Deepika Padukone Baby Name: ಬಿ-ಟೌನ್ ಪವರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದಂಪತಿ ತಮ್ಮ ಮನೆಗೆ ಲಕ್ಷ್ಮಿಯನ್ನು ಸ್ವಾಗತಿಸಿದ್ದರು. ಇದೀಗ ಒಂದೂವರೆ ತಿಂಗಳ ನಂತರ, ತಮ್ಮ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಬಿ-ಟೌನ್ ಪವರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದಂಪತಿ ತಮ್ಮ ಮನೆಗೆ ಲಕ್ಷ್ಮಿಯನ್ನು ಸ್ವಾಗತಿಸಿದ್ದರು. ಇದೀಗ ಒಂದೂವರೆ ತಿಂಗಳ ನಂತರ, ತಮ್ಮ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸೆಪ್ಟೆಂಬರ್ 8 ರಂದು ದೀಪಿಕಾ ಪಡುಕೋಣೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರಣವೀರ್ ಸಿಂಗ್ ತಮ್ಮ ಮಗಳ ಆಗಮನದ ಬಗ್ಗೆ ಅನೇಕ ಬಾರಿ ಸಂತೋಷವನ್ನು ವ್ಯಕ್ತಪಡಿಸಿದ್ದು ತಿಳಿದೇ ಇದೆ. ಆದರೆ ದೀಪಿಕಾ ಆಗಲಿ, ರಣವೀರ್ ಆಗಲಿ... ತಮ್ಮ ರಾಜಕುಮಾರಿಯ ಯಾವುದೇ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರಲಿಲ್ಲ.
ಇದೀಗ ಫೋಟೋ ಮಾತ್ರವಲ್ಲದೆ, ತಮ್ಮ ಮನೆಯ ಮಹಾಲಕ್ಷ್ಮೀಯ ಮುದ್ದಾದ ಹೆಸರನ್ನು ಸಹ ರಿವೀಲ್ ಮಾಡಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮೊದಲ ದೀಪಾವಳಿಯನ್ನು ಮಗಳೊಂದಿಗೆ 31 ಅಕ್ಟೋಬರ್ 2024 ರಂದು ಆಚರಿಸಿದ್ದಾರೆ. ಇನ್ನು ಕಳೆದ ದಿನ ಅಂದರೆ ನವೆಂಬರ್ 1 ರಂದು, ನಟಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತನ್ನ ರಾಜಕುಮಾರಿಯ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
ಫೋಟೋದಲ್ಲಿ ಪುಟ್ಟ ರಾಜಕುಮಾರಿ ಕೂಡ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿರುವುದು ಕಾಣಬಹುದು. ಇನ್ನು ಮಗುವಿನ ಫೇಸ್ ರಿವೀಲ್ ಮಾಡಿಲ್ಲ. ಬದಲಾಗಿ ಸುಂದರವಾದ ಪುಟ್ಟಪುಟ್ಟ ಪಾದಗಳ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಇನ್ನು ದೀಪಿಕಾ ಮತ್ತು ರಣವೀರ್ ಸಿಂಗ್ ತಮ್ಮ ಮಗಳಿಗೆ ತುಂಬಾ ಮುದ್ದಾಗಿ ಹೆಸರಿಟ್ಟಿದ್ದಾರೆ. ತಂದೆ-ತಾಯಿಯ ಹೆಸರನ್ನು ಜೋಡಿಸಿ ನಾಮಕರಣ ಮಾಡುವ ಟ್ರೆಂಡ್ ಬ್ರೇಕ್ ಮಾಡಿರುವ ಈ ಜೋಡಿ, ತಮ್ಮ ಮಗುವಿಗೆ ವಿಶಿಷ್ಟವಾದ ಹೆಸರನ್ನು ನೀಡಿದ್ದಾರೆ.
ʼದುವಾʼ ಎಂದು ತಮ್ಮ ಮಗುವಿಗೆ ಹೆಸರಿಟ್ಟಿದ್ದು, ಶೀರ್ಷಿಕೆಯಲ್ಲಿ ನಟಿ ಅದರ ಅರ್ಥವನ್ನೂ ವಿವರಿಸಿದ್ದಾರೆ. "ದುವಾ ಪಡುಕೋಣೆ ಸಿಂಗ್. ದುವಾ ಎಂದರೆ ಪ್ರಾರ್ಥನೆ. ಈಕೆ ನಮ್ಮಿಬ್ಬರ ಪ್ರಾರ್ಥನೆಯ ಫಲ. ಹೀಗಾಗಿ ಈ ಹೆಸರಿಟ್ಟಿದ್ದೇವೆ. ನಮ್ಮ ಹೃದಯಗಳು ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿವೆ. ದೀಪಿಕಾ ಮತ್ತು ರಣವೀರ್" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.