Powerful Rajayoga: ಹೊಸ ವರ್ಷದ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ಒಟ್ಟೊಟ್ಟಿಗೆ ಹಲವು ಪವರ್ಫುಲ್ ರಾಜಯೋಗಗಳು ನಿರ್ಮಾಣವಾಗಲಿದ್ದು ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ.
Powerful Rajayoga: ಜನವರಿಯಲ್ಲಿ ಅತ್ಯಂತ ಮಂಗಳಕರ ಯೋಗಗಳು ಒಟ್ಟಿಗೆ ನಿರ್ಮಾಣವಾಗುತ್ತಿದ್ದು, ಮೂರು ರಾಶಿಯವರ ಬಾಳಿನಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎನ್ನಲಾಗುತ್ತಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ವೈದಿಕ ಪಂಚಾಂಗದ ಪ್ರಕಾರ, ಹೊಸ ವರ್ಷ 2025ರ ಜನವರಿ ತಿಂಗಳಿನಲ್ಲಿ ಜನವರಿ 04ರಂದು ಧನು ರಾಶಿಗೆ ಪ್ರವೇಶಿಸಲಿರುವ ಬುಧ ಮತ್ತೆ ಜನವರಿ 24ರಂದು ಮಕರ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಈ ಮಧ್ಯೆ ಜನವರಿ 14ರಂದು ಸೂರ್ಯ ಮಕರ ರಾಶಿಗೆ ಕಾಲಿಡಳಿದ್ದಾನೆ. ಇದರಿಂದಾಗಿ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಲಿದೆ.
ಜನವರಿಯಲ್ಲೇ ಮಂಗಳ ಗ್ರಹ ಮಿಥುನ ರಾಶಿಗೆ ಪ್ರವೇಶಿಸಿದರೆ, ಶುಕ್ರ ಮೀನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. ಒಂದೆಡೆ ಮೂಲ ತ್ರಿಕೋನ ರಾಶಿಯಲ್ಲಿ ಶಶ ಮಹಾಪುರುಷ ರಾಜಯೋಗ ನಿರ್ಮಾಣವಾದರೆ, ಶುಕ್ರ ರಾಹು ಯುತಿಯಿಂದ ಮೀನ ರಾಶಿಯಲ್ಲಿ ಮಾಲವ್ಯ ರಾಜಯೋಗ ನಿರ್ಮಾಣವಾಗುತ್ತಿದೆ.
ಮಕರ ರಾಶಿಯಲ್ಲಿ ಸೂರ್ಯ ತ್ರಿಗ್ರಾಹಿಯೋಗ ಜೊತೆಗೆ ಬುಧ, ಚಂದ್ರ, ರಾಹು, ಮಂಗಳರೊಟ್ಟಿಗೆ ನವಪಂಚಮ ರಾಜಯೋಗವನ್ನು ಸೃಷ್ಟಿಸಲಿದ್ದಾನೆ.
ಈ ರೀತಿಯಾಗಿ 2025ರ ಜನವರಿ ತಿಂಗಳಿನಲ್ಲಿ ಈ ಎಲ್ಲಾ ರಾಜ ಯೋಗಗಳು ಒಟ್ಟಿಗೆ ರೂಪುಗೊಳ್ಳುವುದರಿಂದ ಈ ಸಮಯವು ಕೆಲವು ರಾಶಿಯವರ ಬದುಕಿನಲ್ಲಿ ಭಾರೀ ಅದೃಷ್ಟವನ್ನು ತರಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: ಜನವರಿ ತಿಂಗಳಿನಲ್ಲಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಉದ್ಯೋಗದಲ್ಲಿ ಉನ್ನತ ಹುದ್ದೆ ಅಲಂಕರಿಸುವುದರ ಜೊತೆಗೆ ದಿಢೀರ್ ಧನಲಾಭದಿಂದ ಆರ್ಥಿಕ ಸ್ಥಿತಿ ಸುಧಾರಿಸಲಿದೆ.
ತುಲಾ ರಾಶಿ: ವರ್ಷದ ಮೊದಲ ತಿಂಗಳು ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸನ್ನು ನೀಡಲಿದೆ. ಜೀವನದಲ್ಲಿ ಭೌತಿಕ ಸೌಕರ್ಯಗಳು ಹೆಚ್ಚಾಗಿ ಬೇರೆಡೆ ಸಿಲುಕಿರುವ ಹಣ ಮರಳಿ ಕೈ ಸೇರಲಿದೆ. ಪ್ರೀತಿಯ ಜೀವನವು ಆನಂದದಾಯಕವಾಗಿರಲಿದೆ.
ಕುಂಭ ರಾಶಿ: ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಪವರ್ಫುಲ್ ರಾಜಯೋಗಗಳ ರೂಪುಗೊಳ್ಳುವಿಕೆ ಈ ರಾಶಿಯವರಿಗೆ ವಿಶೇಷ ಪ್ರಯೋಜನಗಳನ್ನು ನೀಡಲಿದೆ. ಈ ವೇಳೆ ಸರ್ಕಾರಿ ಕೆಲಸದಿಂದ ಲಾಭವಾಗಬಹುದು. ಶನಿ ಆಶೀರ್ವಾದರಿಂದ ಜೀವನದಲ್ಲಿ ಸಮಸ್ಯೆಗಳು ಸರಿದು ಸಂತೋಷದ ಕಾಲ ಸನ್ನಿಹಿತವಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.