ಉದ್ಯಮಿ ರತನ್ ಟಾಟಾ ಬಹುತೇಕ ಎಲ್ಲ ರಂಗದಲ್ಲೂ ಪರಿಪೂರ್ಣತೆ ಸಾಧಿಸಿದ ಅಪರೂಪ ಮತ್ತು ಅಸಾಧಾರಣ ವ್ಯಕ್ತಿ. ರತನ್ ಟಾಟಾ ಅವರು ಬಾಲಿವುಡ್ ಇಂಡಸ್ಟ್ರಿಯಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿದ್ದರು. ಅದರಂತೆ ಅವರು ಚಿತ್ರ ನಿರ್ಮಾಣಕ್ಕೂ ಕೈಹಾಕಿದ್ದರು. ಅಚ್ಚರಿ ಎಂದರೆ ಅವರು ನಿರ್ಮಿಸಿದ ಮೊದಲ ಚಿತ್ರವೇ ಅವರ ಕೊನೆಯ ಚಿತ್ರವೂ ಆಗಿತ್ತು.