೆಗೆ ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ಸಿಪ್ಪೆ ಸಮೇತ ತುರಿದುಕೊಂಡು ಮೊಸರಿನಲ್ಲಿ ಕಲಸಿ ಉಪ್ಪು, ಜೀರಿಗೆ ಪುಡಿ,ಕಾಳುಮೆಣಸಿನ ಪುಡಿ,ಕೊತ್ತಂಬರಿ ಪುಡಿ ಹಾಕಿ ಸೇವಿಸಿದರೆ ದೇಹವನ್ನು ತಂಪಾಗಿಸುತ್ತದೆ. ಜೊತೆಗೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೌತೆಕಾಯಿಯನ್ನು ಹೋಳುಗಳಾಗಿ ಕತ್ತರಿಸಿ ಮೊಸರಿನಲ್ಲಿ ಅದ್ದಿ ಸಂಜೆಯ ಕೆಲಸದ ತಿಂಡಿಯಾಗಿ ಸೇವಿಸಿ.ಇದನ್ನು ಸೇವಿಸಿದರೆ ಹೆಚ್ಚು ಹೊತ್ತು ಹಸಿವಾಗುವುದಿಲ್ಲ.
ಸೌತೆಕಾಯಿಯನ್ನು ಕತ್ತರಿಸಿ ಮತ್ತು ಬಾಳೆಹಣ್ಣು,ಪಾಲಕ್ ಮತ್ತು ಮೊಸರು ಜೊತೆಗೆ ಚೆನ್ನಾಗಿ ರುಬ್ಬಿಕೊಳ್ಳಿ.ಬೇಕಾದರೆ ಇದಕ್ಕೆ ಸ್ವಲ್ಪ ತೆಂಗಿನಕಾಯಿಯನ್ನೂ ಸೇರಿಸಬಹುದು.ಈ ಸ್ಮೂಥಿ ದೇಹದಲ್ಲಿರುವ ಬೇಡದ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಡಿಟಾಕ್ಸ್ ನೀರನ್ನು ತಯಾರಿಸಲು,ಸೌತೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಅದಕ್ಕೆ ಪುದೀನಾ,ನಿಂಬೆ ರಸ ಮತ್ತು ಶುಂಠಿ ಸೇರಿಸಿ.ಸ್ವಲ್ಪ ಹೊತ್ತು ಕುದಿಸಿ ನಂತರ ಕುಡಿಯಿರಿ.ಎಲ್ಲಾ ಪದಾರ್ಥಗಳ ರಸವನ್ನು ನೀರು ಹೀರಿಕೊಳ್ಳುವುದರಿಂದ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.