ಮದುವೆಗೂ ಮುನ್ನವೇ ಗರ್ಭಿಣಿ.. ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸ್ಟಾರ್.. ಒಂದೇ ಒಂದು ತಪ್ಪಿನಿಂದ ಇಂಡಸ್ಟ್ರಿಯಿಂದಲೇ ದೂರವಾದ ಪ್ರಖ್ಯಾತ ನಟಿ ಈಕೆ!!

Star Actress ileana d'cruz: ಮೊಟ್ಟ ಮೊದಲು ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದ ನಾಯಕಿ. ಎರಡೇ ಸಿನಿಮಾಗಳಿಂದ ಸ್ಟಾರ್‌ ಪಟ್ಟ... ಆದರೆ ತಪ್ಪು ನಿರ್ಧಾರಗಳಿಂದ ಅವರ ವೃತ್ತಿಜೀವನ ನಾಶಮಾಡಿಕೊಂಡು ಮದುವೆಗೂ ಮುನ್ನವೇ ತಾಯಿಯಾದ ಈ ನಟಿ ಇಂಡಸ್ಟ್ರೀಯಿಂದಲೇ ದೂರ ಉಳಿದಿದ್ದಾರೆ.

Written by - Savita M B | Last Updated : Dec 2, 2024, 10:15 PM IST
  • ಕೆಲವೇ ಕೆಲವು ನಾಯಕಿಯರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ.
  • ಈ ಬ್ಯೂಟಿಯ ಚೊಚ್ಚಲ ಸಿನಿಮಾ ಹಿಟ್ ಆಗಿತ್ತು.
ಮದುವೆಗೂ ಮುನ್ನವೇ ಗರ್ಭಿಣಿ.. ಒಂದು ಕೋಟಿ ಸಂಭಾವನೆ ಪಡೆದ ಮೊದಲ ಸ್ಟಾರ್.. ಒಂದೇ ಒಂದು ತಪ್ಪಿನಿಂದ ಇಂಡಸ್ಟ್ರಿಯಿಂದಲೇ ದೂರವಾದ ಪ್ರಖ್ಯಾತ ನಟಿ ಈಕೆ!! title=

ileana d'cruz: ಕೆಲವೇ ಕೆಲವು ನಾಯಕಿಯರು ರಾತ್ರೋರಾತ್ರಿ ಸ್ಟಾರ್ ಆಗುತ್ತಾರೆ. ಮೊದಲ ಚಿತ್ರಕ್ಕೆ ಖ್ಯಾತಿ ಬಂದು ಹೋಗುತ್ತದೆ. ಈಗ ನಾವು ಅಂತಹ ಅದೃಷ್ಟವಂತ ನಟಿಯ ಬಗ್ಗೆ ಮಾತನಾಡುತ್ತಿದ್ದೇವೆ. ಈ ಬ್ಯೂಟಿಯ ಚೊಚ್ಚಲ ಸಿನಿಮಾ ಹಿಟ್ ಆಗಿತ್ತು. ಎರಡನೇ ಚಿತ್ರದೊಂದಿಗೆ ಸ್ಟಾರ್‌ ಪಟ್ಟವೇ ಸಿಕ್ಕಿತ್ತು.. ಎಲ್ಲಾ ಟಾಲಿವುಡ್ ನಟರ ಎದುರು ನಟಿಸಿದ ಈ ಖ್ಯಾತ ನಟಿ ಅನಿರೀಕ್ಷಿತವಾಗಿ ಇಂಡಸ್ಟ್ರಿ ತೊರೆಯಬೇಕಾಯಿತು..  

