Virat Kohli social media post: ಇತ್ತೀಚೆಗೆಯಷ್ಟೇ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ವಿಚ್ಛೇದನ ಘೋಷಿಸಿದ್ದರು. ಇದರ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಾಡಿದ ಪೋಸ್ಟ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಕ್ರಿಕೆಟ್ ಲೋಕವನ್ನೇ ಅರೆಕ್ಷಣ ಭಯಭೀತಗೊಳಿಸಿದೆ. ಆ ಪೋಸ್ಟ್ ಶೇರ್ ನೋಡಿ, ಅನುಷ್ಕಾ ಶರ್ಮಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾವಿಸಿದ್ದೆವು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಇತ್ತೀಚೆಗೆಯಷ್ಟೇ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ವಿಚ್ಛೇದನ ಘೋಷಿಸಿದ್ದರು. ಇದರ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮಾಡಿದ ಪೋಸ್ಟ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಕ್ರಿಕೆಟ್ ಲೋಕವನ್ನೇ ಅರೆಕ್ಷಣ ಭಯಭೀತಗೊಳಿಸಿದೆ. ಆ ಪೋಸ್ಟ್ ಶೇರ್ ನೋಡಿ, ಅನುಷ್ಕಾ ಶರ್ಮಾರಿಂದ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಭಾವಿಸಿದ್ದೆವು ಎಂದು ನೆಟ್ಟಿಗರು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.
ಅಷ್ಟಕ್ಕೂ ಆ ಪೋಸ್ಟ್ ಏನು? ಅದರಲ್ಲಿ ಏನಿತ್ತು? ಜನ ಭಯಪಟ್ಟಿದ್ದೇಕೆ? ಈ ಎಲ್ಲಾ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರ ಇಲ್ಲಿ ನೀಡಲಿದ್ದೇವೆ.
ವಿರಾಟ್ ಕೊಹ್ಲಿ ಬ್ರಾಂಡ್ ಎಂಡಾರ್ಸ್ಮೆಂಟ್ ಅನ್ನು ಪೋಸ್ಟ್ ಮಾಡಿದ್ದು, ಅವರ ಅಭಿಮಾನಿಗಳು ಕೆಲವು ಸೆಕೆಂಡುಗಳ ಕಾಲ ದಿಗ್ಭ್ರಮೆಗೊಂಡಿದ್ದರು. ಈ ಪೋಸ್ಟ್ ಫ್ಯಾಷನ್ ಬ್ರಾಂಡ್ ʼವ್ರೋಗ್ನ್ʼಗಾಗಿತ್ತು. ಈ ಪೋಸ್ಟ್ನಲ್ಲಿ ಬಿಳಿ ಪೇಪರ್ ಬ್ಯಾಗ್ರೌಂಡ್ನಲ್ಲಿ ಇತ್ತು. ಸಾಮಾನ್ಯವಾಗಿ ಇಂತಹ ಹಿನ್ನೆಲೆಯಲ್ಲಿ ವಿರಾಟ್ ಪೋಸ್ಟ್ ಶೇರ್ ಮಾಡುವುದು ತೀರಾ ವೈಯಕ್ತಿಕ ವಿಚಾರಗಳನ್ನಷ್ಟೇ.
ಉದಾಹರಣೆಗೆ, ಇತ್ತೀಚೆಗೆ ನಿವೃತ್ತಿ ಘೋಷಣೆಯಾಗಿರಬಹುದು, ತಮ್ಮ ಪುತ್ರ ಅಕಾಯ್ ಜನನದ ಸಂತಸದ ವಿಚಾರವನ್ನೂ ಸಹ ಇದೇ ರೀತಿ ಬ್ರಾಕ್ಗ್ರೌಂಡ್ ಇರುವ ಪೋಸ್ಟ್ನಲ್ಲಿ ಶೇರ್ ಮಾಡಿದ್ದರು.
