Anchor Anushree Father: ಕನ್ನಡದ ನಟಿ, ನಿರೂಪಕಿ ಅನುಶ್ರೀ ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಗವಹಿಸಿ ತಮ್ಮ ಜೀವನ, ನಡೆದು ಬಂದ ಹಾದಿ, ಮದುವೆ, ಕರಿಯರ್, ವದಂತಿಗಳು ಹೀಗೆ ಹಲವಾರು ತಮ್ಮ ಜೀವನದ ವಿಚಾರಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ..
ನಟಿ ಕಮ್ ಆಂಕರ್ ಅನುಶ್ರೀ ಚಟಪಟ ಮಾತಿನ ಮೂಲಕ ಎಲ್ಲರನ್ನು ರಂಜಿಸುತ್ತಿದ್ದಾರೆ.. ಆದರೆ ಆರಂಭಿಕ ಜೀವನದಲ್ಲಿ ಅವರೂ ಸಾಕಷ್ಟು ಕಷ್ಟಗಳನ್ನು ಎಸುರಿಸಿದ್ದಾರೆ..
ಆಂಕರ್ ಅನುಶ್ರೀ ಪ್ರತಿಯೊಂದು ವೇದಿಕೆಯಲ್ಲೂ ಹೇಳಿಕೊಂಡಿದ್ದು, ನನ್ನ ಅಮ್ಮ ನನ್ನ ಜೀವನದ ಬಹದೊಡ್ಡ ಹಿರೋ ಎಂದು.. ಇತ್ತೀಚೆಗೆ ಅನು ಮೊದಲ ಬಾರಿಗೆ ತುಳು ಸಂದರ್ಶನವೊಂದರಲ್ಲಿ ಭಾಹವಹಿಸಿದ್ದರು.. ಅಲ್ಲಿಯೂ ಇದೇ ಮಾತನ್ನೇ ಹೇಳಿದ್ದಾರೆ..
ನನ್ನ ಜೀವನದಲ್ಲಿ ನನ್ನಮ್ಮನೇ ನನಗೆ ಎಲ್ಲ.. ಯಾವ ಸಂಬಂಧಿಕರ ಮನೆಯಲ್ಲ.. ಬಾಡಿಗೆ ಮನೆ ಮಾಡಿಕೊಂಡಿದ್ದೆವು.. ಆಗ ನಮ್ಮಮ್ಮನ ಬಳಿ ಬರೀ 4 ಸೀರೆ ಇತ್ತು ಎಂದು ಹೇಳಿಕೊಂಡಿದ್ದಾರೆ.
ಎಷ್ಟೋ ಸಲ ಊಟ ಇಲ್ಲದೇ ಅಂಗನವಾಡಿಯಲ್ಲಿ ನನ್ನ ತಮ್ಮನಿಗೆ ನೀಡಿದ್ದ ಪೌಷ್ಟಿಕ ಆಹಾರದ ಪುಡಿಯನ್ನು ಬಳಸಿ ರೊಟ್ಟಿ ರೀತಿ ಮಾಡಿ ತಿಂದಿದ್ದೇವೆ.. ಅಂತಹ ಕಷ್ಟದ ಸಮಯದಲ್ಲಿ ಬರದವರು ಈಗ ಬಂದು ನಾನು ನಿಮ್ಮ ತಂದೆ ಎಂದರೇ ನಾನು ಒಪ್ಪಿಕೊಳ್ಳುವುದಿಲ್ಲ.. ಎಂದು ಆಂಕರ್ ಅನುಶ್ರೀ ಮೊದಲ ಬಾರಿಗೆ ತಂದೆಯ ಬಗ್ಗೆ ಮಾತನಾಡಿದ್ದಾರೆ.
ನಾನು ತುಂಬಾ ಸಲ ಹೇಳಿದ್ದೇನೆ ನನ್ನ ಜೀವನದಲ್ಲಿ ನನಗೆ ನನ್ನ ಅಮ್ಮನೇ ನನಗೆ ಎಲ್ಲ.. ಹುಟ್ಟಿಸಿದ ಮಾತ್ರಕ್ಕೆ ತಂದೆ ತಾಯಿಯಾಗಲು ಸಾಧ್ಯವಿಲ್ಲ,, ಮಕ್ಕಳಿಗೆ ಒಂದೊಳ್ಳೆ ಭವಿಷ್ಯ ರೂಪಿಸಿಕೊಟ್ಟರೇ ಮಾತ್ರ ಅಪ್ಪ-ಅಮ್ಮ ಇದೇ ಅವರ ಮೊದಲ ಜವಾಬ್ದಾರಿಯಾಗಿರಬೇಕು ಎಂದಿದ್ದಾರೆ.
ತಂದೆ ಮಕ್ಕಳಿಗೆ ಹಿರೋ ತರ ಇರಬೇಕು ಆದರೆ ನನ್ನ ಅಪ್ಪ ಎಂದಿಗೂ ನನಗೆ ಹಾಗಿಲ್ಲ.. ನಮ್ಮಮ್ಮನಿಗೆ ಒಳ್ಳೆಯ ಪತಿಯಾಗಿದ್ದರಾ ಎನ್ನುವುದು ನನಗೆ ಗೊತ್ತಿಲ್ಲ.. ಎಂದು ಅನುಶ್ರೀ ಹೇಳಿದ್ದಾರೆ.