ಶ್ರೀಲಂಕಾ ಪ್ರವಾಸದಿಂದ ಜಡೇಜಾ ಹೆಸರು ಕೈಬಿಟ್ಟಿದ್ದೇಕೆ? ಕೊನೆಗೂ ಪ್ರತಿಕಾಗೋಷ್ಠಿಯಲ್ಲಿ ಕಾರಣ ಬಹಿರಂಗಗೊಳಿಸಿದ ಅಜಿತ್‌ ಅಗರ್ಕರ್‌

Team India for Sri Lanka Tour: ಟೀಂ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. 2024ರ ಟಿ20 ವಿಶ್ವಕಪ್‌ʼನಲ್ಲಿಯೂ ಶಮಿ ತಂಡದ ಭಾಗವಾಗಿರಲಿಲ್ಲ. ಆದರೆ ಈಗ ಶಮಿ ಬಗ್ಗೆ ಒಂದು ಅಪ್ಡೇಟ್ ಬಂದಿದೆ.

Written by - Bhavishya Shetty | Last Updated : Jul 22, 2024, 07:32 PM IST
    • ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ಗೌತಮ್‌ ಗಂಭೀರ್‌ ಪತ್ರಿಕಾಗೋಷ್ಠಿ
    • ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ
    • ಪ್ರಿನ್ಸ್ ಶುಭ್ಮನ್ ಗಿಲ್ ಅವರ ಅದೃಷ್ಟ ಟೀಂ ಇಂಡಿಯಾದಲ್ಲಿ ಮಿಂಚಿದೆ
ಶ್ರೀಲಂಕಾ ಪ್ರವಾಸದಿಂದ ಜಡೇಜಾ ಹೆಸರು ಕೈಬಿಟ್ಟಿದ್ದೇಕೆ? ಕೊನೆಗೂ ಪ್ರತಿಕಾಗೋಷ್ಠಿಯಲ್ಲಿ ಕಾರಣ ಬಹಿರಂಗಗೊಳಿಸಿದ ಅಜಿತ್‌ ಅಗರ್ಕರ್‌ title=
press conference

Team India for Sri Lanka Tour:  ಟೀಂ ಇಂಡಿಯಾದ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಅಚ್ಚರಿಯ ನಿರ್ಧಾರಗಳೊಂದಿಗೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಇದೇ ಸಂದರ್ಭದಲ್ಲಿ ರುತುರಾಜ್‌ ಗಾಯಕ್ವಾಡ್‌, ಅಭಿಷೇಕ್‌ ಶರ್ಮಾ, ರವೀಂದ್ರ ಜಡೇಜಾ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗಳಿಗೆ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಆಯ್ಕೆಗಾರ ಅಜಿತ್‌ ಅಗರ್ಕರ್‌ ಮತ್ತು ಕೋಚ್‌ ಗೌತಮ್‌ ಗಂಭೀರ್‌ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:  ʼಬಾತ್ ರೂಂನಲ್ಲಿಯೂ ಸೀಕ್ರೆಟ್ ಮೈಕ್, ಕ್ಯಾಮರಾ...ʼ ಬಿಗ್ ಬಾಸ್ ಮನೆ ಶಾಕಿಂಗ್‌ ಸತ್ಯ ಬಿಚ್ಚಿಟ್ಟ ಖ್ಯಾತ ಸ್ಪರ್ಧಿ!

ಟೀಂ ಇಂಡಿಯಾದ ಅನುಭವಿ ಬೌಲರ್ ಮೊಹಮ್ಮದ್ ಶಮಿ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. 2024ರ ಟಿ20 ವಿಶ್ವಕಪ್‌ʼನಲ್ಲಿಯೂ ಶಮಿ ತಂಡದ ಭಾಗವಾಗಿರಲಿಲ್ಲ. ಆದರೆ ಈಗ ಶಮಿ ಬಗ್ಗೆ ಒಂದು ಅಪ್ಡೇಟ್ ಬಂದಿದೆ. ಬಾಂಗ್ಲಾದೇಶ ತಂಡ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಲಿದ್ದು, ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಶಮಿ ಕಂಬ್ಯಾಕ್‌ ಮಾಡುವ ಸಾಧ್ಯತೆ ಇದೆ ಎಂದು ಅಜಿತ್ ಅಗರ್ಕರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಷಯವೂ ಸ್ಪಷ್ಟವಾಗಿದೆ. ಇವರಿಬ್ಬರು ಸಹ 2027 ರ ಏಕದಿನ ವಿಶ್ವಕಪ್ ಆಡಬಹುದು ಎಂದು ಗಂಭೀರ್‌ ಹೇಳಿದ್ದಾರೆ. ಇಬ್ಬರೂ ಫಿಟ್ನೆಸ್ ಕಾಯ್ದುಕೊಂಡರೆ ವಿಶ್ವಕಪ್ ಆಡಬಹುದು. ದೊಡ್ಡ ವೇದಿಕೆಯಲ್ಲಿ ಅವರು ಏನು ಮಾಡಬಹುದು ಎಂದು ನನಗೆ ತಿಳಿದಿದೆ ಎಂದಿದ್ದಾರೆ.

ಶುಭ್ಮನ್ ಗಿಲ್ ಅವರ ಅದೃಷ್ಟ ಟೀಂ ಇಂಡಿಯಾದಲ್ಲಿ ಮಿಂಚಿದೆ. ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸದಲ್ಲಿ 4-1 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ. ಈಗ ಗಿಲ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ. ಗಿಲ್ ಬಗ್ಗೆ ಮಾತನಾಡಿದ ಅಗರ್ಕರ್, ಆತ ಎಲ್ಲಾ ಮೂರು ಸ್ವರೂಪಗಳ ಆಟಗಾರ ಎಂದು ಹೇಳಿದ್ದಾರೆ. 

ಇದನ್ನೂ ಓದಿ:  ತರುಣ್‌ ಸುಧೀರ್‌ ಬಾಳಸಂಗಾತಿ ನಟಿ ಸೋನಲ್ ಮೊಂಥೆರೋ​ ಹುಟ್ಟೂರು ಯಾವುದು?

2024ರ ಟಿ 20 ವಿಶ್ವಕಪ್‌ʼನಲ್ಲಿ ಚಾಂಪಿಯನ್ ಆದ ನಂತರ, ರವೀಂದ್ರ ಜಡೇಜಾ ಟಿ 20 ಫಾರ್ಮ್ಯಾಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಆದರೆ ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ಘೋಷಣೆಯಾದಾಗ ರವೀಂದ್ರ ಜಡೇಜಾ ಅವರನ್ನೂ ಏಕದಿನ ತಂಡದಿಂದ ಕೈಬಿಡಲಾಗಿತ್ತು. ಅವರ ಬಗ್ಗೆ ಪ್ರಶ್ನೆ ಎತ್ತಿದಾಗ, ಅವರನ್ನು ಏಕದಿನ ತಂಡದಿಂದ ಕೈಬಿಟ್ಟಿಲ್ಲ.  ಬದಲಾಗಿ ಅಕ್ಷರ್ ಮತ್ತು ಜಡೇಜಾ ಇಬ್ಬರನ್ನೂ ಕಿರು ಸರಣಿಗೆ ತೆಗೆದುಕೊಂಡರೆ ಪ್ರಯೋಜನವಿಲ್ಲ ಎಂದು ಈ ನಿರ್ಧಾರ ಮಾಡಲಾಗಿದೆ ಎಂದು ಮುಖ್ಯ ಆಯ್ಕೆದಾರರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News