Kargil Vijay Diwas: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26ರಂದು ʼಕಾರ್ಗಿಲ್ ವಿಜಯ್ ದಿವಸ್ʼ ಅನ್ನು ಆಚರಿಸಲಾಗುತ್ತದೆ. 1999ರ ಜುಲೈ 26ರಂದು ಭಾರತೀಯ ಸೈನಿಕರು ʼಅಪರೇಶನ್ ವಿಜಯ್ʼ ಮೂಲಕ ಕಾರ್ಗಿಲ್-ಡ್ರಾಸ್ ವಲಯದಲ್ಲಿ ಪ್ರದರ್ಶಿಸಿದ ಶೌರ್ಯದ ನೆನಪಿಗಾಗಿ ಈ ದಿನವನ್ನು ಭಾರತದಾದ್ಯಂತ ಆಚರಿಸಲಾಗುತ್ತದೆ.
ಇಂದು ಅಂದರೆ ಶುಕ್ರವಾರ(ಜುಲೈ ೨೬) ಕಾರ್ಗಿಲ್ ವಿಜಯದ 25ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದರ ಗೌರವಾರ್ಥವಾಗಿ ಭಾರತೀಯ ವಾಯುಪಡೆಯು ಜುಲೈ 12ರಿಂದ ಇಂದಿನವರೆಗೆ ಏರ್ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ʼಕಾರ್ಗಿಲ್ ವಿಜಯ್ ದಿವಸ್ ರಜತ್ ಜಯಂತಿ' ಸ್ಮರಣಾರ್ಥವನ್ನು ಆಚರಿಸುತ್ತಿದೆ.
#WATCH | Ladakh: Visuals from Kargil War Memorial in Drass.
Prime Minister Narendra Modi will visit here today to pay tribute to the heroes of the Kargil War on the occasion of 25th #KargilVijayDiwas2024. pic.twitter.com/mF589y4nAh
— ANI (@ANI) July 26, 2024
ಇದನ್ನೂ ಓದಿ: ಇಲ್ಲೊಂದು ದೇವಾಲಯ..ಇಲ್ಲಿ ಹವಾಮಾನ ಮುನ್ಸೂಚನೆ ನಿಖರವಾಗಿ 7 ದಿನಗಳ ಮುಂಚೆಯೇ ತಿಳಿಯುತ್ತೆ!!
ಪ್ರಧಾನಿ ಮೋದಿ ಭೇಟಿ
#WATCH | Ladakh: Prime Minister Narendra Modi paid tribute to the heroes of the Kargil War at Kargil War Memorial in Kargil on the occasion of 25th #KargilVijayDiwas2024 pic.twitter.com/T8HVHcpU5H
— ANI (@ANI) July 26, 2024
ʼಕಾರ್ಗಿಲ್ ವಿಜಯ ದಿವಸʼದ ಅಂಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿಯವರು ಲಡಾಕ್ನಲ್ಲಿರುವ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಕಾರ್ಗಿಲ್ ಯುದ್ಧದಲ್ಲಿ ತ್ಯಾಗ ಮಾಡಿದ ವೀರ ಯೋಧರಿಗೆ ಗೌರವ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು, ʼಪಾಕಿಸ್ತಾನವು ಈ ಹಿಂದೆ ತನ್ನ ಎಲ್ಲಾ ಕೆಟ್ಟ ಪ್ರಯತ್ನಗಳಲ್ಲಿ ವಿಫಲವಾಗಿದೆ. ಆದರೆ ಪಾಕಿಸ್ತಾನವು ತನ್ನ ಇತಿಹಾಸದಿಂದ ಏನನ್ನೂ ಕಲಿತಿಲ್ಲ. ಅದು ಭಯೋತ್ಪಾದನೆ ಮತ್ತು ಪ್ರಾಕ್ಸಿ ಯುದ್ಧದ ಸಹಾಯದಿಂದ ತನ್ನನ್ನು ತಾನು ಪ್ರಸ್ತುತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಭಯೋತ್ಪಾದನೆಯ ದುಷ್ಕೃತ್ಯದ ಉದ್ದೇಶಗಳು ಎಂದಿಗೂ ಯಶಸ್ವಿಯಾಗುವುದಿಲ್ಲ. ನಮ್ಮ ಸೈನಿಕರು ಭಯೋತ್ಪಾದನೆಯನ್ನು ಪೂರ್ಣ ಬಲದಿಂದ ಹತ್ತಿಕ್ಕುತ್ತಾರೆ ಮತ್ತು ಶತ್ರುಗಳಿಗೆ ತಕ್ಕ ಉತ್ತರವನ್ನು ನೀಡುತ್ತಾರೆʼ ಅಂತಾ ಗುಡುಗಿದ್ದಾರೆ.
ಇದನ್ನೂ ಓದಿ: ವಾಯು ರಕ್ಷಣಾ ರೆಜಿಮೆಂಟ್ ಮೊದಲ ಮಹಿಳಾ ಅಧಿಕಾರಿಯಾಗಿ ಕರ್ನಲ್ ಅಂಶು ಜಮ್ವಾಲ್ ನೇಮಕ
ಶಿಂಕೂಲ್ ಲಾ ಸುರಂಗಕ್ಕೆ ಚಾಲನೆ
#WATCH | Ladakh: Prime Minister Narendra Modi virtually carries out the first blast of the Shinkun La Tunnel project
Shinkun La Tunnel Project consists of a 4.1 km long Twin-Tube tunnel which will be constructed at an altitude of around 15,800 feet on the Nimu – Padum – Darcha… pic.twitter.com/ISobHEhkzl
— ANI (@ANI) July 26, 2024
ಕಾರ್ಗಿಲ್ ವಿಜಯ ದಿವಸವಾದ ಇಂದು ಪ್ರಧಾನಿ ಮೋದಿಯವರು ಲಡಾಖ್ನಲ್ಲಿ ವಿಶ್ವದ ಅತಿ ಎತ್ತರದ ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಿದರು. ಸರ್ವಋತುವಿನಲ್ಲಿ ಪರ್ಯಾಯ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಮತ್ತು ಲಡಾಖ್ಗೆ ಮಿಲಿಟರಿ ಪಡೆ ಕ್ಷಿಪ್ರವಾಗಿ ತೆರಳಲು ಅನುಕೂಲವಾಗುವಂತೆ ಅತ್ಯಂತ ಆಯಕಟ್ಟಿನ ಹಾಗೂ ಪ್ರಮುಖ ಎನಿಸಿರುವ ಶಿಂಕೂಲ್ ಲಾ ಸುರಂಗಕ್ಕೆ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು. ಈ ಸುರಂಗವು ಹಿಮಾಚಲ ಪ್ರದೇಶದ ಲಾಹೌಲ್ ಕಣಿವೆಯನ್ನು ಲಡಾಖ್ನ ಝನ್ಸ್ಕರ್ ಕಣಿವೆಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಶಿಂಕುನ್ ಲಾ ಸುರಂಗ ಯೋಜನೆಯು 4.1KM ಉದ್ದದ ಸುರಂಗವನ್ನು ಒಳಗೊಂಡಿದ್ದು, ನಿಮು-ಪಡುಮ್-ದರ್ಚಾ ರಸ್ತೆಯಲ್ಲಿ 15,800 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಇದು ವಿಶ್ವದ ಅತಿ ಎತ್ತರದ ಸುರಂಗ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.