ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುವ ಮುನ್ನ ಈ ವಿಡಿಯೋವನ್ನು ಒಮ್ಮೆ ನೋಡಿ ಸಾಕು! ಆಮೇಲೆ ತಿನ್ನಬೇಕೋ ಬೇಡವೋ ನಿರ್ಧಾರ ನಿಮ್ಮದು !

Panipuri Video :ಪಾನೀಪುರಿಯ ರುಚಿ ಹೆಚ್ಚಿಸಲು ನೀರಿಗೆ ಹಾರ್ಪಿಕ್, ಯೂರಿಯಾ ಬಳಕೆ. ಅಂಗಡಿ ಮಾಲೀಕರಿಂದಲೂ ತಪ್ಪೊಪ್ಪಿಗೆ.  

Written by - Ranjitha R K | Last Updated : Oct 17, 2024, 06:11 PM IST
  • ಪಾನೀಪುರಿಗಾಗಿ ಹಿಟ್ಟು ಕಲಸುವ ವಿಡಿಯೋ
  • ಪಾನೀಪುರಿಯ ಪಾನಿಗೆ ಅಂದರೆ ನೀರಿಗೆ ಹಾರ್ಪಿಕ್ ಮತ್ತು ಯೂರಿಯಾ
  • ಇಲ್ಲಿದೆ ನೋಡಿ ವಿಡಿಯೋ
ಬಾಯಿ ಚಪ್ಪರಿಸಿಕೊಂಡು ಪಾನಿಪುರಿ ತಿನ್ನುವ ಮುನ್ನ ಈ ವಿಡಿಯೋವನ್ನು ಒಮ್ಮೆ ನೋಡಿ ಸಾಕು! ಆಮೇಲೆ ತಿನ್ನಬೇಕೋ ಬೇಡವೋ  ನಿರ್ಧಾರ ನಿಮ್ಮದು ! title=

Panipuri Video : ಕೆಲಸದಾಕೆಯೊಬ್ಬಳು ಮೂತ್ರವನ್ನು ಬಳಸಿ ಚಪಾತಿ ಹಿಟ್ಟು ಕಲಸಿರುವ ಸುದ್ದಿ ಇದೀಗ ಭಾರೀ ಚ್ರಚೆಗೆ ಗ್ರಾಸವಾಗಿದೆ.ಇದರ ಮಧ್ಯೆ ಇದೀಗ ಜಾರ್ಖಂಡ್ ನಲ್ಲಿ ನಡೆದಿರುವ ಮತ್ತೊಂದು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಚಪಾತಿಯದ್ದಲ್ಲ, ಬದಲಿಗೆ ಪಾನೀಪುರಿಯದ್ದು. 

ವಿಡಿಯೋದಲ್ಲಿ ಪಾನೀಪುರಿಗಾಗಿ ಯಾವ ರೀತಿ ಹಿಟ್ಟು ಕಲಸಲಾಗುತ್ತದೆ ಎನ್ನುವುದನ್ನು ತೋರಿಸಲಾಗಿದೆ. ಹಿಟ್ಟು ಹದ ಬರಲು ಕಾಲಿನಿಂದ ಅದರ ತುಂಬಾ ನಡೆದಾಡುವುದನ್ನು ನೋಡಬಹುದು.ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಪಾನೀಪುರಿಯ ಪಾನಿಗೆ ಅಂದರೆ ನೀರಿಗೆ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರವನ್ನು ಬಳಸುತ್ತಿರುವುದನ್ನು ಕೂಡಾ ವಿಡಿಯೋದಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ : ಶ್ರೀರಾಮನ ಅವತಾರ ಬುದ್ದನನ್ನು ಕಂಡು ಭಕ್ತಿಯಿಂದ ಕಣ್ಣೀರಿಟ್ಟ ಅಳಿಲು..! ವಿಡಿಯೋ ವೈರಲ್‌..

ವಿಡಿಯೋ ನೋಡಿದ ಜನರ ಪಿತ್ತ ನೆತ್ತಿಗೆ :  
ವೀಡಿಯೋ ವೈರಲ್ ಆಗುತ್ತಿದ್ದ ಹಾಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪಾನೀಪುರಿ ಅಂಗಡಿಯವರನ್ನು ಸುತ್ತುವರೆದು ಅವರು ಮಾಡಿರುವ ಕೃತ್ಯವನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ರುಚಿ ಹೆಚ್ಚಿಸುವ ಸಲುವಾಗಿ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರಗಳನ್ನು ಬಳಸಿರುವುದು ನಿಜ ಎನ್ನುವುದನ್ನು ಅಂಗಡಿ ಮಾಲೀಕರು ಒಪ್ಪಿಕೊಂಡಿದ್ದಾರೆ. 

 

 
 
 
 

 
 
 
 
 
 
 
 
 
 
 

A post shared by Zee News (@zeenews)

ಇದನ್ನೂ ಓದಿ : ಅಡುಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿ, ತಿನ್ನಲು ನೀಡುತ್ತಿದ್ದ ಮನೆ ಕೆಲಸದಾಕೆ ರೀನಾ..! ಶಾಕಿಂಗ್‌ ವಿಡಿಯೋ ವೈರಲ್‌

ಇಬ್ಬರ ಬಂಧನ : 
ಪೊಲೀಸರು ಸ್ಥಳಕ್ಕಾಗಮಿಸಿ ಅಂಗಡಿಯ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಅವರಿಂದ ಬಿಳಿ ಬಣ್ಣದ ಘನ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.  ಈ ವಸ್ತು ಸ್ಪಟಿಕವನ್ನು ಹೋಲುತ್ತಿದ್ದು, ಪರೀಕ್ಷೆಗಾಗಿ ವೈದ್ಯಕೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News