ಸಿನಿರಂಗದಿಂದ ಬ್ಯಾನ್‌ ಆಗಿದ್ದ ನಟಿ ಬೇರಾರೂ ಅಲ್ಲ.. ಇಲಿಯಾನಾ ಡಿಕ್ರೂಜ್... ಈ ಗೋವಾದ ಸುಂದರಿಯನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ನಿರ್ದೇಶಕ ವೈವಿಎಸ್ ಚೌಧರಿ. 2006 ರಲ್ಲಿ, ರಾಮ್ ಪೋತಿನೇನಿ ನಾಯಕನಾಗಿ ನಟಿಸಿದ ದೇವದಾಸು ಚಿತ್ರದ ಮೂಲಕ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. ಆ ಚಿತ್ರ ಹಿಟ್ ಟಾಕ್ ಪಡೆದುಕೊಂಡಿತ್ತು.. ಅದೇ ವರ್ಷದಲ್ಲಿ, ಅವರು ಪೋಕಿರಿ ಮೂಲಕ ದೊಡ್ಡ ಹಿಟ್ ಪಡೆದರು. ಎರಡನೇ ಸಿನಿಮಾದಲ್ಲಿ ಆಕೆಗೆ ಮಹೇಶ್ ಬಾಬು ಅವರಂತಹ ಸ್ಟಾರ್ ಎದುರು ಅವಕಾಶ ಸಿಕ್ಕಿತು. 

ಇದನ್ನೂ ಓದಿ-ನಟಿ ಶೋಭಿತಾ ಶಿವಣ್ಣ ಸಾವಿನ ಪ್ರಕರಣಕ್ಕೆ ಟ್ವಿಸ್ಟ್‌.. ಪೋಲಿಸರಿಗೆ ಸಿಕ್ಕ ಡೆತ್‌ ನೋಟ್‌ನಲ್ಲಿ ಏನಿತ್ತು ಗೊತ್ತಾ..?

ಈ ಸಿನಿಮಾದ ನಂತರ ಯುವಜನತೆ ಇಲಿಯಾನಾ ಪ್ರೀತಿಯಲ್ಲಿ ಮುಳುಗಿದ್ದರು.. ಹೀಗಾಗಿ ನಟಿ ರಾತ್ರೋರಾತ್ರಿ ಸ್ಟಾರ್ ಆದರು. ಎನ್‌ಟಿಆರ್, ಪ್ರಭಾಸ್, ಪವನ್ ಕಲ್ಯಾಣ್, ಅಲ್ಲು ಅರ್ಜುನ್ ಮುಂತಾದ ಸ್ಟಾರ್‌ಗಳ ಜೊತೆ ನಟಿಸುವ ಅವಕಾಶವನ್ನೂ ಗಿಟ್ಟಿಸಿಕೊಂಡರು.. 

ಇದನ್ನೂ ಓದಿ-ಸಾನ್ವಿ ಸುದೀಪ್‌ ಟ್ಯಾಟೂ ವಿಡಿಯೋ ವೈರಲ್‌.. ಯಾರಿದು ʻಪಿಕುʼ, ಇವರ ಹೆಸರನ್ನು ಹಚ್ಚೆ ಹಾಕಿಸಿದ್ದೇಕೆ ಕಿಚ್ಚನ ಮಗಳು!

ಟಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿಯಾಗಿದ್ದ ಇಲಿಯಾನಾ.. ಕೆರಿಯರ್ ಉತ್ತುಂಗದಲ್ಲಿರುವಾಗಲೇ ಬಾಲಿವುಡ್ ಗೆ ಹೋದರು. ಈ ನಿರ್ಧಾರವೇ ಅವಳನ್ನು ಹೆಚ್ಚು ನೋಯಿಸಿತು.. 

ವೃತ್ತಿ ಜೀವನದಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡಿದ್ದ ಇಲಿಯಾನಾ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೇ.. ಇವರು ಮದುವೆಯಾಗದೆ ತಾಯಿಯಾದರು.. ಈ ವಿಚಾರವನ್ನ ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಕೂಡಾ ಮಾಡಿದ್ದರು.. ಆದರೆ ಅದಕ್ಕೆ ಕಾರಣ ಯಾರು ಎನ್ನುವುದನ್ನು ಇಲಿಯಾನಾ ಹೇಳಿರಲಿಲ್ಲ.. ಇತ್ತೀಚೆಗಷ್ಟೇ ಇಲಿಯಾನಾ ಗಂಡು ಮಗುವಿಗೆ ಜನ್ಮ ನೀಡಿದ ಬೆನ್ನಲ್ಲೇ ತಮ್ಮ ಪತಿ ಯಾರೆಂದು ಪರಿಚಯಿಸಿದರು..   

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News