ಇದೀಗ ಅಂತಹದ್ದೇ ಬಿಳಿ ಹಿನ್ನೆಲೆ ಹೊಂದಿರುವ ಪೋಸ್ಟ್ನಲ್ಲಿ ವಿರಾಟ್ ಹೀಗೆ ಬರೆದಿದ್ದರು; "ಹಿಂತಿರುಗಿ ನೋಡಿದಾಗ, ನಾವು ವಿಭಿನ್ನವಾಗಿದ್ದೇವೆ ಎಂದನಿಸುತ್ತದೆ. ಜನರು ನಮ್ಮನ್ನು ಅವರ ಇಚ್ಛೆಯಂತೆ ನೋಡಲು ಬಯಸುತ್ತಾರೆ. ಆದರೆ ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ. ನಾವು ಸಮಯದೊಂದಿಗೆ ಬದಲಾಗಿದ್ದೇವೆ ಆದರೆ ಯಾವಾಗಲೂ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತೇವೆ. ನಿಜವಾಗಿಯೂ? ನಾನು ತಲೆಕೆಡಿಸಿಕೊಳ್ಳಲಿಲ್ಲ. ನಾವು ಯಾರೆಂದು ಕಂಡುಹಿಡಿಯುವಲ್ಲಿ ನಿರತರಾಗಿದ್ದೇವೆ. ಹತ್ತು ವರ್ಷಗಳ ಏರಿಳಿತಗಳು ಮತ್ತು ಸಾಂಕ್ರಾಮಿಕ ರೋಗವೂ ನಮ್ಮನ್ನು ಅಲುಗಾಡಿಸಲಿಲ್ಲ. ಯಾರಾದರೂ ನಮ್ಮನ್ನು ವಿಭಿನ್ನವಾಗಿ ಭಾವಿಸಿದರೆ, ಅದು ನಮ್ಮ ಶಕ್ತಿ. ಆದ್ದರಿಂದ ನಮ್ಮ ಹತ್ತು ವರ್ಷಗಳ ಕೆಲಸಗಳನ್ನು ನಮ್ಮ ರೀತಿಯಲ್ಲಿ ಮಾಡುವುದು ʼವ್ರೋಗ್ನ್ʼನ ಉದ್ದೇಶ" ಎಂದು ಬರೆದುಕೊಂಡಿದ್ದಾರೆ.
ವಿರಾಟ್ ಅವರ ಈ ಪೋಸ್ಟ್ಗೆ ಹಲವು ಕಾಮೆಂಟ್ಗಳು ಬಂದಿವೆ. ನಿವೃತ್ತಿಯ ಶುಭಾಶಯಗಳು ಅಣ್ಣಾ ಎಂದು ಒಬ್ಬರು ಬರೆದಿದ್ದರೆ, ಇನ್ನೊಬ್ಬರು "ನೀವು ನಿವೃತ್ತಿ ಹೊಂದಿದ್ದೀರಾ?" ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನೊಂದು ಕಾಮೆಂಟ್, "ಮಿನಿ ಹೃದಯಾಘಾತ" ಎಂದಿದೆ. ಮತ್ತೊಂದು ಕಾಮೆಂಟ್ನಲ್ಲಿ, "ಎಆರ್ ರೆಹಮಾನ್ ಪ್ರಕಾರವೇ ನೀವು ಸಹ ಅನುಷ್ಕಾಗೆ ಡಿವೋರ್ಸ್ ನೀಡುತ್ತೀರಿ ಎಂದು ನಾನು ಭಾವಿಸಿದೆ" ಎಂದು ಬರೆದಿದ್ದಾರೆ.
ಮತ್ತೊಬ್ಬ ಫಾಲೋವರ್, "ದಯವಿಟ್ಟು ಈ ರೀತಿಯ ಬ್ಯಾಕ್ಗ್ರೌಂಡ್ನಲ್ಲಿ ಪೋಸ್ಟ್ ಶೇರ್ ಮಾಡಬೇಡಿ. ಎದೆ ನಡುಗುತ್ತದೆ" ಎಂದು ಬರೆದುಕೊಂಡಿದ್ದಾರೆ.