ಕ್ರಿಕೆಟ್‌ ಬಳಿಕ ಈ ಕ್ಷೇತ್ರವೇ ವಿರಾಟ್‌ ಕೊಹ್ಲಿ ಮುಂದಿನ ಗುರಿ... ಟಿ20 ನಿವೃತ್ತಿ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಅಣಿಯಿಟ್ಟ ʼರನ್‌ ಮಷಿನ್ʼ!‌

 Virat Kohli Business: ಕ್ರಿಕೆಟ್ ಕ್ಷೇತ್ರದ ಬಳಿಕ ಇದೀಗ ರೆಸ್ಟೋರೆಂಟ್ ಜಗತ್ತಿನಲ್ಲಿ ತನ್ನ ಮುಂದಿನ ಸಾಮ್ರಾಜ್ಯ ನಿರ್ಮಿಸಲು ವಿರಾಟ್‌ ಮುಂದಾಗಿದ್ದಾರೆ.  ಕೊಹ್ಲಿ ಒಡೆತನದ ರೆಸ್ಟೋರೆಂಟ್‌ʼಗಳು ತುಂಬಾ ಐಷಾರಾಮಿಯಾಗಿದ್ದು, ಸೇವೆ ಮತ್ತು ಒಳಾಂಗಣದ ಸೌಂದರ್ಯವನ್ನು ಅದ್ಭುತವಾಗಿದೆ. 

Written by - Bhavishya Shetty | Last Updated : Jul 22, 2024, 08:02 PM IST
    • ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ
    • ಕೊಹ್ಲಿ ಕ್ರಿಕೆಟಿಗ ಮಾತ್ರವಲ್ಲ ದೊಡ್ಡ ಉದ್ಯಮಿಯೂ ಆಗುತ್ತಿದ್ದಾರೆ
    • ವಿರಾಟ್ ಕೊಹ್ಲಿ ಒನ್ 8 ಕಮ್ಯೂನ್ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ
ಕ್ರಿಕೆಟ್‌ ಬಳಿಕ ಈ ಕ್ಷೇತ್ರವೇ ವಿರಾಟ್‌ ಕೊಹ್ಲಿ ಮುಂದಿನ ಗುರಿ... ಟಿ20 ನಿವೃತ್ತಿ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಅಣಿಯಿಟ್ಟ ʼರನ್‌ ಮಷಿನ್ʼ!‌  title=
Virat Kohli

Virat Kohli Business: ಟೀಂ ಇಂಡಿಯಾದ ದಿಗ್ಗಜ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಯಶಸ್ವಿ ಕ್ರಿಕೆಟಿಗ ಹಾಗೂ ಯಶಸ್ವಿ ಉದ್ಯಮಿ. ಕಿಂಗ್ ಕೊಹ್ಲಿ ಕ್ರಿಕೆಟಿಗ ಮಾತ್ರವಲ್ಲ ದೊಡ್ಡ ಉದ್ಯಮಿಯೂ ಆಗುತ್ತಿದ್ದಾರೆ. ಕೊಹ್ಲಿ ಈಗಾಗಲೇ ಹಲವು ಬ್ರಾಂಡ್‌ʼಗಳನ್ನು ಹೊಂದಿದ್ದು, ಇದೀಗ, ಅನುಮೋದನೆಗಳ ಜೊತೆಗೆ, ರೆಸ್ಟೋರೆಂಟ್ ವ್ಯವಹಾರದಲ್ಲಿಯೂ ಯಶಸ್ಸು ಸಾಧಿಸಲು ಹೊರಟಿದ್ದಾರೆ.

ಭಾರತದ ಹಿರಿಯ ಬ್ಯಾಟ್ಸ್‌ʼಮನ್ ವಿರಾಟ್ ಕೊಹ್ಲಿ ಒನ್ 8 ಕಮ್ಯೂನ್ ಎಂಬ ಹೆಸರಿನ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಅದರ ಸರಣಿಯು ವಿಸ್ತರಿಸುತ್ತಿದೆ. ಈ ರೆಸ್ಟೋರೆಂಟ್ ನಂತರ, ಹೊಸ ಮಳಿಗೆಗಳು ಒಂದರ ನಂತರ ಒಂದರಂತೆ ಭಾರತದ ಮೂಲೆ ಮೂಲೆಯಲ್ಲಿ ತಲೆ ಎತ್ತುತ್ತಿವೆ. 

