ಕಿಯಾರಾ ಅಡ್ವಾಣಿ ರೀತಿ hot photoshoot ನಡೆಸಿ ವೈರಲ್ ಆದ ಶ್ವೇತಾ ತಿವಾರಿ ಪುತ್ರಿ

'ಕಸೌಟಿ ಜಿಂದಗಿ ಕಿ' ಮೂಲಕ ಕಿರುತೆರೆಯ ಮೇಲೆ ಚಿರುಪರಿಚಿತರಾಗಿರುವ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿಯ ಹಿರಿಯ ಪುತ್ರಿ ಪಲಕ್ ತಿವಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾಳೆ.

  • Mar 04, 2020, 12:36 PM IST

'ಕಸೌಟಿ ಜಿಂದಗಿ ಕಿ' ಮೂಲಕ ಕಿರುತೆರೆಯ ಮೇಲೆ ಚಿರುಪರಿಚಿತರಾಗಿರುವ ಖ್ಯಾತ ಕಿರುತೆರೆ ನಟಿ ಶ್ವೇತಾ ತಿವಾರಿಯ ಹಿರಿಯ ಪುತ್ರಿ ಪಲಕ್ ತಿವಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಸಕ್ರೀಯರಾಗಿದ್ದಾಳೆ. ಸಾಮಾಜಿಕ ಮಾಧ್ಯಮಗಳ ಮೂಲಕ ಯಾವಾಗಲು ತನ್ನ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುವ ಪಲಕ್, ತಮ್ಮ ಸುಂದರ ಭಾವಚಿತ್ರಗಳನ್ನು ಕೂಡ ಹಂಚಿಕೊಂಡು ಅಭಿಮಾನಿಗಳಿಗೆ ಸಂತಸ ನೀಡುತ್ತಾರೆ. ತನ್ನ ತಾಯಿಯ ರೀತಿಯೇ ತುಂಬಾ ಸ್ಟೈಲಿಶ್ ಆಗಿರುವ ಪಲಕ್, ಸಾಮಾಜಿಕ ಮಾಧ್ಯಮಗಳ ಬಳಕೆ ಹೇಗೆ ಮಾಡಬೇಕು ಎಂಬುದನ್ನು ಚೆನ್ನಾಗಿ ಅರಿತಿದ್ದಾರೆ. ಸಾಮಾಜಿಕ ಮಾಧ್ಯಮಗಳ ಸೆನ್ಸೇಷನ್ ಎಂದೇ ಕರೆಯಿಸಿಕೊಳ್ಳುವ ಪಲಕ್ ಅವರ ಭಾವಚಿತ್ರಗಳು ಸಾಕಷ್ಟು ವೈರಲ್ ಆಗುತ್ತವೆ. ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೂಲಕ ಪಲಕ್ ಸಾಕಷ್ಟು ಹಾಟ್ ಹಾಗೂ ಬೋಲ್ಡ್ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ಪಲಕ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ಮೇಲೆ ತಮ್ಮ ಕೆಲ ಭಾವಚಿತ್ರಗಳನ್ನು ಹಂಚಿಕೊಂಡಿದ್ದು, ಅವರ ಫೋಟೋ ಶೂಟ್ ನೋಡುತ್ತಲೇ ಖ್ಯಾತ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಫೋಟೋ ಶೂಟ್ ನೆನಪಿಗೆ ಬರುತ್ತದೆ. ಕೆಲವೇ ಗಂಟೆಗಳಲ್ಲಿ ಅಭಿಮಾನಿಗಳು ಪಲಕ್ ಅವರ ಈ ಭಾವಚಿತ್ರಗಳನ್ನು ವೈರಲ್ ಮಾಡಿದ್ದಾರೆ. ಡಬ್ಬೂ ರತ್ಲಾನಿಯ ಕ್ಯಾಲೆಂಡರ್ ಫೋಟೋ ಶೂಟ್ ನಲ್ಲಿ ಕಿಯಾರಾ ಕೇವಲ ಎಳೆಯೊಂದನ್ನು ಬಳಸಿ ತಮ್ಮ ದೇಹ ಸೌಂದರ್ಯವನ್ನು ಮರೆಮಾಚುವ ಪ್ರಯತ್ನ ನಡೆಸಿರುವುದಾಗಿ ಕಂಡುಬಂದಿದ್ದರು. ಇದೇ ರೀತಿ ಪಲಕ್ ಕೂಡ ತಮ್ಮ ಫೋಟೋವೊಂದನ್ನು ಹಂಚಿಕೊಂಡಿದ್ದು, ಫೋಟೋ ಇದೀಗ ಭಾರಿ ವೈರಲ್ ಆಗುತ್ತಿದೆ. ಕೆಳಗೆ ನೀಡಲಾಗಿರುವ ಎಲ್ಲ ಫೋಟೋಗಳನ್ನು ಪಲಕ್ ಅವರ ಇನ್ಸ್ಟಾಗ್ರಾಮ್ ಖಾತೆಯಿಂದ ಪಡೆಯಲಾಗಿದೆ.

1 /8

2 /8

3 /8

4 /8

5 /8

6 /8

7 /8

8 /8