ನವದೆಹಲಿ: ಪ್ರತಿ ದೇಶದ ಪ್ರಮುಖ ನಗರಗಳಲ್ಲಿ ಕ್ಯಾಬ್ ಸೌಲಭ್ಯ ಸಾಮಾನ್ಯವಾಗಿದೆ. ಆದರೆ ಕ್ಯಾಬ್ಗಳಿಗೆ ಸಂಬಂಧಿಸಿದ ದೂರುಗಳು ಮತ್ತು ಅಪಘಾತಗಳು ಸಹ ಬರುತ್ತಲೇ ಇವೆ. ಬಾಲಿವುಡ್ ನಟಿ ಸೋನಂ ಕಪೂರ್(Sonam Kapoor) ಅವರಿಗೂ ಸಹ ಅಂತಹದೇ ಒಂದು ಭಯಾನಕ ಅನುಭವವಾಗಿರುವುದನ್ನು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
'ವೀರ್ ದಿ ವೆಡ್ಡಿಂಗ್' ಖ್ಯಾತಿಯ ನಟಿ ಕ್ಯಾಬ್ ಕಂಪನಿಗಳಲ್ಲಿ ಒಂದಾದ ಉಬರ್(Uber) ಕ್ಯಾಬ್ ಬಗ್ಗೆ ವಿವರಿಸುತ್ತಾ, ಈ ಕ್ಯಾಬ್ ಅನ್ನು ತೆಗೆದುಕೊಳ್ಳುವ ಮೊದಲು ಜನರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದರು. ಸೋನಂ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಈ ಸಂಬಂಧ ಟ್ವೀಟ್ ಮಾಡಿ, 'ಸ್ನೇಹಿತರೇ, ನಾನು ಲಂಡನ್ನ Uber ಕ್ಯಾಬ್ನಲ್ಲಿ ಬಹಳ ಭಯಾನಕ ಕ್ಷಣವನ್ನು ಹೊಂದಿದ್ದೇನೆ. ಆ ಕ್ಷಣ ನನ್ನನ್ನು ಬೆಚ್ಚಿ ಬೀಳಿಸಿತು. ದಯವಿಟ್ಟು ನೀವೆಲ್ಲರೂ ಈ ಬಗ್ಗೆ ಜಾಗರೂಕರಾಗಿರಿ. ನಗರದ ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳುವುದು ಉತ್ತಮ ಮತ್ತು ಸುರಕ್ಷಿತ ಮಾರ್ಗವಾಗಿದೆ' ಎಂದು ಬರೆದಿದ್ದಾರೆ.
Hey guys I’ve had the scariest experience with @Uber london. Please please be careful. The best and safest is just to use the local public transportation or cabs. I’m super shaken.
— Sonam K Ahuja (@sonamakapoor) January 15, 2020
What happened, sonam? As someone who takes cabs in London, it would be good to know!
— Priya Mulji (@PriyaMulji) January 15, 2020
ಸೋನಂ ಅವರ ಈ ಟ್ವೀಟ್ ನಂತರ ಸೋಷಿಯಲ್ ಮೀಡಿಯಾದಲ್ಲಿ ಒಂದು ಸಂವೇದನೆ ಮನೆಮಾಡಿತು. ಈ ಅಪಘಾತದ ಬಗ್ಗೆ ವಿವರಿಸುವಂತೆ ನೆಟಿಜನ್ಗಳು ಕೇಳಿದ ನಂತರ ಪ್ರತಿಕ್ರಿಯಿಸಿದ ಸೋನಂ, 'ಕ್ಯಾಬ್ ಡ್ರೈವರ್ ಅಸ್ಥಿರವಾಗಿದ್ದ. ಅವನು ಕೂಗುತ್ತಿದ್ದನು, ಆದರೆ ಯಾವುದೇ ಶಬ್ದ ಮಾಡುತ್ತಿರಲಿಲ್ಲ. ಇದೆಲ್ಲವನ್ನೂ ನೋಡಿ ನನ್ನ ಎದೆ ಒಮ್ಮೆಗೆ ಝಲ್ ಎಂದಿತು' ಎಂದು ತಿಳಿಸಿದ್ದಾರೆ.
The driver was unstable and was yelling and shouting. I was shaking by the end of it.
— Sonam K Ahuja (@sonamakapoor) January 15, 2020
ಸೋನಂ ತನ್ನ ಟ್ವೀಟ್ನಲ್ಲಿ ಉಬರ್ ಅನ್ನು ಟ್ಯಾಗ್ ಮಾಡಿದ್ದರು, ಇದರ ಪರಿಣಾಮವಾಗಿ ಸೋನಂ ಅವರ ಟ್ವೀಟ್ಗೆ ಉಬರ್ ಉತ್ತರಿಸುತ್ತಾ, 'ಈ ಎಲ್ಲವನ್ನು ಕೇಳಿ ನಮಗೆ ವಿಷಾದವಾಯಿತು. ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೀವು ನಮಗೆ ಸಂದೇಶವನ್ನು ಕಳುಹಿಸಬಹುದೇ, ಇದರಿಂದ ನಾವು ಈ ವಿಷಯವನ್ನು ತನಿಖೆ ಮಾಡಬಹುದು' ಎಂದು ಪ್ರತಿಕ್ರಿಯಿಸಿದೆ.
Sorry to hear about this, Sonam. Can you please send us a DM with your email address and mobile so we can look into this?
— Uber (@Uber) January 16, 2020
ಉಬರ್ನ ಈ ಸಂದೇಶಕ್ಕೆ ಪ್ರತಿಕ್ರಿಯಿಸಿದ ಸೋನಂ, 'ನಾನು ನಿಮ್ಮ ಅಪ್ಲಿಕೇಶನ್ನಲ್ಲಿ ದೂರು ನೀಡಲು ಪ್ರಯತ್ನಿಸಿದೆ ಆದರೆ ಸ್ವಯಂಚಾಲಿತ ಉತ್ತರವನ್ನು ಮತ್ತೆ ಮತ್ತೆ ಕಳುಹಿಸಲಾಗಿದೆ, ಅದರಲ್ಲಿ ಯಾವುದೇ ಅರ್ಥವಿಲ್ಲ. ನಿಮ್ಮ ಜನರು ನಿಮ್ಮ ಸಿಸ್ಟಮ್ ಅನ್ನು ನವೀಕರಿಸಬೇಕಾಗಿದೆ. ಈಗ ಹಾನಿಯಾಗಿದೆ. ಇದಕ್ಕಿಂತ ಹೆಚ್ಚಿನದನ್ನು ನೀವು ಮಾಡಲು ಸಾಧ್ಯವಿಲ್ಲ' ಎಂದು ಖಾರವಾಗಿಯೇಗಿ ಉತ್ತರಿಸಿದ್ದಾರೆ.
I tried complaining on your app, and just got multiple disconnected replies by bots. You guys need to update your system. The damage is done. There is nothing more you can do.
— Sonam K Ahuja (@sonamakapoor) January 16, 2020
ಈ ಸಂಪೂರ್ಣ ವಿಷಯದ ಬಗ್ಗೆ ತಿಳಿದ ಸೋನಂ ಅವರ ಅಭಿಮಾನಿಗಳು ಸಹ ಉಬರ್ ಗೆ ಎಚ್ಚರಿಸಿದ್ದು, ಅವರ ಸಿಸ್ಟಮ್ ಮತ್ತು ಡ್ರೈವರ್ ಮೇಲೆ ಕಣ್ಣಿಡಲು ತಿಳಿಸಿದ್ದಾರೆ.