ಇದನ್ನೂ ಓದಿ:  ತರುಣ್‌ ಸುಧೀರ್‌ ಬಾಳಸಂಗಾತಿ ನಟಿ ಸೋನಲ್ ಮೊಂಥೆರೋ​ ಹುಟ್ಟೂರು ಯಾವುದು?

ಕ್ರಿಕೆಟ್ ಕ್ಷೇತ್ರದ ಬಳಿಕ ಇದೀಗ ರೆಸ್ಟೋರೆಂಟ್ ಜಗತ್ತಿನಲ್ಲಿ ತನ್ನ ಮುಂದಿನ ಸಾಮ್ರಾಜ್ಯ ನಿರ್ಮಿಸಲು ವಿರಾಟ್‌ ಮುಂದಾಗಿದ್ದಾರೆ.  ಕೊಹ್ಲಿ ಒಡೆತನದ ರೆಸ್ಟೋರೆಂಟ್‌ʼಗಳು ತುಂಬಾ ಐಷಾರಾಮಿಯಾಗಿದ್ದು, ಸೇವೆ ಮತ್ತು ಒಳಾಂಗಣದ ಸೌಂದರ್ಯವನ್ನು ಅದ್ಭುತವಾಗಿದೆ. 

ಅಂದಹಾಗೆ ಭಾರತದ 6 ದೊಡ್ಡ ನಗರಗಳಲ್ಲಿ ವಿರಾಟ್ ಕೊಹ್ಲಿ ಅವರ ರೆಸ್ಟೋರೆಂಟ್‌ಗಳು ತೆರೆದಿವೆ. ಅಷ್ಟೇ ಅಲ್ಲ ಈ ರೆಸ್ಟೊರೆಂಟ್ ಗಳಿಂದ ಉತ್ತಮ ಆದಾಯವನ್ನೂ ಗಳಿಸುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್, ಪುಣೆ, ದೆಹಲಿ, ಮುಂಬೈ ಮತ್ತು ಕೋಲ್ಕತ್ತಾ ನಗರಗಳಲ್ಲಿ ಕೊಹ್ಲಿಯ ರೆಸ್ಟೋರೆಂಟ್‌ಗಳು ಉತ್ತಮ ವ್ಯಾಪಾರ ನಡೆಸುತ್ತಿವೆ.

ಇತ್ತೀಚಿನ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ಇತರ 8 ನಗರಗಳಲ್ಲಿ ರೆಸ್ಟೋರೆಂಟ್‌ʼಗಳನ್ನು ತೆರೆಯಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ, ರೆಸ್ಟೋರೆಂಟ್‌ʼನ 3-4 ಹೊಸ ಮಳಿಗೆಗಳು ತೆರೆಯಲ್ಪಟ್ಟಿವೆ. ವಿರಾಟ್ ಕೊಹ್ಲಿ ಮುಂದಿನ ಎರಡು ವರ್ಷಗಳಲ್ಲಿ ಸುಮಾರು 10 ಹೊಸ ರೆಸ್ಟೋರೆಂಟ್‌ʼಗಳನ್ನು ತೆರೆಯುವ ಗುರಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ:  ಶ್ರೀಲಂಕಾ ಪ್ರವಾಸದಿಂದ ಜಡೇಜಾ ಹೆಸರು ಕೈಬಿಟ್ಟಿದ್ದೇಕೆ? ಕಾರಣ ಬಹಿರಂಗಗೊಳಿಸಿದ ಅಜಿತ್‌ ಅಗರ್ಕರ್‌

ವಿದೇಶದಲ್ಲೂ ಇದೆ ರೆಸ್ಟೋರೆಂಟ್:‌ 
ವಿರಾಟ್ ಅವರ ರೆಸ್ಟೋರೆಂಟ್ ಸಿರೀಸ್ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಶೀಘ್ರದಲ್ಲೇ ವಿರಾಟ್ ವಿದೇಶದಲ್ಲೂ ತಮ್ಮ ಮಳಿಗೆಗಳನ್ನು ಆರಂಭಿಸಲಿದ್ದಾರೆ. ಇದು ದುಬೈನಿಂದ ಆರಂಭವಾಗಲಿದೆ. ವಿರಾಟ್ ಕೊಹ್ಲಿಯ ಹೊಸ ಔಟ್‌ಲೆಟ್‌ʼಗಾಗಿ ಫ್ಯಾನ್ಸ್ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ರೆಸ್ಟೋರೆಂಟ್ ನೆಪದಲ್ಲಿ ಹಲವು ಅಭಿಮಾನಿಗಳಿಗೆ ಕೊಹ್ಲಿಯನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News